ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಇಲ್ಲಿನ ಎನ್‌ಎಸ್‌ಎಸ್ ಘಟಕ ಮತ್ತು ಯುವಸ್ಪಂದನ ಉಡುಪಿ ಇವರ ಸಹಯೋಗದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು. ಮುಖ್ಯ ತರಬೇತುದಾರರಾಗಿ ನಿಮ್ಹಾನ್ಸ್ ಬೆಂಗಳೂರು ಇಲ್ಲಿನ ತರಬೇತುದಾರರಾದ ಕುಮಾರಿ ಅನು ಶೇಣ್ವಿ ಆಗಮಿಸಿದ್ದರು.
ಅವರೊಂದಿಗೆ ಯುವಸ್ಪಂದನ ಉಡುಪಿಯ ಶ್ರೀಮತಿ ಶ್ಯಾಮಲಾ, ಉಪನ್ಯಾಸಕಿ ಶ್ರೀಮತಿ ಗಿರಿಜಾ ಹೆಗಡೆ ತರಬೇತುದಾರರಾಗಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಜೀವನ ಕೌಶಲ್ಯ ಕುರಿತ ಒಂದು ದಿನದ ತರಬೇತಿಯು ಚಟುವಟಿಕೆಗಳ ಮೂಲಕ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ಕುಮಾರ್ ಅವರು ಗಿಡಗಳಿಗೆ ನೀರು ಸಿಂಚನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ಕುಮಾರಿ ಪ್ರಿಯಾಂಕಾ ಮತ್ತು ಬಳಗ ಪ್ರಾರ್ಥನೆ ಮಾಡಿದರು. ಇತಿಹಾಸ ಉಪನ್ಯಾಸಕ ಪ್ರಕಾಶ್ ಶೆಟ್ಟಿ ಅವರು ಉದ್ಘಾಟನಾ ಸಮಾರಂಭದ ನಿರೂಪಣೆ ಮಾಡಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಗಿರಿಜಾ ಹೆಗಡೆಯವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ ಸುಝೈಫಾ ವಂದಿಸಿದರು. ಯುವಸ್ಪಂದನದ ಪಾರ್ಥಸಾರಥಿಯವರು, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಶುಭಗೀತಾ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿಧ್ಯಾರ್ಥಿ ನಾಯಕಿ ಕುಮಾರಿ ಮೇಘಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


