ರೇಮಂಡ್ ಡಿಕೂನಾ ತಾಕೊಡೆ ಅಭಿಮತ
ಬೆಂಗಳೂರು: ಕೊಂಕಣಿ ಮಾತೃಭಾಷೆ ಸೇವೆಯನ್ನು ಕೊಂಕಣಿ ಜನರು ಇದ್ದಲ್ಲಿ ಹೋಗಿ ಅವರ ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯನ್ನು ಸಂಭ್ರಮಿಸಿ ಮಾಡಬೇಕು ಎಂದು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ನುಡಿದರು.
ಅವರು ಬೆಂಗಳೂರು ಜಾಲಹಳ್ಳಿ ಶ್ರೀರಾಮ ಸಮೀಕ್ಷ ಕ್ಲಬ್ ಹೌಸ್ ಸಭಾಂಗಣದಲ್ಲಿ ಕೆಬಿಎಂಕೆಯು ಮತ್ತು ಅವರ್ ಲೇಡಿ ಆಫ್ ಫಾತಿಮ ಚರ್ಚ್ ಜಾಲಹಳ್ಳಿ ಕೊಂಕಣಿ ಕುಟಮ್ ಜೊತೆಗೂಡಿ ಭಾನುವಾರ ನಡೆದ "ಕೊಂಕಣಿ ಸಂಭ್ರಮ್ 2025" ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯದ ಅಗತ್ಯ ಬಹಳಷ್ಟು ಇದೆ. ಅದೂ ಎಐಗೂ ಇದೆ. ಸಾಹಿತಿಗಳು ಆಥರ್‌ಗಳು ಬರೆದ ಇಂಟೆಲಿಜೆನ್ಸ್ ವೆಲ್ತ್ ಅನ್ನು ಎಐ ಮರುಕೊಡಬಹುದು ಅಷ್ಟೇ. ಆದ್ದರಿಂದ ನಾವೆಲ್ಲರೂ ಸಾಹಿತ್ಯ ಮತ್ತು ಸಾಹಿತ್ಯೇತರ ಬರಹಗಳು ನಿರಂತರ ಯಾವುದೇ ಅಡೆತಡೆಗಳನ್ನು ಲೆಕ್ಕಿಸದೆ ಬರೆಯಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿ ಪ್ರೊಫೆಸರ್ ಉರ್ಬನ್ ಡಿಸೋಜ ಅವರು ಕೊಂಕಣಿ ಭಾಷೆ, ಸಂಸ್ಕತಿ, ಸಾಹಿತ್ಯಕ್ಕಾಗಿ ದುಡಿದ ಹಿರಿಯ ಮಹಿಳಾ ಸಾಹಿತಿಗಳಾದ ಲಿಲ್ಲಿ ಮಿರಾಂದ, ಹಾಗೂ ಅಪೊಲಿನ್ ಡಿಸೋಜ ಅವರಿಗೆ ಸನ್ಮಾನಿಸಿ ಮಾತನಾಡಿದರು.
"ಸನ್ಮಾನಗಳು ಬರಹಕ್ಕೆ ಅರಸಿ ಬರಬೇಕು, ಸನ್ಮಾನ ಹುಡುಕಿ ಸಾಹಿತ್ಯ ಬರೆಯುವುದು ಸರಿಯಲ್ಲ. ಸನ್ಮಾನಕ್ಕಾಗಿ ಬರೆದರೆ ನಾವು ಆಸ್ಥಾನ ಹೊಗಳು ಭಟರು ಆಗುತ್ತೇವೆ" ಎಂದು ಟೀಕಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಲೇರಿಯನ್ ಪಿಂಟೊ ತನಗೆ ನೀಡಿದ ಗೌರವ ಸ್ವೀಕರಿಸಿ ಮಾತನಾಡಿ ಕೊಂಕಣಿ ಜಾಲಹಳ್ಳಿ ಬೆಂಗ್ಳುರ್ ಪ್ರದೇಶದಲ್ಲಿ ಉಳಿಸಲು ತಾವು ಪಟ್ಟ ಶ್ರಮವನ್ನು ವಿವರಿಸಿದರು.
ವೇದಿಕೆಯಲ್ಲಿ ಎಫ್ ಕೆ ಸಿ ಎ ನೂತನ ಆಧ್ಯಕ್ಷರಾದ ಆ್ಯಂಟನಿ ಗೊನ್ಸಾಲ್ವಿಸ್ ಇದ್ದರು ಮೊದಲಿಗೆ ಕ್ಯಾರಲ್ ಅರಾನ್ನಾ ಸ್ವಾಗತಿಸಿ ಸಂಚಾಲಕಿ ಮತ್ತು ಕೆಬಿಎಂಕೆ ಸದಸ್ಯರು ಜೆನೆಟ್ ವಾಸ್ ವಂದಿಸಿದರು.
ಜೊಯೆಲ್ ಅರಾನ್ನಾ ಮತ್ತು ಪ್ರೆಸಿಲ್ಲಾ ಪಿಂಟೊ ನಿರೂಪಿಸಿದರು. ಸನ್ಮಾನಿತರ ಪರಿಚಯ ಐಡಾ ಎಲಿಜಾ ಮಿನೆಜಸ್ ನೀಡಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಪ್ಪತ್ತು ವೈಯಕ್ತಿಕ ಮತ್ತು ತಂಡದಲ್ಲಿ ಸಂಭ್ರಮಿಸಿರು.
ಕೊಂಕಣಿ ಸಂಗೀತದ ಹಾಡು, ನೃತ್ಯ, ಕವಿತೆ, ಗಾದೆಗಳು, ಪ್ರಸ್ತುತ ಪಡಿಸಿದರು.
ಜಾಕ್ಲಿನ್ ಲೋಬೊ ಬಳಗ ನೃತ್ಯ, ಜೋತಿ ಡಿಸೋಜ ಕವಿತಾ ವಾಚನ, ಅಪೊಲಿನ್ ಡಿಸೊಜ ಗಾದೆಗಳು, ಮೆಲಿಟಾ ಮತ್ತು ಮೆಲಿಶಾ ನೃತ್ಯ, ಈತನ್ ಹಾಡು, ಸುನಿತಾ ಡಿಸೋಜ ಹಾಡು, ಮಿಥುನ್ ಕರ್ನೆಲಿಯೊ ಕಥೆ, ಅನಿತಾ ಪಿಂಟೊ ಕವಿತೆ, ಅನು ರಿಡಲ್ಸ್, ಲವಿನಾ ಫೆರ್ನಾಂಡೀಸ್ ಹಾಡು, ವಿನ್ಸೆಂಟ್ ಡಿಸೋಜ ಚುಟುಕುಗಳು, ವಿಪಿನ್ ಡಿಸೋಜ ಹಾಡು, ರೇಮಂಡ್ ಡಿಕೂನಾ ತಾಕೊಡೆ ಚಾರೊಳಿ ಮತ್ತು ಕವಿತೆ, ಡಾಯ್ನೆಟ್ ಕಾರ್ಡೊಜಾ ಹಾಡು, ಮಹಿಳೆಯರ ಗುಂಪು ನೃತ್ಯ, ಜೆನೆಟ್ ಪ್ರೆಸಿಲ್ಲಾ ವಾಸ್ ಕವಿತೆ, ಜೊನ್ ಅಡ್ಯಾರ್ ಕವಿತೆ , ಉಬ್ಬ ಮೂಡುಬಿದಿರೆ ಕವಿತೆ, ಐವಿ ಡಿಸೋಜ ಹಾಡು, ಶರಣ್ ರೇಗೊ ಹಾಡು, ಮಕ್ಕಳು ವಿಶೇಷ ನೃತ್ಯ ಮತ್ತು ಹಾಡು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.
ರೊಲ್ಫಿ ಪಿಂಟೊ, ನವೀನ್ ಫೆರ್ನಾಂಡೀಸ್, ಜೆಸಿಂತ ಡಿಸೋಜ, ಮೀರಾ ಡಿಸೋಜ, ಜೋನ್ ಡಿಸೋಜ ಅ್ಯನ್ ಡಿಸೋಜ, ಅ್ಯನ್ಸನ್ ಡಿಸೋಜ ಮತ್ತು ಚರ್ಚಿನ ಕೊಂಕಣಿ ಮಾತೃಭಾಷೆ ಜನರು ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


