ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ

Upayuktha
0


ಉಜಿರೆ: ಹದಿಹರೆಯ ಎಂದರೆ ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಅವಧಿ. ಬಾಲ್ಯದ ಕೊನೆಯಲ್ಲಿ ದೈಹಿಕವಾಗಿ ಎತ್ತರ ಮತ್ತು ತೂಕದಲ್ಲಿ ತ್ವರಿತ ಬೆಳವಣಿಗೆಯಾಗುತ್ತದೆ. ಹದಿಹರೆಯದಲ್ಲಿ ದೈಹಿಕ ಪಕ್ವತೆಯ ಜೊತೆಗೆ ಮಾನಸಿಕ ತುಮಲಗಳು ಉಂಟಾಗುತ್ತವೆ. ಇದಕ್ಕೆ ಕಾರಣ ಈ ಸಮಯದಲ್ಲಿ ಹಾರ್ಮೋನ್  ಬದಲಾವಣೆಯಾಗುವುದು. ಇದಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗುತ್ತದೆ. ಅನೇಕ ಉತ್ತಮ ಹವ್ಯಾಸಗಳು ಹಾಗೂ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಉತ್ತಮ. ಪೌಷ್ಟಿಕ ಆಹಾರ ಸೇವನೆಯೊಂದಿಗೆ ಮಾನಸಿಕ ಏಕಾಗ್ರತೆ ಅತಿಮುಖ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ಯಾಮಿಲಾ ಇವರು ಹೇಳಿದರು. 


ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯಶಾಸ್ತ್ರ ತರಗತಿಯ ವಿದ್ಯಾರ್ಥಿಗಳಿಗೆ ಹದಿಹರಯದ ಸವಾಲುಗಳು ಎಂಬ ವಿಷಯದ ಬಗ್ಗೆ ಅತಿಥಿ ಉಪನ್ಯಾಸದೊಂದಿಗೆ ತರಬೇತಿ ನೀಡಿದರು. 


ತರಗತಿಯ ಮಾರ್ಗದರ್ಶಕರಾದ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಪ್ರಭಾವತಿ ಮತ್ತು ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. 


ವಿದ್ಯಾರ್ಥಿ ಅರ್ನಲ್ ಜಾರ್ಜ್ ಸ್ವಾಗತಿಸಿ, ಹೆಚ್. ಶರಧಿ ಪರಿಚಯಿಸಿದರು. ಅನುಷಾ ನಿರೂಪಿಸಿ, ಆರ್ಯನ್ ರಾವ್ ವಂದಿಸಿದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top