ಸಾಹಿತ್ಯದಿಂದ ಪ್ರಜಾಪ್ರಭುತ್ವದ ಬಲವರ್ಧನೆ ಸಾಧ್ಯ: ಡಾ. ರವಿಶಂಕರ್ ರಾವ್

Chandrashekhara Kulamarva
0

ಸುರತ್ಕಲ್‌: ಯುವ ಸಮುದಾಯವು ಸಾಹಿತ್ಯದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ಬೆಳೆಸಲು ಮುಂದಾಗಬೇಕು. ಸಾಹಿತ್ಯ ಕೇವಲ ಕಲಾತ್ಮಲ ಅಭಿವ್ಯಕ್ತಿ ಮಾತ್ರವಲ್ಲ; ಅದು ಸಮಾಜ ನಿರ್ಮಾಣಕ್ಕೆ ಹಾದಿಯಾಗಬೇಕು. ಕಥೆ, ಕವಿತೆ, ಲೇಖನ, ವಚನ ಸಾಹಿತ್ಯ ಹಾಗೂ ವಿವಿಧ ಕಲಾತ್ಮಕ ಪ್ರಸ್ತುತಿಯೊಂದಿಗೆ ಸೃಜನಾತ್ಮಕ ಅಭಿವ್ಯಕ್ತಿಗೆ ಮಾದರಿಯಾಗಿ ವಿದ್ಯಾರ್ಥಿವಾಣಿ ಮೂಡಿ ಬಂದಿದೆ ಎಂದು ಖ್ಯಾತ ಚಿಂತಕ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರವಿಶಂಕರ್ ರಾವ್ ನುಡಿದರು.


ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಆಂತರಿಕ ಗುಣಮಟ್ಟ ಖಾತರಿ ಕೋಶ, ವಿದ್ಯಾರ್ಥಿವಾಣಿ ಸಂಪಾದಕೀಯ ಘಟಕ ಮತ್ತು ರಾಜ್ಯಶಾಸ್ತ್ರ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ವಿದ್ಯಾರ್ಥಿವಾಣಿ– ಕಾಲೇಜು ಭಿತ್ತಿ ಪತ್ರಿಕೆ ಅನಾವರಣ ಮತ್ತು ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 


ಗೌರವ ಉಪಸ್ಥಿತಿಯಲ್ಲಿ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ ಸಾಮಾಜಿಕ ಜವಾಬ್ದಾರಿಯನ್ನು ಅರಿತ ಯುವಕರು ಪ್ರಜಾಪ್ರಭುತ್ವದ ನಿಜವಾದ ರಕ್ಷಕರಾಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ, ವಿದ್ಯಾರ್ಥಿಗಳ ಕಲಾತ್ಮಕತೆ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಪ್ರಶಂಸಿಸಿದರು. ಕಾರ್ಯಕ್ರಮ ಸಂಯೋಜಿಸಿದ್ದ ವಿದ್ಯಾರ್ಥಿವಾಣಿ ಸಂಪಾದಕೀಯ ಘಟಕದ ಸಂಯೋಜಕಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆಶಾಲತಾ ಪಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಬಿ.ಎ. ವಿಭಾಗದ ವಿದ್ಯಾರ್ಥಿನಿ ಇಶಿಕಾ ಅವರನ್ನು ಅಭಿನಂದಿಸಲಾಯಿತು.


ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ., ಗ್ರಂಥಪಾಲಕಿ ಡಾ. ಸುಜಾತ ಬಿ., ಉಪನ್ಯಾಸಕರಾದ ಡಾ. ಗಣೇಶ ಆಚಾರ್ಯ, ದಯಾ ಸುವರ್ಣ, ಡಾ ಕಾರ್ತಿಕ್ ಜೆ.ಎಸ್. ಡಾ. ವಿಜಯಲಕ್ಷ್ಮಿ, ವಿದ್ಯಾರ್ಥಿವಾಣಿ ಸಂಪಾದಕೀಯ ಘಟಕದ ಸದಸ್ಯರಾದ ಅಕ್ಷತಾ ವಿ., ರಮಿತಾ, ನಟರಾಜ ಜೋಶಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಹೇಶ್ ಹಾಗೂ ಪ್ರಾಪ್ತಿ ಉಪಸ್ಥಿತರಿದ್ದರು. 


ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಮೇಜರ್ ಡಾ. ಸುಧಾ ಯು ಸ್ವಾಗತಿಸಿ, ಹಿಂದಿ ವಿಭಾಗದ ಮುಖ್ಯಸ್ಥೆ ಜ್ಯೋತಿ ಕಾಮತ್ ವಂದಿಸಿದರು. ವಿದ್ಯಾರ್ಥಿವಾಣಿ ವಿಭಾಗದ ಕಾರ್ಯಕ್ರಮವನ್ನು ತೇಜಸ್ವಿನಿ ಹಾಗೂ ಸಭಾ ಕಾರ್ಯಕ್ರಮವನ್ನು ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶರ್ಮಿತಾ ಯು. ನಿರೂಪಿಸಿದರು.


إرسال تعليق

0 تعليقات
إرسال تعليق (0)
To Top