ಹವ್ಯಕ ಕಥೆ: ಮಂಜರಿ (ಭಾಗ- 3)

Upayuktha
0

ಸಾಂದರ್ಭಿಕ Meta AI ಚಿತ್ರ


"ಮಂಜೂ.. ಏಳು ಮಾರಾಯ್ತೀ. ಇಂದೆಂತ ದೇವಸ್ಥಾನಕ್ಕೆ ಬತ್ತಿಲ್ಯಾ? ಎಂತ ಇಷ್ಟು ಒರಕ್ಕು ನಿನಗೆ ಉಶಾರಿಲ್ಲೆಯಾ?" ಶಾಲಿನಿ ಮೈ ಹಿಡುದು ಕುಲುಕ್ಸಿಯಪ್ಪಗ ಫಕ್ಕ ಎಚ್ಚರಿಕೆ ಆತು ಮಂಜರಿಗೆ.


'ದೇವರಿಲ್ಲದ್ದ ದೇವಸ್ಥಾನಕ್ಕೆ ಆನಿಲ್ಲೆ' ಹೇಳಿ ಮನಸಿಲ್ಲಿ ಹೇಳಿಂಡು ಎದ್ದರೂ ಶಾಲಿನಿ ದಿನಿಗೇಳುಗ ಬತ್ತಿಲ್ಲೇಳಿ ತಪ್ಸುಲೆಡಿಯ ಹೇಳಿ ಗೊಂತಿದ್ದದಕ್ಕೆ.  ಎದ್ದು ಮೋರೆ ತೊಳೆದು, ಮಿಂದಿಕ್ಕಿ ಬಂದಪ್ಪಗ ಅಪ್ಪ° ಊರಿಂದ ಬಂದದು ಕಂಡತ್ತು ಮಂಜರಿಗೆ.


"ಇಂದಾನು ದೇವಸ್ಥಾನಕ್ಕೆ ಬತ್ತಿಲ್ಲೆ. ಅಪ್ಪನ ಕಾಣದ್ದೆ ಅಸಕ್ಕಾಯಿದು' ಹೇಳಿ ಕಾರಣ ಕೊಟ್ಟು ಹೋಗದ್ದೆ ಕೂದತ್ತು. ಅಪ್ಪನತ್ರೆ ಮಾತಾಡುಗಲೂ ಮನಸ್ಸು ಮನುವಿನ ಹತ್ತರಂಗೆ ಹೋಗಿಂಡಿತ್ತು. ಆದರೆ ಅಬ್ಬೆ ಅಪ್ಪನ ಒಪ್ಪಿಗೆ ಇಲ್ಲದ್ದೆ ಕೂಸುಗಳ ಬದುಕಿಲ್ಲಿ ಮುಖ್ಯವಾದ ಯಾವ ಕಾರ್ಯವೂ ನಡೆಯ ಹೇಳಿ ಗೊಂತಿಪ್ಪ ಕಾರಣ ಸುಮ್ಮನೆ ಕೂದತ್ತು.


ಮನುವಿನ ಮನಗೆ ಎಲ್ಲೋರು ಹೆರಟಪ್ಪಗ ಮಾವ ಮಂಜರಿಯ ಅಪ್ಪನನ್ನೂ ಒತ್ತಾಯ ಮಾಡಿ ಹೆರಡ್ಸಿದವು.


"ಮದಲಿಂಗೆ ಅತ್ಲಾಗಿಂದ ಬಂದವು.ನಿಂಗಳುದೆ ಬಂದರೆ ಕೊಶಿಯಕ್ಕವಕ್ಕೆ. ನಿಂಗೊಗೂ ಇಲ್ಯಾಣ ಕ್ರಮ ಎಲ್ಲ ನೋಡಿದಾಂಗಾವ್ತು" ಹೇಳಿಯಪ್ಪಗ ಹೆಚ್ಚು ದಾಕ್ಷಿಣ್ಯ ಮಾಡದ್ದೆ ಅವು ಹೆರಟವು.


ಹಾಂಗೆ ಮತ್ತೆ ಅಜ್ಜಿಯನ್ನು, ಅತ್ತೆಯನ್ನು ಬಿಟ್ಟು ಎಲ್ಲೋರು ಮನುವಿನ ಮನಗೆ ಬಂದವು. ಆಸರಿಂಗೆಲ್ಲ ಕುಡುದು ಅತ್ಲಾಗಿತ್ಲಾಗಿ ಮಾತಾಡಿಂಡು ಕೂದವು ಎಲ್ಲೋರು. ಮನು ಮದುವೆಪ್ಪ ಕೂಸಿನ ನೋಡ್ಲೆ ಮಂಜರಿಯ ಮನಸ್ಸು ಕಾಯ್ತಾ ಇದ್ದತ್ತು.


ಹವ್ಯಕ ಕಥೆ: ಮಂಜರಿ (ಭಾಗ-2) ಓದಲು ಇಲ್ಲಿ ಕ್ಲಿಕ್ ಮಾಡಿ.


'ಹೇಂಗಿದ್ದ ಕೂಸಾದಿಕ್ಕು ಅವನ ಕೈ ಹಿಡಿವ ಭಾಗ್ಯವಂತೆ. ನಿಜಕ್ಕೂ ಈ ಮನೆ, ಮನೆಯವರ ಕಾಂಬಗ ಒಳ್ಳೆಯವರ ಹಾಂಗಾವ್ತು. ಮನು ಆ ಕೂಸಿನ ಚೆಂದಕೆ ನೋಡುಗು' ಹಾಂಗೆ ಗ್ರೇಶಿಯಪ್ಪಗ ಮಾತ್ರ ಮನಸ್ಸಿನ ಮೂಲೆಲಿ ಸಣ್ಣ ಮುಳ್ಳು ಕಂತಿದ ಅನುಭವ ಆತು ಅದಕ್ಕೆ.


ಗಂಟೆ ಹನ್ನೆರಡು ಕಳುದರೂ ಕೂಸಿನ ಕಡೆಯವು ಆರೂ ಬಯಿಂದವೇ ಇಲ್ಲೆ. ಕಾದು ಕಾದು ಬೊಡುದಪ್ಪಗ ಕೂಸಿನ ಮಾತಾಡ್ಸಿದ ದಲಾಲಿಗೆ ಪೋನು ಮಾಡಿದವು. ಆ ಜೆನ ಸುರುವಿಂಗೆ ಪೋನು ತೆಗೆಯದ್ರೂ ತುಂಬ ಸರ್ತಿ ಮಾಡಿಯಪ್ಪಗ ತೆಗದಿಕ್ಕಿ 


ಹವ್ಯಕ ಕಥೆ: ಮಂಜರಿ (ಭಾಗ-1) ಓದಲು ಇಲ್ಲಿ ಕ್ಲಿಕ್ ಮಾಡಿ.


"ಕೂಸಿಂಗೆ ಅಷ್ಟು ದೂರಕೆ ಮದುವೆ ಆಗಿ ಬಪ್ಪಲೆ ಮನಸ್ಸೀಲೇಡ. ಅವು ಈ ಪೊದು ಬೇಡ ಹೇಳಿದ್ದವು "ಹೇಳಿದ°.


ಬಂದವೆಲ್ಲ ಮೋರೆ ಮೋರೆ ನೋಡಿ ಗುಸುಗುಸು ಮಾತಾಡ್ಯೊಂಡವು.


"ಇದರ ಆ ಮನುಶ್ಯಂಗೆ ಮೊದಲೇ ಹೇಳ್ತಾವ್ತಿತಿಲ್ಯಾ?"


"ಛೇ..... ಈಗ ಹೀಂಗಿದ್ದ ಮಾಣಿಯಂಗಳ ಮದುವೆ ಅಪ್ಪಲೆ ಆರೂದೆ ಮುಂದೆ ಬತ್ತವಿಲ್ಲೆ. 



ಮನುವಿನ ಮೋರೆ ಕೆಂಪು ಕೆಂಪಾತು. ಅವನ ಮನಸಿಂಗೆ ಸಂಕಟ ಆವ್ತು ಹೇಳಿ ಮಂಜರಿಗೆ ಗೊಂತಾತು. ಓಡಿ ಹೋಗಿ "ನಿಂಗೊ ಬೇಜಾರು ಮಾಡೆಡಿ. ನಿಂಗೊ ಒಪ್ಪಿರೆ ಆನು ನಿಂಗಳ ಮದುವೆಯಾವ್ತೆ" ಹೇಳಿ ಹೇಳೆಕೂಳಿ ಆತು.


ರಜ್ಜ ಹೊತ್ತು ಎಲ್ಲೋರು ಅದೂ ಇದೂ ಮಾತಾಡಿ ಮನುವಿನ ತಮಾಷೆ ಮಾಡುಗ ಮಂಜರಿಯ ಮನಸ್ಸು ತಡದ್ದೇ ಇಲ್ಲೆ. ಗೆಂಡು ಮಕ್ಕಳ ಹೊಡೆಲಿ ಕೂದೊಂಡಿದ್ದ ಅಪ್ಪನ ಹತ್ತರೆ ಹೋಗಿ ಕೆಮಿಲಿ ಎಂತೋ ಹೇಳಿತ್ತು. ಅಪ್ಪ ಮಗಳ ಮಾತು ಕೇಳಿ ಒಂದರಿ ಮೋರೆ ತಿರುಗಿಸಿದವು. ಮತ್ತೆ ಅಬ್ಬೆಯ ದಿನಿಗೇಳಿ ಎಂತೋ ಅತ್ಲಾಗಿತ್ಲಾಗಿ ಮಾತಾಡಿದವು. ಮಾವನೂ ಅವರೊಟ್ಟಿಂಗೆ ಸೇರಿದವು.


ಅವು ಅಲ್ಲಿ ಮಾತಾಡ್ತಾ ಇಪ್ಪಗಳೇ ಮನುವಿನ ಸೋದರ ಮಾವ° ಅಲ್ಲಿಪ್ಪವರತ್ರೆ ಹೇಳಿದವು- "ಇಂದೀಗ ಈ ಮನೆಯ ಮನೋಹರನ ನಿಶ್ಚಿತಾರ್ಥ ಹೇಳಿ ನಾವೆಲ್ಲ ಸೇರಿದ್ದು.ಆದರೆ ಘಟ್ಟದ ಮೇಗಾಣ ಕೂಸಾದರೂ ಅದಕ್ಕೆ ಇಲ್ಲಿಗೆ ಬಪ್ಪಲೆ ಮನಸಿಲ್ಲದ್ದ ಕಾರಣ ನಾವು ಇನ್ನು ಆರನ್ನೂ ಕಾವಲಿಲ್ಲೆ. ಮನೋಹರನ ತಮ್ಮ ಮಧುಸೂಧನನ ಮದುವೆಯ ಆದಷ್ಟು ಬೇಗ ಮಾಡುವ ಅಂದಾಜು ಮಾಡಿದ್ದೆಯ°. ಇವಂಗೆ ಬೇಕಾಗಿ ಕಾದು ಅವನ ಭವಿಷ್ಯ ಹಾಳು ಮಾಡುದು ಬೇಡ.ಹಾಂಗಾಗಿ ಇನ್ನು ಎಲ್ಲೋರು ಊಟದ ಏರ್ಪಾಡು ಮಾಡುವ.


ಅವರ ಮಾತಿಂಗೆ ಅಲ್ಲಿಪ್ಪವೆಲ್ಲ "ಅದು ಶರಿಯಾಣ್(ಅದು ಸರಿ) ಹೇಳಿ ಹೇಳುದು ಕೇಳುಗ ಮಂಜರಿಯ ಕಣ್ಣಿಲ್ಲಿ ನೀರು ತುಂಬಿತ್ತು.ಚಪ್ಪರದ ಕಂಬಕ್ಕೆರಗಿ ತೇನ್ ಮಲ ಗುಡ್ಡೆಯನ್ನೇ ನೋಡಿಂಡು ಮಾತಾಡದ್ದೆ ನಿಂದ ಮನುವಿನ ಹತ್ತರಂಗೆ ಸೀದಾ ಹೋತು.

"ಕ್ಷಮಿಸಿ, ನಿಂಗೊ ಅಷ್ಟು ದೂರಂದ ಬಂದವಕ್ಕೆ ಎನ್ನ ಬದ್ಧದ ಊಟ ಸಿಕ್ಕಿದ್ದಿಲ್ಲೆ. ಅಂದರೂ ನಿಂಗೊ ಬಂದದು ತುಂಬಾ ಕೊಶಿಯಾತು. ನವಿಲುಗರಿ ಕುತ್ತಿದ ಕೃಷ್ಣನ ಪ್ರೀತಿಸುಲೆ ಹದಿನಾರು ಸಾವಿರದ ಎಂಟು ಹೆಮ್ಮಕ್ಕೊ ಇತ್ತಿದ್ದವು. ಈಗ ಆ ಕೃಷ್ಣನ ಪೂಜೆ ಮಾಡುವ ಎನ್ನ ಮದುವೆಪ್ಪಲೆ ಆರೂ ಇಲ್ಲೆ" ಅವನ ಕಣ್ಣಿಲ್ಲಿ ತೆಳುವಾಗಿ ನೀರಿನ ಪಸೆ ಕಂಡ ಹಾಂಗಾತದಕ್ಕೆ.'


'ಬೇಜಾರಾಗದ್ದಿಕ್ಕಾ? ಇಡೀ ಊರಿನವೇ ಅವನ ಇಷ್ಟ ಪಡ್ತವು.ಆದರೆ ಅದೆಲ್ಲ ಅವರವರ ಅಗತ್ಯಕ್ಕೆ ಮಾಂತ್ರ' ಮಂಜರಿ ಹೆಚ್ಚು ಆಲೋಚನೆ ಮಾಡಿದ್ದಿಲ್ಲೆ. ಅವನ ಎದುರು ನಿಂದು ಸೀದಾ ಕೇಳಿತ್ತು


"ಆನು ನಿಂಗಳ ಮದುವೆ ಆವ್ತೆ' ಹೇಳಿರೆ ಎಂತ ಮಾಡುವಿ?" 

"ಛೇ...ಎಂತರ ಮಾತಾಡುದು ನಿಂಗೊ? ನಿಂಗೊ ಎಲ್ಲಿ? ಆನೆಲ್ಲಿ? ಕಲ್ತು ಪೇಟೆಲಿ ಒಳ್ಳೆ ಕೆಲಸಲ್ಲಿಪ್ಪ ಮಾಣಿಯ ಮದುವೆಯಾಗಿ ಕೊಶೀಲಿರೆಕಾದವು ಎನ್ನ ಮದುವೆಪ್ಪದು ಹೇಳಿರೆ.....!!


ಮಂಜರಿಯ ಅಬ್ಬೆಯೂ, ಅಪ್ಪನೂ ಮನುವಿನ ಅಬ್ಬೆ ಅಪ್ಪನತ್ರೆ ಈ ವಿಶಯ ಮಾತಾಡಿದ್ದು ಆರಿಂಗೂ ಗೊಂತಾಯಿದಿಲ್ಲೆ. ಅವಕ್ಕೂ ಊರಿಂದ ಬಂದ ಕೂಸು ಈ ದೇವಸ್ಥಾನ ಪೂಜೆ ಮಾಡುವ ಮಗನ ಮದುವೆ ಆವ್ತು ಹೇಳುಗ ನಂಬಿಕೆಯೇ ಬಯಿಂದಿಲ್ಲೆ.


"ನಿಂಗೊ ಮಗಳಿಂಗೆ ಬುದ್ದಿ ಹೇಳಿ.ಮದುವೆ ಹೇಳಿರೆ ಮಕ್ಕಳಾಟಿಕೆ ಅಲ್ಲ"

"ಎನ್ನ ಮಗಳಿಂಗೆ ಸ್ವಂತ ಆಲೋಚನೆ ಇದ್ದು. ಅದರ ಈ ತೀರ್ಮಾನ ಎಂಗೊಗೂ ಕೊಶಿಯೇ‌. ಸೂಕ್ತ ವ್ಯಕ್ತಿಯನ್ನೇ ಮಗಳು ಇಷ್ಟ ಪಟ್ಟಿದು. ಇದಕ್ಕೆ ನಿಂಗಳ ಒಪ್ಪಿಗೆ ಸಿಕ್ಕಿರೆ ಸಾಕು" ಮಂಜರಿಯ ಅಪ್ಪ° ಅವರತ್ರೆ ಹೇಳಿಯಪ್ಪಗ ಅವು ಕೊಶೀಲಿ ಒಪ್ಪಿದವು.


"ನಿಂಗೊ ಮಗಳ ಕೊಡ್ತರೆ ಎಂಗೊ ಎಂತಕೆ ಬೇಡ ಹೇಳುದು. ಕೊಶೀಲಿ ಮನೆ ತುಂಬುಸಿ ಕೊಳ್ತೆಯ°. ಎಂಗಳ ಮನು ಪಾಪ.. ನಿಂಗಳ ಮಗಳ ಚಿನ್ನದ ಹಾಂಗೆ ನೋಡ್ಯೊಂಗು ಹೇಳಿ ಭರವಸೆ ಕೊಡ್ತೆಯ°"


ಮತ್ತೆ ಕಾಲು ಗಂಟೆಲಿ ಆ ಮನೆಯ ವಾತಾವರಣವೇ ಬದಲಿತ್ತು. ಎಲ್ಲೋರು ಮಂಜರಿಯ ಹೊಗಳುವವೇ. ಅದರ ಅಬ್ಬೆ ಅಪ್ಪನ ತೀರ್ಮಾನವನ್ನು ಮೆಚ್ಚಿದವು.

"ನಿಂಗಳ ಹಾಂಗಿದ್ದ ಅಬ್ಬೆ ಅಪ್ಪ° ಆಯೆಕು. ಮುಂದೆ ನಮ್ಮ ಸಮಾಜ, ನಮ್ಮ ಸಂಸ್ಕೃತಿಗಳ ಒಳುಶಲೆ ಮಾದರಿ ಆಯಿದಿ" ಹೇಳಿ ಹೇಳುಗ ಶಾಲಿನಿ ಮಾಂತ್ರ ಮಂಜರಿಯ ಕೆಮಿಲಿ "ಆನು ಇಷ್ಟು ವರ್ಷ ದೇವಸ್ಥಾನಕ್ಕೆ ಹೋಗಿ ದೇವರು ಒಲುದ್ದಾ° ಇಲ್ಲೆ ಮಾರಾಯ್ತೀ... ನಿನಗೆ ಒಂದೇ ವಾರಲ್ಲಿ......!! ಎನಗೆ ನಿನ್ನೆ ಉದಿಯಪ್ಪಗ ನೀನು ದೇವರ ನೋಡಿ ಮೈ ಮರವಗಳೇ ರಜಾ ಸಂಶಯ ಬಯಿಂದು. ಈಗ ನೋಡು ಅದಾ ನಿನ್ನ ಕೃಷ್ಣ ಚಾಮಿ ನಿನ್ನನ್ನೇ ನೋಡ್ತ° ಒಂದರಿ ಅತ್ಲಾಗಿ ನೋಡು, ಕಣ್ಣಿಂಗೆ ಪುಣ್ಯ ಬಕ್ಕು.." ಹೇಳಿ ತಮಾಷೆ ಮಾಡಿತ್ತು.


"ಹೋಗಾ° ನಿನ್ನ ಒಂದು ಕುಶಾಲು" ಹೇಳಿ ಕುಶಾಲಿಂಗೆ ಅದರ ಕೆಮಿ ಹಿಡುದರೂ ಮನುವಿನ ಓರೆ ನೋಟಕ್ಕೆ ನಾಚಿಕೆಲಿ ತಲೆ ತಗ್ಗುಸಿದ ಅದರ ಮನಸ್ಸಿಲ್ಲಿ ನವಿಲು ಗರಿ ತಲೆಲಿ ಕುತ್ತಿದ ಕೃಷ್ಣನ ರೂಪಲ್ಲಿ ಮನು ಇದ್ದರೆ, ಅವಂಗೆ ಎರಗಿ ನಿಂದ ರಾಧೆಯಾಗಿ ಅದರ ಬಿಂಬವೇ ಕಂಡತ್ತು.


- ಪ್ರಸನ್ನಾ ವಿ ಚೆಕ್ಕೆಮನೆ, ಧರ್ಮತ್ತಡ್ಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top