ಶರೀರ ಹಗುರವಾದರೆ ಮನಸ್ಸು ಹಗುರವಾಗುತ್ತದೆ: ಡಾ ಸುರೇಶ ನೆಗಳಗುಳಿ

Upayuktha
0

ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ ವತಿಯಿಂದ ವಾಕಥಾನ್




ಮಂಗಳೂರು: ಸ್ಥಳೀಯ ನಾಟೆಕಲ್ಲಿನ‌ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಆಯುರ್ವೇದ ದಿನಾಚರಣೆಯ ಅಂಗವಾಗಿ ಸೆ.24 ರಂದು ನಡಿಗೆಯಲ್ಲಿ ಆರೋಗ್ಯ ಬಿಂಬಿಸುವ ವಾಕಥಾನ್ ನಡರಸಲಾಯಿತು.


ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಯವರು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಕಣಚೂರು ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಡಿಗೆಯ ಮಹತ್ವ ಸಾರುವ ಫಲಕ ಸಹಿತವಾಗಿ ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಶ್ರೀಮಾ ಪ್ರಿಯದರ್ಶಿನಿ ಯವರು ಕ್ರೀಡೆಯ ಮಹತ್ವ ಮತ್ತು ಹೇಗೆ ಸದಾ ಉಲ್ಲಾಸದಿಂದಿರಲು ಅದು ಸಹಕರಿಸ ಬಹುದು ಎನ್ನುತ್ತಾ ಸದಾ ಚಲನಶೀಲತೆ ಅತ್ಯಗತ್ಯ ಎಂದರು.


ಆಶಯ ಭಾಷಣ ಮಾಡುತ್ತಾ ಸಂಸ್ಥೆಯ ಮಾರ್ಗದರ್ಶಕ ಡಾ ಸುರೇಶ ನೆಗಳಗುಳಿಯವರು ಶರೀರ ಲಾಘವತ್ವ ಮತ್ತು ನಡಿಗೆಯಿಂದ ರಕ್ತ ಸಂಚಾರದ ಸುಗಮತೆ ಬಗ್ಗೆ ಆಶು ಕವನ ಸಹಿತವಾಗಿ ಜಡ ಭರತನಂತೆ ಬಿದ್ದಿರದೆ ಸದಾ ಚುರುಕುತನ‌ ರೂಢಿಸಿ ಕೊಳ್ಳಲು ತಿಳಿಸುತ್ತಾ ಶುಭ ಕೋರಿದರು. ಚೇರ್ಮನ್ ಹಾಜಿ ಡಾ ಕಣಚೂರು ಮೋನುರವರು ಆಯುರ್ವೇದ ವೈದ್ಯ ಪದ್ಧತಿ ಹಾಗೂ ತಮ್ಮ ಸಂಸ್ಥೆಯೂ ಇದಕ್ಕೆ ನೀಡುವ ಮಹತ್ವದ ಸಲುವಾಗಿ ಸ್ಥಾಪಿಸಿದ ಈ ಸಂಸ್ಥೆಯು ಭಾರತೀಯ ವೈದ್ಯ ಪದ್ಧತಿಯ ಅನುಸರಣೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.


ಪ್ರಾಚಾರ್ಯೆ ಡಾ ವಿದ್ಯಾಪ್ರಭಾ ಸ್ವಾಗತಿಸಿ ಡಾ ಸೌಮ್ಯಾ ಅಶೋಕ್ ಧನ್ಯವಾದ ಹಾಗೂ ಪೂರ್ಣ ನಿರ್ವಹಣೆ ಮಾಡಿದರು. ಡಾ ಕಾರ್ತಿಕೇಯ ಪ್ರಸಾದ್, ಡಾ ಭವ್ಯಾ ಪ್ರವೀಣ್ ಮತ್ತಿತರರು ಸಕ್ರಿಯರಾಗಿ ಭಾಗವಹಿಸಿದ್ದರು. ಸ್ಥಳೀಯ ಪಿಸಿಯೋಥೆರಪಿ ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಶಿಕ್ಷಕರೂ ದೇರಳಕಟ್ಟೆ ಪರ್ಯಂತ ವಾಕಥಾನ್ ನಡೆಸಿದರು. ಭಾಗವಹಿಸಿದ ಎಲ್ಲರಿಗೂ ಪದಕಹಾರ ಹಾಕಲಾಯಿತು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top