ಮಂಗಳೂರು: ತಮಿಳುನಾಡಿನ ಚೆಂಗಲ್ಪೇಟ್ ನಲ್ಲಿ ನಿರ್ಮಾಣಗೊಂಡು ಅಮೇರಿಕಾಕ್ಕೆ ತೆರಳಲಿರುವ ಆಂಜನೇಯನ ಬೃಹತ್ ಏಕಶಿಲಾ ವಿಗ್ರಹದ ನಿರ್ಮಾಣ ಕಾರ್ಯ ಶೀಘ್ರ ಪರಿಸಮಾಪ್ತಿಗೆ ಪ್ರಾರ್ಥಿಸಿ ಶ್ರೀ ಪೇಜಾವರ ಶ್ರೀಗಳಿಂದ ಪೂಜೆ ಬುಧವಾರ ನೆರವೇರಿತು.
ಅಮೇರಿಕಾದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಆಂಜನೇಯನ ದೇವಸ್ಥಾನದಲ್ಲಿ ಆರಾಧಿಸುವ ಸಲುವಾಗಿ ಈ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಿಲಾಪ್ರತಿಮೆಯು ಸಂಯೋಜಕರ ಸಂಕಲ್ಪದಂತೆ ಸುಂದರವಾಗಿ ಮೂಡಿ ಬರಬೇಕು; ಹಾಗೂ ಅದರ ನಿರ್ಮಾಣ ಕಾರ್ಯ ಅತೀ ಶೀಘ್ರವಾಗಿ ಸಂಪನ್ನಗೊಂಡು ಸುಸೂತ್ರವಾಗಿ ಅಮೇರಿಕಾಕ್ಕೆ ಸಾಗಿಸುವಂತಾಗಬೇಕೆಂದು ಪ್ರಾರ್ಥಿಸಿ ಅಯೋಧ್ಯಾ ರಾಮಮಂದಿರದ ಟ್ರಸ್ಟಿಗಳೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಲ್ಲಿ ಪ್ರತಿಮೆ ನಿರ್ಮಾಣ ಸ್ಥಳದಲ್ಲಿ ತಮ್ಮ ಪಟ್ಟದ ದೇವರಾದ ಶ್ರೀ ರಾಮವಿಠಲ ದೇವರ ಪೂಜೆ ನೆರವೇರಿಸಿ ಪ್ರಾರ್ಥಿಸುವಂತೆ ದೇವಸ್ಥಾನದ ಸಮಿತಿಯು ವಿನಂತಿಸಿತ್ತು.
ಅದರಂತೆ ಬೆಂಗಳೂರಿನ ತಮ್ಮ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಳಿಸಿದ ಶ್ರೀಗಳು ಮಂಗಳವಾರ ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದಿದ್ದರು. ಅಲ್ಲಿಂದ ಮಂಗಳವಾರ ತಡರಾತ್ರಿ ನೇರ ಚೆನ್ನೈ ತಲುಪಿದ್ದರು. ಬುಧವಾರ ಬೆಳಿಗ್ಗೆ ಚೆಂಗಲ್ಪೇಟ್ ಗೆ ತೆರಳಿ ರಾಮ ದೇವರ ಪೂಜೆಗೈದು ಪ್ರತಿಮೆಗೆ ರಾಮನ ತೀರ್ಥ, ಗಂಧ ಪ್ರಸಾದ ಹಾಕಿ ಶೀಘ್ರ ನಿರ್ಮಾಣ ಕಾರ್ಯ ಸಮಾಪ್ತಿಯಾಗಿ ಯಾವುದೇ ವಿಘ್ನವಿಲ್ಲದೇ ಅಮೇರಿಕಾ ತಲುಪುವಂತಾಗಲೆಂದು ಪ್ರಾರ್ಥಿಸಿದರು. ದೇವಸ್ಥಾನದ ಮಂಡಳಿಯವರು ಶ್ರೀಗಳಿಗೆ ಭಕ್ತಿಗೌರವ ಸಮರ್ಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ