ಮಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಇವರ ಸಹಯೋಗದೊಂದಿಗೆ ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು, ಇಲ್ಲಿ ‘ಸ್ಮಾರ್ಟ್ ವೈದ್ಯಕೀಯ ಉಪಕರಣಗಳು ಮತ್ತು ತಂತ್ರಜ್ಞಾನಗಳ ಮೂಲಕ ಆರೋಗ್ಯ ಸುಧಾರಿಸುವುದು’ ಎಂಬ ಶಿರ್ಷಿಕೆಯಡಿಯಲ್ಲಿ ಎರಡು ದಿನಗಳ ರಾಷ್ಟೀಯ ವಿಚಾರಗೋಷ್ಠಿ ಯನ್ನು ಸೆಪ್ಟೆಂಬರ್ 11 ಮತ್ತು 12 , 2025 ರಂದು ಕೊಂಕಣಿ ಭಾಷೆಯಲ್ಲಿ ಆಯೋಜಿಸಲಾಗಿದೆ.
ಕೊಂಕಣಿ ಭಾಷೆಯಲ್ಲಿ ನಡೆಯುವ ಪ್ರಥಮ ವಿಜ್ಞಾನ ಸಮ್ಮೇಳನ ಇದಾಗಿದೆ. ಈ ವಿಚಾರ ಸಂಕಿರಣವು ಭಾರತೀಯ ಭಾಷೆಗಳ ಪ್ರಗತಿ ಮತ್ತು ಪೋಷಣೆಗಾಗಿ ಸ್ಪಂದಿಸುವ (AICTE-VAANI) ಯೋಜನೆಯಡಿ ಯಲ್ಲಿ ಪ್ರಾಯೋಜಿತವಾಗಿದೆ.
ಈ ವಿಚಾರಸಂಕಿರಣವು ವೈದ್ಯಕೀಯ ವಲಯದ ಡಾಕ್ಟರುಗಳು, ಸಂಶೋಧಕರೂ, ತಂತ್ರಜ್ಞರೂ, ಶಿಕ್ಷಣ ವಲಯದ ವಿದ್ವಾಂಸರೂ , ಮತ್ತು ವಿದ್ಯಾರ್ಥಿಗಳು ಬೆರೆಯುವ ವಿಶಿಷ್ಟ ಸಮಾವೇಶವಾಗಿದೆ. ಇಲ್ಲಿ ವೈದ್ಯಕೀಯ ವಲಯದ ನೂತನ ಉಪಕರಣಗಳು, ಅರೋಗ್ಯ ಸುಧಾರಣೆಯ ಸಾಧನಗಳ ಬಗ್ಗೆ ಕೊಂಕಣಿ ಭಾಷೆಯಲ್ಲಿ ಸಂವಹನ ನಡೆಯಲಿದೆ.
ಈ ಸಮಾವೇಶವು ವೈದ್ಯಕೀಯ ವಲಯದ ಬೆಳವಣಿಗೆಗಳು, ಮತ್ತು ಜನಮಾನಸದ ನಡುವೆ ಇರಬಹುದಾದ ಅಸಮತೋಲನವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಈ ಕಾರ್ಯಕ್ರಮವು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನಗಳ ನಡುವಿನ ಅಂತರವನ್ನು ಕಡಿಮೆ ಮಾಡಲು, ನಾವೀನ್ಯತೆಯನ್ನು ಬೆಳೆಸಲು, ಅಂತರಶಿಸ್ತೀಯ ಸಂಶೋಧನೆಯನ್ನು ಪ್ರೋತ್ಸಾಹಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಸ್ಥಳೀಯ, ಹಾಗೂ ಪರಿಣಾಮಕಾರಿ ಆರೋಗ್ಯ ಪರಿಹಾರಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.
ಡಾ ಎಡ್ವರ್ಡ್ ನಜರೆತ್ ಪ್ರೊಫೆಸರ್, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಇವರು ಮುಖ್ಯ ಅಥಿತಿಗಳಾಗಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಾ. ರಾಕೇಶ್ ಸೆರಾ, ಸಹಾಯಕ ಪ್ರಾಧ್ಯಾಪಕರು, ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ; ಡಾ ಜಾಯ್ಲೀನ್ ಡಿ ಅಲ್ಮೇಡಾ, ಪ್ರೊಫೆಸರ್, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು; ಡಾ ನಿತಿನ್ ಪಿ ಲೋಬೋ, ಹಿರಿಯ ವಿಜ್ಞಾನಿ, ಕೇಟರ್ಸ್, ಚೆನ್ನೈ; ಡಾ ರಿತೇಶ್ ಡಿಕುನ್ಹಾ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು; ಡಾ ಸಜ್ಜನ್ ಶೆಣೈ, ಸಂಧಿವಾತ ತಜ್ಞ, ಕಸ್ತೂರ್ಬಾ ವೈದ್ಯಕೀಯ ಕಾಲೇಜು; ಡಾ ವೀಣಾ ಜಾಸ್ಮಿನ್ ಪಿಂಟೋ, ಸಹ ಪ್ರಾಧ್ಯಾಪಕರು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು; ಡಾ ಶಶಿಧರ್ ಕಿಣಿ ಕೆ, ಪ್ರೊಫೆಸರ್, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ; ಮತ್ತು ಡಾ ರುಡಾಲ್ಫ್ ಜೋಯರ್ ನೊರೊನ್ಹಾ, ಜನರಲ್ ಮ್ಯಾನೇಜರ್, MRPL ಈ ಸಮಾವೇಶದಲ್ಲಿ ತಮ್ಮ ಪ್ರಬಂಧ ಮಂಡಿಸಲಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ S. J. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಡಾ. ಆಲ್ವಿನ್ ಡೇಸಾ, (ಕುಲಸಚಿವರು, ಸಂತ ಅಲೋಸಿಯಸ್ ಸ್ವಾಯತ್ತ ಕಾಲೇಜು); ಡಾ ರೊನಾಲ್ಡ್ ನಝರತ್ , (ಕುಲಸಚಿವರು, ಸಂತ ಅಲೋಸಿಯಸ್ ಪರಿಗಣಿತ ವಿಶ್ವವಿದ್ಯಾಲಯ); ಡಾ. ರೀಟಾ ಕ್ರಾಸ್ತ , (ಕಾರ್ಯಕ್ರಮ ಸಂಯೋಜಕರು); ಶ್ರೀಮತಿ ಫ್ಲೋರಾ ಕಾಸ್ತೆಲಿನೊ, (ಸಹ ಸಂಯೋಜಕರು); ಡಾ. ನೀಲಕಂಠನ್ ವಿ. ಕೆ. , (ಭೌತಶಾಸ್ತ್ರ ವಿಭಾಗ ಮುಖ್ಯಸ್ಥರು) ಹಾಗೂ ಶ್ರೀಮತಿ ಚಂದ್ರಕಲಾ (ಮಾಹಿತಿ ಸಂಪರ್ಕ ವಿಭಾಗ) ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
