ದೇವತಾ ಪ್ರೀತಿಗೆ ಮಾನವ ಯತ್ನವೂ ಅಗತ್ಯ: ಗಿರೀಶ್ ರಾವ್

Chandrashekhara Kulamarva
0


ಮಂಗಳೂರು: "ಕಲಿಯುಗದಲ್ಲಿ ದೇವರೊಲುಮೆಗಾಗಿ ದೇವತಾ ಪ್ರಾರ್ಥನೆ, ಪೂಜೆಗಳು ಸಹಕಾರಿ. ಅದರಲ್ಲೂ ಪ್ರತಿಯೋರ್ವನ ಜೀವನದಲ್ಲಿಯೂ ಕಾಡುವ ಶನಿದೋಷ ಪರಿಹಾರಕ್ಕಾಗಿ ಶನಿ ವ್ರತ ಪೂಜೆ ಕಷ್ಟಗಳನ್ನು ದೂರ ಮಾಡಲು ಸುಲಭ ದಾರಿ. ಇದನ್ನು ಸಾಮೂಹಿಕವಾಗಿ ನಡೆಸಿದಾಗಲಂತೂ ಸಮಾಜದ ಹಿತವನ್ನು ಕಾಯ್ದಂತಾಗುತ್ತದೆ" ಎಂದು ಉದ್ಯಮಿ ಗಿರೀಶ್ ರಾವ್ ಹೇಳಿದರು.


ಅವರು ಕೋಡಿಕಲ್‌ನ ವಿಪ್ರವೇದಿಕೆಯ ದಶಮಾನೋತ್ಸವ ಸರಣಿಯ ನಾಲ್ಕನೇ ಕಾರ್ಯಕ್ರಮದಂಗವಾಗಿ ನಡೆದ ಶನಿವ್ರತ ಪೂಜೆ ಹಾಗೂ ಶನಿಮಹಾತ್ಮೆ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ವೇ.ಮೂ. ವಿಶ್ವ ಕುಮಾರ್ ಜೋಯಿಸ್ ಶನಿಪೂಜೆಯನ್ನು ನಡೆಸಿಕೊಟ್ಟರು. ಕಥಾಶ್ರವಣದ ಭಾಗವನ್ನು ತಾಳಮದ್ದಳೆ ರೂಪದಲ್ಲಿ ಪ್ರಸ್ತುತಪಡಿಸ ಲಾಯಿತು. ವೇದಿಕೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯರ ಸಾರಥ್ಯದಲ್ಲಿ ಜರಗಿದ ತಾಳಮದ್ದಳೆಯಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮುರಾರಿ ಕಡಂಬಳಿತ್ತಾಯ, ನವೀನಚಂದ್ರ, ವರ್ಕಾಡಿ ಮಧುಸೂದನ ಅಲೆವೂರಾಯ ಹಿಮ್ಮೇಳದಲ್ಲಿದ್ದರೆ, ದುರ್ಗಾದಾಸ್ ಕಟೀಲ್, ಪ್ರತೀಕ್ ರಾವ್, ದಾಕ್ಷಾಯಣಿ ವಿಶ್ವೇಶ್ವರ್, ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಡಾ. ಸುಮನಾ ಹೊಳ್ಳ, ವಿಜಯಲಕ್ಷ್ಮೀ ಎಲ್ ನಿಡ್ವಣ್ಣಾಯ ಮುಮ್ಮೇಳದಲ್ಲಿದ್ದರು.


ವೀಣಾ ಗಿರೀಶ್ ರಾವ್, ಜಯರಾಮ ಪದಕಣ್ಣಾಯ, ಸುಬ್ಬರಾವ್, ಕೃಷ್ಣರಾವ್, ವಿದ್ಯಾ ಗಣೇಶ್, ಪ್ರಭಾವತಿ ಮಡಿ ಕಲಾವಿದರನ್ನು ಗೌರವಿಸಿದರು. ಕು. ಐಶ್ವರ್ಯಾ ಭಟ್ ರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾ. ಯಶಸ್ ಅಲೆವೂರಾಯ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top