ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯ ಪ್ರಯುಕ್ತ
ಸಾಂದರ್ಭಿಕ ರಂಗೋಲಿ ಚಿತ್ರಗಳ ಕೊಲಾಜ್
ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸೆಪ್ಟೆಂಬರ್ 14 ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ, ಶಾರದಾ ವಿದ್ಯಾಲಯ ಕೊಡಿಯಾಲ್‌ಬೈಲ್‌ನಲ್ಲಿ ಸೆಪ್ಟೆಂಬರ್ 7, ಭಾನುವಾರ ಬೆಳಿಗ್ಗೆ ಗಂಟೆ 9 ರಿಂದ ಶ್ರೀ ಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ ಹಾಗೂ ಕೃಷ್ಣ ಕಥಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
"ಶ್ರೀ ಕೃಷ್ಣ ಗಾನ ವೈಭವ" ಕೃಷ್ಣನಿಗೆ ಸಂಬಂಧಿಸಿದ ಸಂಗೀತ ಸ್ಪರ್ಧೆ- ಕಾಲಾವಕಾಶ 4 ನಿಮಿಷ. (ಸಂಯೋಜಕರು- ಧಾತ್ರಿ, 9353658761), (ಶಿಶು, ಬಾಲ, ಕಿಶೋರ್, ತರುಣ 4 ವಿಭಾಗ)
"ರಂಗೋಲಿಯಲ್ಲಿ ಶ್ರೀ ಕೃಷ್ಣ" 4x4 ಅಡಿ ಸ್ಥಳಾವಕಾಶದಲ್ಲಿ ಚುಕ್ಕಿ ರಂಗೋಲಿಯನ್ನೇ ರಚಿಸಬೇಕು, ರಂಗೋಲಿ ಪುಡಿಯಿಂದಲೇ ಅಲಂಕರಿಸಬೇಕು, ಸಮಯಾವಕಾಶ 2 ಗಂಟೆ, (ಸಂಯೋಜಕರು: ಬಿಂದು- 8431329054)
(ವಯಸ್ಸು ಮತ್ತು ತರಗತಿಗೆ ಅನುಗುಣವಾಗಿ ಸ್ಥಳದಲ್ಲೇ ವಿಭಾಗಗಳನ್ನು ನಿರ್ಧರಿಸಲಾಗುವುದು, ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ),
ಶ್ರೀ ಕೃಷ್ಣನ ಕುರಿತು ಕಥೆ ಹೇಳುವ "ಕೃಷ್ಣ ಕಥಾ ಸ್ಪರ್ಧೆ" ಕಾಲಾವಕಾಶ 5 ನಿಮಿಷ, (ಸಂಯೋಜಕರು: ಸಚಿತಾ ನಂದಗೋಪಾಲ್, 9844277475) (1ರಿಂದ 7ನೇ ತರಗತಿ- ಪ್ರಾಥಮಿಕ ಶಾಲಾ ವಿಭಾಗ, 8 ರಿಂದ 10ನೇ ತರಗತಿ - ಪ್ರೌಢಶಾಲಾ ವಿಭಾಗ, ಹಾಗೂ ಕಾಲೇಜು ವಿಭಾಗ, ಭಾಷಾ ನಿರ್ಬಂಧವಿಲ್ಲ).
ಸ್ಪರ್ಧಾಳುಗಳು ಸ್ಪರ್ಧಾ ದಿನದಂದು (ಸೆ,7 ಭಾನುವಾರ) ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳ ಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ಸ್ಪರ್ಧೆಗಳ ಸಂಯೋಜಕರನ್ನು ಹಾಗೂ ದಯಾನಂದ ಕಟೀಲ್, 9448545578, ಕದ್ರಿ ನವನೀತ ಶೆಟ್ಟಿ -9448123061 ಇವರನ್ನು ಸಂಪರ್ಕಿಸಬಹುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ