ಅಲೋಶಿಯಸ್ ವಿವಿಯಲ್ಲಿ ಗ್ಸೇವಿಕಾನ್ 2K25 ವಿಜ್ಞಾನ ಹಬ್ಬ

Upayuktha
0


ಮಂಗಳೂರು: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಜ್ಞಾನ ಹಬ್ಬ ‘ಗ್ಸೇವಿಕಾನ್ 2K25’ ಅನ್ನು ದಿನಾಂಕ 10ನೇ ಸೆಪ್ಟಂಬರ್ 2025ರಂದು ವಿವಿಯ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು. ಈ ಹಬ್ಬದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಅನೇಕ ವೈಜ್ಞಾನಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜ್ಞಾನ ಮಾಡೆಲ್ ಮೇಕಿಂಗ್, ರಸಪ್ರಶ್ನೆ, ಇನೋ ಎಕ್ಸ್‍ಪೋ, ರೀಸೈಕಲ್ಡ್ ರೋಯಲಿಟಿ, ಸಯನ್ಸ್ ಪಿಚ್, ಫ್ಲೇವರ್ಸ್ ವಿಯೋಂಡ್ ಫ್ಲೇಮ್ಸ್, ಜೆನ್ ಫ್ರೇಮ್ಸ್, ಕೆಟಲಿಸ್ಟ್ ಕ್ವಿಜ್, ಇನೋವಿಷನ್, ಮೈಂಡ್ ಕ್ವೆಸ್ಟ್, ಟ್ರಿಟೆಕ್ ಟ್ರೈಲ್ಸ್, ಸೈನ್ಸ್ ಕ್ವೆಸ್ಟ್ ಇವೇ ಮೊದಲಾದ ಹತ್ತು ಸ್ಪರ್ಧೆಗಳಿದ್ದವು. ಈ ಸ್ಪರ್ಧೆಯಲ್ಲಿ ಕಾಲೇಜಿನ ವಿಜ್ಞಾನದ ವಿದ್ಯಾರ್ಥಿಗಳ ಹಲವು ತಂಡಗಳು ಸ್ಪರ್ಧಿಸಿದ್ದವು.


ಈ ವಿಜ್ಞಾನ ಹಬ್ಬದ ಉದ್ಘಾಟನೆಯನ್ನು ಕಾಲೇಜಿನ ಹೆಮ್ಮೆಯ ಹಳೆವಿದ್ಯಾರ್ಥಿ ಹಾಗೂ ಎನ್‍ಐಟಿಕೆ ಸುರತ್ಕಲ್ ಇಲ್ಲಿನ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ರಾಮಚಂದ್ರ ಭಟ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.



ತದನಂತರ ಮಾತನಾಡಿದ ಅವರು ವಿಜ್ಞಾನದ ವಿದ್ಯಾರ್ಥಿಗಳಿಗಿರುವ ವಿಪುಲ ಅವಕಾಶಗಳನ್ನು ತೆರೆದಿಟ್ಟರು. ತಮ್ಮ ಜೀವನದ ಉದಾಹರಣೆಗಳೊಂದಿಗೆ ವಿಜ್ಞಾನದ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಆಧುನಿಕ ಜಗತ್ತಿನ ಕೌಶಲ್ಯಗಳನ್ನು ಬಳಸಿಕೊಂಡು ದೊಡ್ಡ ಸಾಧನೆಯನ್ನು ಮಾಡಬೇಕೆಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಅವರು ತಮ್ಮ ನುಡಿಗಳ ಮೂಲಕ ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನವನ್ನು ರಚನಾತ್ಮಕ ಕಾರ್ಯಗಳಿಗೆ ಬಳಸಿ ಶಾಂತಿ, ಸೌಹಾರ್ದತೆಯ ಮೌಲ್ಯಗಳಿಗೆ ಬೆಲೆ ನೀಡಬೇಕೆಂದು ಕರೆಯಿತ್ತರು. ಕಾರ್ಯಕ್ರಮದಲ್ಲಿ ಸದ್ಯದಲ್ಲೇ ನಿವೃತ್ತಿಯಾಗಲಿರುವ ಕ್ಸೇವಿಯರ್  ಬ್ಲಾಕಿನ ನಿರ್ದೇಶಕ ಡಾ. ಈಶ್ವರ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದ ಸಂಯೋಜಕ ಗ್ಲೇವಿನ್ ಡಿಸೋಜ ಸ್ವಾಗತಿಸಿದರು. ಕಾಲೇಜಿನ ಕುಲಸಚಿವರಾದ ಡಾ. ಆಲ್ವಿನ್ ಡೇಸಾ, ವಿವಿಯ ಕುಲಸಚಿವರಾದ ಡಾ. ರೊನಾಲ್ಡ್ ನಜರೆತ್, ವಿಜ್ಞಾನ ವಿಭಾಗದ ಡೀನ್, ಡಾ. ಅರುಣ ಕಲ್ಕೂರ್, ಸಹಸಂಯೋಜಕಿ ಶರ್ಲಿ ಅಂದ್ರಾದೆ, ಹಾಗೂ ವಿದ್ಯಾರ್ಥಿ ಸಂಯೋಕಜರಾದ ನಿಖಿಲ್ ಮತ್ತು ಪ್ರಾಪ್ತಿ ವೇದಿಕೆಯಲ್ಲಿಉಪಸ್ಥಿತರಿದ್ದರು.


ವಿಜ್ಞಾನ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮವು ಮೂಡಿಬಂದಿತ್ತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top