ಹೌದು ನಮಗೆ ಕಾಡುತ್ತಿರುವ ಪ್ರಶ್ನೆ ಇಷ್ಟೇ. ಏನಿದು ಗಂಡು ಮನಸ್ಸು? ಹುಡುಗರ ಮನಸ್ಥಿತಿಯ ಬಗ್ಗೆ ಇರಬಹುದೇನೋ ಅನಿಸಬಹುದು. ಆದರೆ ವಿಷಯ ಅದಲ್ಲ. ಏನಿಲ್ಲ ಈ ಕೆಲವು ಹುಡುಗಿಯರು ಗಂಡು ಮಕ್ಕಳಂತೆ ವರ್ತಿಸ್ತಾರೆ. ಇದೆಲ್ಲ ಹೇಗೆ? ಯಾಕೆ ಈ ರೀತಿ ವರ್ತಿಸ್ತಾರೆ?
ಈ ರೀತಿ ಸುಮಾರು ಜನ ಕೇಳುತ್ತಾರೆ. ಅವಳಿಗೆ ಗಂಡಾಗಿ ಜನನ ಆಗಬೇಕು ಅನ್ನುವ ಮನಸ್ಥಿತಿ ಇರಬಹುದೊ? ಈ ರೀತಿಯಾಗಿ ಯೋಚಿಸುವವರೂ ಇದ್ದಾರೆ. ಆದರೆ ಅವರು ಯಾಕೆ ಹಾಗೆ ವರ್ತಿಸುತ್ತಾರೆ ಅಂದರೆ, ಸಾಮಾನ್ಯವಾಗಿ ನೊಂದಾಗ ಹುಡುಗಿಯರು ಹೆಚ್ಚಾಗಿ ಕಣ್ಣೀರಿನಿಂದ ವ್ಯಕ್ತ ಪಡಿಸುತ್ತಾರೆ. ಇಲ್ಲವಾದಲ್ಲಿ ಗೆಳೆಯರೊಂದಿಗೆ ಹಂಚಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಈ ಹುಡುಗರ ರೀತಿ ವರ್ತಿಸುವ ಹುಡುಗಿಯರು ತಮ್ಮ ಮನಸ್ಸಿನ ನೋವನ್ನು ಇನ್ನೊಬ್ಬರನ್ನು ನಗಿಸುವ ಮೂಲಕ, ಇಲ್ಲವೇ ಒಬ್ಬಂಟಿಯಾಗಿ ಏನಾದರೂ ಕೈ-ಕಾಲಿಗೆ ತಾನಾಗಿಯೇ ನೋವು ಮಾಡಿಕೊಂಡು ಅಥವಾ ಎಲ್ಲರ ಮುಂದೆ ಏನೂ ಆಗೇ ಇಲ್ಲ ಅನ್ನುವ ಹಾಗೆ ನಡೆದುಕೊಳ್ಳುತ್ತಾರೆ.
ಅವರಿಗೆ ಎಷ್ಟೇ ನೋವಿರಲಿ ಬೇಕಾದರೆ ಬೇರೆಯವರಿಗೆ ಪ್ರೋತ್ಸಾಹ ನೀಡಲು ಮುಂದಾಗುತ್ತಾರೆಯೆ ಹೊರತು ಅವರ ಬೇಸರವನ್ನು ತೋರಿಸಿಕೊಳ್ಳಲಾರರು. ಇವರು ಗಂಡು ಮಕ್ಕಳಂತೆ ವರ್ತಿಸಲು ಕಾರಣ ಏನೆಂದರೆ ಒಂದು ನಮ್ಮಿಂದ ಬೇರೆಯವರಿಗೆ ನೋವಾಗಬಾರದು, ಇನ್ನೊಂದು ನನ್ನ ನೋವು ಹೇಳಿ ಅವರ ಮನಸ್ಸು ಹಾಳಾಗಬಾರದು ಅಷ್ಟೇ. ಅವರ ಮನಸ್ಸು ಹೇಗೆಂದರೆ ಒಬ್ಬರನ್ನು ಒಂದು ಸಲ ಹಚ್ಚಿಕೊಂಡರು ಅಂದುಕೊಳ್ಳಿ ಜೀವ ಹೋದರೂ ದೂರ ಮಾಡಲ್ಲ, ಕೆಲವು ಸನ್ನಿವೇಶದಲ್ಲಿ ದೂರ ಮಾಡಿದವರ ಹಾಗೆ ನಟಿಸಬೇಕಾಗುತ್ತದೆ. ಹಾಗಂತ ಹೇಳಿ ಅವರಿಗೆ ಕೋಪ ಇಲ್ಲಾ ಅಂತ ಅಲ್ಲ. ಸ್ನೇಹ, ಪ್ರೀತಿನಾ ಉಳಿಸಿಕೊಳ್ಳಲು ಅತಿಯಾಗಿ ತಾಳ್ಮೆಯನ್ನು ಹೊಂದಿರುತ್ತಾರೆ. ಆದರೆ ಅದೇ ಕಾರಣ ಅವರಿಗೆ ಪ್ರತಿ ಸಲ ನೋವು ತಂದು ಕೊಡುತ್ತದೆ.
ಕೆಲವು ಕ್ರಿಮಿಗಳು ಬಾಯಿಗೆ ಬಂದಂತೆ ಏನೆಲ್ಲ ಹೆಸರಿಟ್ಟು ಕರೀತಾರೆ. ಯಾಕೆ ಗೊತ್ತಾ? ಅಂತಹ ಮನಸ್ಸು ಇರುವವರು, ಹುಡುಗಿಯರಿಗಿಂತ ಹುಡುಗರೊಂದಿಗೆ ಹೆಚ್ಚು ಆತ್ಮೀಯಾರಾಗಿ ಮತ್ತು ನಂಬಿಕೆಯನ್ನು ಹೊಂದಿರುತ್ತಾರೆ. ಕಾರಣ ಇಷ್ಟೇ ಹುಡುಗಿಯರು ಅರ್ಥ ಮಾಡಿಕೊಳ್ಳೋಕಿಂತ ಜಾಸ್ತಿ ಹುಡುಗರು ಅರ್ಥ ಮಾಡ್ಕೊಳ್ಳುತ್ತಾರೆ, ಧೈರ್ಯ ತುಂಬುತ್ತಾರೆ, ಪ್ರೋತ್ಸಾಹಿಸ್ತಾರೆ ಅನ್ನುವ ಕಾರಣಕ್ಕೆ.
ಅದನ್ನೆಲ್ಲಾ ನೋಡುವಾಗ ಕೆಲವರಿಗೆ ಏನೋ ಉರಿಯುತ್ತೆ. ಅದಕ್ಕೋಸ್ಕರ ಇಲ್ಲ ಸಲ್ಲದ ಮಾತುಗಳನ್ನು ಹಿಂದಿನಿಂದ ಬೊಗಳುತ್ತಾರೆ. ಒಂದು ಗಾದೆ ಇದೆ ಅಲ್ವಾ "ಹೆಣ್ಣಿಗೆ ಹೆಣ್ಣೇ ಶತ್ರು" ಅಂತ ಹಾಗೆ. ಆ ಮನಸ್ಸು ಎಷ್ಟರ ಮಟ್ಟಿಗೆ ನೊಂದಿರುತ್ತದೆ ಅಂದರೆ, ಎಲ್ಲಿ ಹೋದ್ರು ನೋವು, ಬೇಸರ ಅದೇ. ಯಾಕೋ ಗೊತ್ತಿಲ್ಲ ಅಂತವರ ಮನಸ್ಸು ಎಷ್ಟು ಸೂಕ್ಷ್ಮ ಅಂದರೆ ನೀವು ತಮಾಷೆಗೂ ಹೇಳಿದರೂ ನೊಂದುಕೊಳ್ಳುತ್ತೆ. ಆದರೆ ಆ ನೋವನ್ನು ತೋರಿಸ್ಕೊಳ್ಳಲ್ಲ ಅಷ್ಟೇ. ಎಲ್ಲರನ್ನು ಸಂತೋಷದಿಂದ ಇಡಲು ಪ್ರಯತ್ನಿಸ್ತಾರೆ, ಅದು ಯಾಕೋ ಗೊತ್ತಿಲ್ಲ, ಅವರಿಗೆ ಯಾಕೆ ಎಲ್ಲರೂ ಬೇಸರ ಕೊಡುತ್ತಾರೆ ಅಂತ ಗೊತ್ತಾಗ್ತಿಲ್ಲ.
ನೋವು ಸಹಿಸಿಕೊಳ್ತಾರೆ ಅನ್ನುವ ಭರವಸೆಯಿಂದಲೋ, ನೋವೇ ಇಲ್ಲಾ ಅನ್ನುವ ಭ್ರಮೆಯೋ ಏನೋ. ಅಥವಾ ಬೇಕಾದರೆ ಅವರೆ ಬರಲಿ ಅನ್ನೋ ಅಹಂ ಆಗಿರಬಹುದೋ ಒಂದೂ ತಿಳಿಯದು.
ತಿಳಿದಿರಲಿ ಆ ಗಂಡು ಮನಸ್ಸಿಗೂ ಒಂದು ನೊಂದು -ಬೆಂದ ಕಥೆ ಇರಬಹುದು. ಅವರನ್ನು ನೋವಿಸುವ ಮುಂಚೆ ಯೋಚಿಸಿ.
-ಕಾವ್ಯ ಕೊಕ್ಕಡ
ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತ) ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



