ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಪಾನ್ ನ ವಿಲ್ ಡಿಸೈನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.
ನಿಟ್ಟೆ ತಾಂತ್ರಿಕ ಕಾಲೇಜಿನ ಸೈಬರ್ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಡಾ.ರೋಷನ್ ಫರ್ನಾಂಡಿಸ್ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಈ ಕೇಂದ್ರವು ಜಾಗತಿಕ ಜ್ಞಾನ ವಿನಿಮಯ, ವಿಶೇಷ ತರಬೇತಿ ಮತ್ತು ಅಂತರರಾಷ್ಟ್ರೀಯ ವೃತ್ತಿ ಅವಕಾಶಗಳನ್ನು ಉತ್ತೇಜಿಸುತ್ತಿದೆ.
ವಿದ್ಯಾರ್ಥಿಗಳು ಈಗಾಗಲೇ ಜಪಾನ್ ನಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ, ಇನ್ನೂ ಹಲವರು ಸ್ಟೈಫಂಡ್ ನೊಂದಿಗೆ ಇಂಟರ್ನ್ ಶಿಪ್ ಗೆ ಆಯ್ಕೆಯಾಗಿರುತ್ತಾರೆ. ಈ ಉಪಕ್ರಮವು ಶೀಘ್ರದಲ್ಲೇ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮಗಳಾಗಿ ಮತ್ತು ಡಿಜಿಟಲ್ ವಿಧಿವಿಜ್ಞಾನ ಸುಧಾರಿತ ಸೌಲಭ್ಯಗಳಾಗಿ ವಿಸ್ತರಿಸಲಿದೆ. ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಯೋಗದ ಬಲದೊಂದಿಗೆ ಕೇಂದ್ರವು ಡಿಜಿಟಲ್ ಬೆದರಿಕೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತವಾಗಲಿದೆ.
ಈ ಉತ್ಕೃಷ್ಟತಾ ಕೇಂದ್ರವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್ ವಿನಯಾ ಹೆಗ್ಡೆ ಅವರು ವಿಲ್ ಡಿಸೈನ್ ಜಪಾನ್ ನ ಅಧಿಕಾರಿಗಳಾದ ನವೋಟಕಾ ತಗುಚಿ, ಹಿರೋಶಿ ನಕಯಾಮಾ ಮತ್ತು ತಕಾಶಿ ತ್ಸುಜಿಯುಚಿ ಅವರ ಸಮ್ಮುಖದಲ್ಲಿ ಸೆ.15 ರಂದು ಸೋಮವಾರ ಉದ್ಘಾಟಿಸಲಿರುವರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ