ಕಾಪು: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿ ನಡೆದ ದೈಹಿಕ ಶಿಕ್ಷಣ ವಿಭಾಗ ಮತ್ತು ಐಕ್ಯೂಎಸಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ “ರಾಷ್ಟ್ರೀಯ ಕ್ರೀಡಾ ದಿನಾಚರಣೆ” ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ Weightlifter and Bodybuilder ಅಶ್ವಿನ್ ಸನಿಲ್ ಆಗಮಿಸಿದ್ದರು. ಇವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಕ್ರೀಡೆಯನ್ನು ತಮ್ಮ ಜೀವನದಲ್ಲಿ ಆಳವಡಿಸುವುದರಿಂದ ಅವರಲ್ಲಿ ಆತ್ಮಸ್ಥೆರ್ಯ, ಆತ್ಮವಿಶ್ವಾಸ, ಹೆಚ್ಚಾಗುತ್ತದೆ. ಸೋಲು ಗೆಲುವುವನ್ನು ಸಮಾನವಾಗಿ ತೆಗೆದುಕೊಂಡು ಹೋಗುವಂತ ದೃಢವಿಶ್ವಾಸ ಬೆಳೆಯುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ ಮತ್ತು ಆರೋಗ್ಯವಾಗಿರುತ್ತದೆ ಹಾಗೂ ದುಶ್ಚಟಗಳಿಂದ ದೂರವಿರುಸುತ್ತದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಪ್ರೊ. ಗಾಂವ್ಕರ್ ಗೋಪಾಲಕೃಷ್ಣ ಎಂ. ಇವರು ಮಾತನಾಡಿ ಮೇಜರ್ ಧ್ಯಾನ್ ಚಂದ್ ಇವರ ಹಾಕಿ ಆಟ ನಮಗೆಲ್ಲರಿಗೂ ಸ್ಪೂರ್ತಿ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸುವುದರಿಂದ ಆರೋಗ್ಯವನ್ನು ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ರೋಶ್ನಿ ಯಶವಂತ್, ಕ್ರೀಡಾ ಕಾರ್ಯದರ್ಶಿ ಕುಮಾರಿ ಅಶ್ವಿನಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸವಿತಾ ಸ್ವಾಗತಿಸಿ, ಕುಮಾರಿ ಮನೀಷ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ದಿಯಾ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ವೃಂದ, ಕಚೇರಿ ಸಿಬ್ಬಂದಿಗಳು , ವಿದ್ಯಾರ್ಥಿಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


