ಲೇಖಾ ಲೋಕ-54: ಆಧ್ಯಾತ್ಮ ಚಿಂತಕ ಡಾ॥ ರವೀಂದ್ರ ಅ ಕುಷ್ಟಗಿ

Upayuktha
0




ಭಾಗವತದ ಅನುವಾದ ಆಂಗ್ಲ ಭಾಷೆಯಲ್ಲಿ ಮಾಡಿ, ವಿವಿಧ ಮಠಾಧೀಶರ ಅನುಗ್ರಹಕ್ಕೆ ಪಾತ್ರರಾದ ಡಾ॥ ರವೀಂದ್ರ ಕುಷ್ಟಗಿ ಅವರು ಕಲ್ಯಾಣ ಕರ್ನಾಟಕದ ಕಲಬುರಗಿ ನಗರದವರು. ಅನಂತಾಚಾರ್ಯ ಮತ್ತು ಸೀತಾಬಾಯಿ ಕುಷ್ಟಗಿ ದಂಪತಿಗಳ ಪುತ್ರನಾಗಿ ಮಹಾನಗರವಾದ ಕಲ್ಯಾಣ ಕರ್ನಾಟಕದ ಕಲಬುರುಗಿಯಲ್ಲಿ ತಾ॥ 15-11-1957 ರಂದು ಜನಿಸಿದರು.


ಇವರಿಗೆ ಇಬ್ಬರು ಸಹೋದರಿಯರು ಕುಟುಂಬದ ಸದಸ್ಯರು. ರವೀಂದ್ರ ಕುಷ್ಟಗಿ ಅವರ ಪ್ರಾಥಮಿಕ ಶಿಕ್ಷಣ ರಾಯಚೂರಿನಲ್ಲಿ ಪೂರೈಸಿ, ಪ್ರೌಢ ಶಿಕ್ಷಣ ಕರಬುರಗಿಯ ನೂತನ ವಿಶ್ವವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಥಮ ದರ್ಜೆಯಲ್ಲಿ ಪಾಸಾದರು. ಪಿಯುಸಿ ಶಿಕ್ಷಣ ಸಹ ಕಲಬುರುಗಿಯಲ್ಲಿ ಪೂರೈಸಿದರು. ನಂತರ ಇಂಜಿನಿಯರಿಂಗ್ ಕಾಲೇಜು ಸೇರಿ, ಬಿ ಇ ಪರೀಕ್ಷೆ ಪ್ರಥಮ ದರ್ಜೆಯಲ್ಲಿ ವಿತ್ ಡಿಸ್ಟಿಂಕ್ಷನ್ ಪಾಸಾಗಿ ಪದವಿ ಪಡೆದರು. ನೌಕರಿ ಮಾಡಲು ಬೆಂಗಳೂರಿಗೆ ಬಂದು ಲಾರ್ಸನ್ ಅಂಡ್ ಟೋಬ್ರೋ ಲಿಮಿಟೆಡ್ ಕಂಪನಿಯಲ್ಲಿ ವೃತ್ತಿ ಆರಂಭಿಸಿ, ಸುಧೀರ್ಘ ಸೇವೆ ಮಾಡಿ, ಚೀಫ್ ಪರ್ಚೇಸ್ ಮ್ಯಾನೇಜರ್ ಆಗಿ, 2016 ರಲ್ಲಿ ನಿವೃತ್ತರಾದರು.


ನಿವೃತ್ತರಾದ ಮೇಲೆ ಇವರ ತಂದೆ ತಾಯಿಯ ಆಶೀರ್ವಾದ ಮತ್ತು ದೈವಾನುಗ್ರಹದಿಂದ, ಆಧ್ಯಾತ್ಮದ ಕಡೆಗೆ ಒಲವು ತೋರಿಸಿದರು. ಅನೇಕ ಪುರಾಣ ಗ್ರಂಥಗಳನ್ನು ಅಧ್ಯಯನ ಮಾಡಿ ಆಧ್ಯಾತ್ಮಿಕ ಕೃತಿಗಳನ್ನು ಬರೆಯಲು ಉದ್ಯುಕ್ತರಾದರು. ಹೀಗಾಗಿ, ಸತ್ತಿಯಲ್ಲಿ ಶ್ರೀ ಸತ್ಯಾತ್ಮತೀರ್ಥರು ಚಾತುರ್ಮಾಸ್ಯಕ್ಕೆ ಕುಳಿತ ಸಂದರ್ಭದಲ್ಲಿ ರವೀಂದ್ರ ಕುಷ್ಟಗಿ ಅವರು ರಚಿಸಿದ ಶ್ರೀಕೃಷ್ಣಕಥಾಮೃತ ಶ್ರೀಮದ್ಭಾಭಾಗವತ ದಶಮ ಸ್ಕಂದ 11-3-2022 ರಂದು ಶ್ರೀಪಾದಂಗಳವರಿಂದ ಬಿಡುಗಡೆಗೊಂಡಿತು.


ಅದೇ ರೀತಿಯಲ್ಲಿ ಶ್ರೀ ಮಧ್ಭಾಗವತ ಸಪ್ತಾಹ ಕ್ರಮದಲ್ಲಿ, ಶ್ರೀ ಸುವಿದ್ಯೇಂದ್ರ ತೀರ್ಥರು2-4-2022 ರಂದು ಈ ಗ್ರಂಥವನ್ನು ಬಿಡುಗಡೆ ಮಾಡಿದರು. ನಂತರ ತಿರುಮಲದಲ್ಲಿ ಬ್ರಹ್ಮೋತ್ಸವ ಸಂದರ್ಭದಲ್ಲಿ, 7-10-2024 ರಂದು ರವೀಂದ್ರ ಕುಷ್ಟಗಿ ಅವರ, ಹರಿವಂಶ ಶ್ರೀ ಮನ್ಮಹಾಭಾರತ ಖಿಲ ಭಾಗ ಕೃತಿಯನ್ನು ಟಿಟಿಡಿ ಅವರ ಪ್ರಕಾಶನ ವಿಭಾಗದಿಂದ ಬಿಡುಗಡೆಗೊಂಡಿತು. ಆಂಗ್ಲ ಕೃತಿ ಭಾಗವತ ವಿದ್ಯಾವಾಚಸ್ಪತಿ ಡಾ॥ಅರಳುಮಲ್ಲಿಗೆ ಪಾರ್ಥಸಾರಥಿ ರಚಿಸಿದ ಕನ್ನಡ ಕೃತಿಯನ್ನು ಅನುವಾದ ಮಾಡಿ, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥರು ಅನೇಕ ಇನ್ನಿತರ ಶ್ರೀ ಪಾದಂಗಳವರ ಸಮ್ಮುಖದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರಿನಲ್ಲಿ 15-6-2025 ರಂದು ಬಿಡುಗಡೆ ಆಯಿತು.


ಶ್ರೀ ಮದ್ಭಾಗತ ಸಪ್ತಾಹ ಆಂಗ್ಲ ಕೃತಿ ಇವರ ಐದನೇಯ ಕೃತಿಯು ವಿಶ್ವವಿಖ್ಯಾತ ಮೋಹನಲಾಲ್ ಬನಾರಸಿದಾಸ್ ಪಬ್ಲಿಶಿಂಗ್ ಹೌಸ್, ನವದೆಹಲಿಯವರಿಂದ ಪ್ರಕಟವಾಗಿ, ಅತ್ಯಂತ ಜನಮೆಚ್ಚುಗೆಯ ಕೃತಿಯಾಗಿದೆ. ಉಡುಪಿಯಲ್ಲಿ ಶ್ರೀ ವಿಜಯದಾಸರ ಆರಾಧನೆ ಸಮಯದಲ್ಲಿ ಇವರು ಅಂತಾರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನದಲ್ಲಿ, ದಾಸ ಸಾಹಿತ್ಯಕ್ಕೆ ಶ್ರೀ ವಿಜಯದಾಸರ ಕೊಡುಗೆ ಎಂಬ ಪ್ರಬಂಧ ಮಂಡಿಸಿ ಉಡುಪಿಯ ಶ್ರೀ ಕೃಷ್ಣನ ಅನುಗ್ರಹಕ್ಕೆ ಪಾತ್ರರಾದರು. ಅದೇ ರೀತಿಯಲ್ಲಿ ಆಂಗ್ಲ ಲೇಖನ ಆನ್ ಎಮೋಷನಲ್ ಅಟಾಚ್ಮೆಂಟ್ ಟು ಮಹಾಕುಂಭ ಎಂಬುದನ್ನು ಸಾಮಾಜಿಕ ತಾಣದಲ್ಲಿ ಬರೆದು ಜನಾನುರಾಗಿ ಪ್ರಖ್ಯಾತರಾದ ಲೇಖಕರು.


ವಿಷ್ಣು ಸಹಸ್ರನಾಮ ಎ ಟೈಮ್ಲೆಸ್ ಹಿಮ್ನ ಆಫ್ ಡಿವೋಷನ್ ಎಂಬುದನ್ನು ಆಂಗ್ಲದಲ್ಲಿ ಮತ್ತು ವಿಷ್ಣು ಸಹಸ್ರನಾಮ ಮಹಿಮೆ ಕನ್ನಡದಲ್ಲಿ ಬರೆದ ಬಹು ಪ್ರಸಿದ್ಧ ಲೇಖನಗಳು ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡವು. ಇವರ ಬಹು ಅಪರೂಪದ ಲೇಖನ ವಿಷ್ಣುಸಹಸ್ರನಾಮದ ಪಠನದ ವೈಯಕ್ತಿಕ ಅನುಭವ ಬೆಂಗಳೂರಿನಲ್ಲಿ ಅನುಭವಾಮೃತ ಕಥನದಲ್ಲಿ ಪ್ರಕಟಗೊಂಡಿತು. ಸಜ್ಜನಿಕೆಯ ಪ್ರತಿರೂಪ ಲೇಖನ ಡಾ॥ ಜಯಲಕ್ಷ್ಮಿ ಮಂಗಳಮೂರ್ತಿ ಅವರ ಅಭಿನಂದನ ಸಂಪುಟದಲ್ಲಿ ಪ್ರಕಟವಾಯಿತು. ರಾಯಚೂರಿನಲ್ಲಿ 13-7-2025 ರಂದು ಈ ಅಭಿನಂದನ ಸಂಪುಟ ಬಿಡುಗಡೆಗೊಂಡು ಗೌರವವನ್ನು ಡಾ॥ ಜಯಲಕ್ಷ್ಮಿ ಮಂಗಳಮೂರ್ತಿ ಅವರಿಗೆ ಅರ್ಪಿಸಿದ ಸಂದರ್ಭ ಅವರ್ಣನೀಯ.


ಡಾ॥ ರವೀಂದ್ರ ಕುಷ್ಟಗಿ ಅವರಿಗೆ, ಹಲವಾರು ಪ್ರಶಸ್ತಿಗಳು, ಗೌರವ, ಮನ್ನಣೆ ಲಭಿಸಿವೆ. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನದ ಪ್ರಶಸ್ತಿ, ಡಾಕ್ಟರ್ ಆಫ್ ಫಿಲಾಸಫಿ ಆಧ್ಯಾತ್ಮಿಕ ವಿಜ್ಞಾನದಲ್ಲಿ, ಯೋಗ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ, ಶ್ರೀ ತ್ಯಾಗರಾಜ ರತ್ನ ರಾಜ್ಯ ಮಟ್ಟದ ಪ್ರಶಸ್ತಿ, ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ದವರಿಂದ ಗೌರವ ಸಮರ್ಪಣೆ, ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ವಿದ್ವಾಂಸರು. ಅನೇಕ ಆಧ್ಯಾತ್ಮಿಕ ಸಂಘ ಸಂಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ರವೀಂದ್ರ ಕುಷ್ಟಗಿ ಅವರು ನಾಡಿಗೆ, ಆಧ್ಯಾತ್ಮಿಕ ಜಗತ್ತಿಗೆ ದೊರಕಿದ ಮಹನೀಯರು.


ರವೀಂದ್ರ ಕುಷ್ಟಗಿ ಅವರು ಲಕ್ಷ್ಮೀ ಪತ್ನಿಯೊಂದಿಗೆ, ಒಬ್ಬ ಪುತ್ರ, ಮತ್ತು ಒಬ್ಬ ಮಗಳೊಂದಿಗೆ, ಮೊಮ್ಮಕ್ಕಳೊಂದಿಗೆ ಆಧ್ಯಾತ್ಮಿಕ ಚಿಂತನೆ ನಡೆಸುತ್ತಾ, ಅನೇಕ ಮೌಲಿಕ ಕೃತಿ ಪ್ರಬಂಧಗಳನ್ನು ಬರೆದು ನಾಡಿನಲ್ಲಿ ಹೆಸರಾಂತ ವಿದ್ವಾಂಸರಾಗಿ ಜನಮನ ಮೆಚ್ಚುಗೆಗೆ ಪಾತ್ರರಾದ ಮಹಾನುಭಾವರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top