ಕೋಟ: ವಿವೇಕ ಹಳೆ ವಿದ್ಯಾರ್ಥಿ ಸಂಘದಿಂದ ಶಿಕ್ಷಕರ ದಿನಾಚರಣೆ

Chandrashekhara Kulamarva
0


ಕೋಟ: ವಿವೇಕ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ವಿವೇಕ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಬಾಲಕರ ಪ್ರೌಢಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಶಿಕ್ಷಕರ ದಿನದ ಮುನ್ನಾ ದಿನ ಶುಭಾಶಯ ಕೋರುವ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಎಸ್ ನಾಗೇಶ ಶಾನುಭೋಗ ವಹಿಸಿದ್ದರು.


ಗೌರವಾಧ್ಯಕ್ಷ, ಪ್ರಾಂಶುಪಾಲ ಕೆ. ಜಗದೀಶ ನಾವಡರು ಸ್ವಾಗತಿಸಿ, ಹಿರಿಯ ಸಹಶಿಕ್ಷಕರಾದ ಗೌರವ ಉಪಾಧ್ಯಕ್ಷ ಪ್ರೇಮಾನಂದ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಎಚ್.ವಿ. ಸೋಮಯಾಜಿ ಹಾಗೂ ಕೆ. ತಾರಾನಾಥ ಹೊಳ್ಳ, ಜಿ.ಸುರೇಶ್, ಪಿ. ಶ್ರೀಪತಿ ಹೇರ್ಳೆ ಉಪಸ್ಥಿತರಿದ್ದರು.


ಬಾಲಕಿಯರ ಪ್ರೌಢಶಾಲೆ ಮತ್ತು ಅಂಗ್ಲ ಮಾಧ್ಯಮ ಪ್ರೌಢಶಾಲೆಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಉಪಾಧ್ಯರು ವಹಿಸಿದ್ದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ಗೌರವ ಉಪಾಧ್ಯಕ್ಷ ವೆಂಕಟೇಶ ಉಡುಪ ಸ್ವಾಗತಿಸಿ ಕಾರ್ಯದರ್ಶಿ ಪಿ. ಸುಧಾಕರ್ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಪ್ರೀತಿರೇಖಾ, ಜನಾರ್ದನ ಹಂದೆ ಮತ್ತು ಉಮೇಶ ಉಡುಪರು, ವೆಂಕಟೇಶ ಭಟ್ಟ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top