ಭಾರತದ ಜ್ಞಾನ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳೋಣ: ಡಾ. ಸತೀಶ್ಚಂದ್ರ

Upayuktha
0


ಉಜಿರೆ: ಭಾರತದ ಜ್ಞಾನ ಸಂಪತ್ತು ವಿಶಿಷ್ಟವಾಗಿದ್ದು, ಈ ಜ್ಞಾನ ವ್ಯವಸ್ಥೆಯನ್ನು ಅರಿತು ನಾವೆಲ್ಲರೂ ಜ್ಞಾನಿಗಳಾಗೋಣ ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.


ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಸಂಸ್ಕೃತ ಮತ್ತು ಗಣಿತ ವಿಭಾಗದ ಜಂಟಿ ಆಶ್ರಯದಲ್ಲಿ ನಿನ್ನೆ (ಸೆ.24) ‘ಗಣಿತ ಸಂಸ್ಕೃತ ಸಂಗಮ’  ಶೀರ್ಷಿಕೆಯಡಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.


ಭಾರತ ಜ್ಞಾನ ಪರಂಪರೆ ತನ್ನ ಆದಿಯಿಂದಲೂ ಜಗತ್ತಿನ ಏಳಿಗೆಗೆ ವಿಶಿಷ್ಟವಾದ ಮೌಲ್ಯಯುತ ಸಂಪತ್ತನ್ನು ನೀಡುತ್ತಾ ಬಂದಿದೆ. ಇದನ್ನು ಕಂಡ ವಿವಿಧ ದೇಶಗಳು ಭಾರತದ ಮೇಲೆ ದಾಳಿ ಮಾಡುತ್ತಾ ತಮ್ಮ ಪಾಶ್ಚಾತ್ಯ ಸಂಸ್ಕೃತಿಯನ್ನು ಸ್ಥಾಪಿಸಿವೆ ಎಂದರು.


ಶಾಸ್ತ್ರಗಳ ನಡುವೆ ಸೇತುವೆ ನಿರ್ಮಾಣದ ಅಗತ್ಯವಿದೆ. ಈ ಅಗತ್ಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪೂರೈಸಿದೆ. ಇದಕ್ಕೆ ಅನುಗುಣವಾಗಿ ಇಂದಿನ ಈ ಕಾರ್ಯಾಗಾರ ಉಪಯುಕ್ತವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ನಾವು ಕಾಣುವ ಪ್ರತಿ ವಿಷಯದಲ್ಲೂ ಭಾರತೀಯ ಜ್ಞಾನ ಪರಂಪರೆ ಅಡಗಿದೆ. ಇದನ್ನು ನಾವು ಗ್ರಹಿಸೋಣ ಎಂದರು.


ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ವಿವೇಕಾನಂದ ಕಾಲೇಜಿನ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮತ್ತು ಹೈದರಾಬಾದ್ ನ ಸಿಇಐಟಿ ಸಂಸ್ಥೆಯ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಸುರೇಶ್ ಬಾಬು ಅವರನ್ನು ಗೌರವಿಸಲಾಯಿತು.


ಕಾಲೇಜಿನ ಆಡಳಿತ ಕುಲಸಚಿವ, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಎನ್. ಭಟ್ ಸ್ವಾಗತಿಸಿ, ಗಣಿತ ವಿಭಾಗದ ಮುಖ್ಯಸ್ಥ ಬಿ. ಗಣೇಶ್ ನಾಯಕ್ ವಂದಿಸಿದರು. ವಿದ್ಯಾರ್ಥಿನಿಯರಾದ ಧರಿತ್ರಿ ಭಿಡೆ ಮತ್ತು ಸಿಂಚನ ಪಾಳಂದೆ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top