ಮಂಗಳೂರು: ಸೇವಾ ಭಾರತಿ (ರಿ) ಮಂಗಳೂರು,ಎಮ್.ಸಿ.ಎಫ್.ಮಂಗಳೂರು ಇವರು 34 ನೇ ವರ್ಷದ ಸೇವಾ ಕಾರ್ಯದ ಸವಿನೆನಪಿಗಾಗಿ ಧನುಷ್ ಫ್ರೆಂಡ್ಸ್ (ರಿ),ಕೋಡಿಕಲ್ ಇವರ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇಲ್ಲಿಯ ತಜ್ಞ ವೈದ್ಯರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ದ.ಕ.ಹಿರಿಯ ಪ್ರಾಥಮಿಕ ಶಾಲೆ,ಕೋಡಿಕಲ್ ಇಲ್ಲಿ ನಡೆಸಲಾಯಿತು.
ಡಾ.ವೈ.ಭರತ್ ಶೆಟ್ಟಿ, ಶಾಸಕರು, ಗಿರೀಶ್‍ಎಸ್, ಮುಖ್ಯ ಉತ್ಪಾದನಾ ಅಧಿಕಾರಿ, ಎಂ.ಸಿ.ಎಫ್, ರಾಕೇಶ್‍ರಾವ್, ಆರ್.ಟಿ.ಒ.ಆಫೀಸ್, ಎ.ಸೀತಾರಾಮ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಮಹಾಗಣಪತಿ ಭಜನಾ ಮಂದಿರ ,ಕೋಡಿಕಲ್, ಕಿರಣ್‍ಕುಮಾರ್,ಮಾಜಿ ಮ.ನ.ಪ ಸದಸ್ಯರು, ಹೆಚ್.ನಾಗರಾಜ ಭಟ್, ಕಾರ್ಯದರ್ಶಿ ಸೇವಾಭಾರತಿ, ವಿನೋದ್ ಶೆಣೈ, ವಿಶ್ವಸ್ಥರು, ಸೇವಾಭಾರತಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಳೆದ 33 ವರ್ಷಗಳಿಂದ ಪ್ರತಿ ಆದಿತ್ಯವಾರದಂದು ಈ ವೈದ್ಯಕೀಯ ಸೌಲಭ್ಯವು ನಿರಂತರವಾಗಿ ನಡೆಯತ್ತಿರುವುದು ಉಲ್ಲೇಖನೀಯವಾಗಿದೆ.
ಈ ಶಿಬಿರದಲ್ಲಿ ಕಳೆದ ಹಲವು ವರ್ಷಗಳಿಂದ ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿರುವ ಯುವ ಉತ್ಸಾಹಿ ಸಮಾಜಸೇವಕರಾದ ಮನೋಜ್ ಶೆಟ್ಟಿ ಇವರನ್ನು ಕಾರ್ಯಕ್ಕಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಒಟ್ಟು 175 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ