ಜೈಭಾರತಿ ಟ್ರೋಫಿ ದ.ಕ. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

Upayuktha
0

ಕಬಡ್ಡಿಗೆ ವಿಶ್ವ ಮಾನ್ಯತೆ ಉತ್ತಮ ಬೆಳವಣಿಗೆ: ವಿವೇಕ್ ಆಳ್ವ




ಮಂಗಳೂರು: ನಗರದ ಉರ್ವ ಹೊಯ್ಗೆಬೈಲಿನ ಜೈಭಾರತಿ ತರುಣ ವೃಂದದ ವಜ್ರಮಹೋತ್ಸವದ ಅಂಗವಾಗಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಮಂಗಳೂರು ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಉರ್ವ ಮಾರ್ಕೆಟ್ ಬಳಿಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಜೈಭಾರತಿ ಟ್ರೋಫಿ ದ.ಕ. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಿತು.


ಪಂದ್ಯಾಟ ಉದ್ಘಾಟಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, ಅಪ್ಪಟ ದೇಸಿ ಕ್ರೀಡೆಯಾಗಿರುವ ಕಬಡ್ಡಿ ಆಟಕ್ಕೆ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಮಾನ್ಯತೆ ದೊರಕಿರುವುದು ಉತ್ತಮ  ಬೆಳವಣಿಗೆಯಾಗಿದೆ ಎಂದರು.


ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್  ಮಾತನಾಡಿ, ಜೈಭಾರತಿ ತರುಣ ವೃಂದದ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.


ಯುವಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತ್ ಆಳ್ವ, ಕಬಡ್ಡಿ ಅಸೋಸಿಯೇಶನ್‌ನ ಪದಾಧಿಕಾರಿಗಳಾಗಿರುವ ಗಿರಿಧರ್ ಶೆಟ್ಟಿ, ದಿನಕರ ಶೆಟ್ಟಿ, ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಇಂಜಿನಿಯರ್ ಬಾಬಾ ಅಲಂಕಾರ್, ಮುಡಾರೆ ಫೌಂಡೇಶನ್ ಅಧ್ಯಕ್ಷ ಸತೀಶ್ ಆಳ್ವ ಮುಡಾರೆ, ಉರ್ವ ಬಿಲ್ಲವ ಸಂಘದ ಅಧ್ಯಕ್ಷ ಬಿ. ಹರಿಪ್ರಸಾದ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಭಾಸ್ಕರ ಕುದ್ರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಜೈಭಾರತಿ ತರುಣ ವೃಂದದ ಗೌರವಾಧ್ಯಕ್ಷ ಕೇಶವ ಕುಲಾಲ್, ಅಧ್ಯಕ್ಷ ವಿಕ್ರಮ್, ಕಾರ್ಯದರ್ಶಿ ಜಿತೇಂದ್ರ ದೇವಾಡಿಗ, ಜತೆ ಕಾರ್ಯದರ್ಶಿ ಲತೀಶ್ ದೇವಾಡಿಗ, ಕೋಶಾಧಿಕಾರಿ ಸುನಿಲ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ತ್ರಿಶಾಂತ್ ಅಮೀನ್, ಜತೆ ಕ್ರೀಡಾ ಕಾರ್ಯದರ್ಶಿ ತಿಲಕ್‌ರಾಜ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ  ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top