2024-25 ನೇ ಸಾಲಿನಲ್ಲಿ ರೂ.1,06,60,294 ನಿವ್ವಳ ಲಾಭ
ಬಳ್ಳಾರಿ: ವರದವಿನಾಯಕ ಕ್ರೆಡಿಟ್ ಸಹಕಾರ ಸಂಘ ನಿಯಮಿತ, ಬಳ್ಳಾರಿ ನಗರದ ಪಾರ್ವತಿ ಮಿನಿ ಫಂಕ್ಷನ್ ಹಾಲ್ ಪಾರ್ವತಿ ನಗರ ಬಳ್ಳಾರಿಯಲ್ಲಿ ಶನಿವಾರ (ಸೆ.6) ಹದಿನಾಲ್ಕನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಜೆ.ಎಸ್. ನೇಪಾಕ್ಷಪ್ಪ ರವರ ಅಧ್ಯಕ್ಷತೆಯಲ್ಲಿ, ಸಂಘದ ಸಂಸ್ಥಾಪಕ ಎನ್. ಅಯ್ಯಪ್ಪ, ಹಿರಿಯ ನ್ಯಾಯವಾದಿಗಳು, ಬಳ್ಳಾರಿ ಹಾಗೂ ನಿರ್ದೇಶಕರು ಮತ್ತು ಸಮಸ್ತ ಸದಸ್ಯರುಗಳ ಸಮ್ಮುಖದಲ್ಲಿ ಸರ್ವ ಸದಸ್ಯರ ಸಭೆಯನ್ನು ಜರುಗಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷರು ಕಳೆದ ಸಾಲಿನ ವರದಿ ಮಂಡಿಸಿ ಮಾತನಾಡುತ್ತಾ, 2024-25 ನೇ ಸಾಲಿನಲ್ಲಿ ಸಂಘವು ಒಟ್ಟು ರೂ.1,06,60,294-53 ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿ, ಸಂಘದ ಸದಸ್ಯರಿಗೆ ಶೇಕಡ 24 ರಂತೆ ಲಾಭಾಂಶ ನೀಡಲು ಘೋಷಿಸಿದರು. ಸಂಘದ ಅಂದಾಜು ಮುಂಗಡ ವಹಿವಾಟು ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ವಿ.ಭಾಸ್ಕರ್ ರಾವ್, ವಿಶೇಷ ಆಹ್ವಾನಿತರಾಗಿ ಕಾಪು ರಾಮಚಂದ್ರ ರೆಡ್ಡಿ, ಮಾಜಿ ಶಾಸಕರು ರಾಯದುರ್ಗ ಹಾಗೂ ರಾಜ್ಯ ಉಪಾಧ್ಯಕ್ಷರು ಭಾರತೀಯ ಜನತಾ ಪಕ್ಷ, ಆಂಧ್ರಪ್ರದೇಶ, ಸಂಘದ ನಿರ್ದೇಶಕರುಗಳಾದ ಉಡೇದ ಬಸವರಾಜ, ವಿ. ಆಂಜಿನೇಯಲು, ಹೆಚ್.ಬಾಳನಗೌಡ, ಕೆ. ಮಲ್ಲಿಕಾರ್ಜುನ ಗೌಡ, ಶ್ರೀಮತಿ ಸುರೇಖಾ ಪಾಟೀಲ್, ಶ್ರೀಮತಿ ಹೆಚ್.ಸುಮಾರಾಣಿ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಎನ್.ಆರ್, ಜ್ಯೋತಿ, ಕಾಸೀಂಸಾಬ್, ಬಿ.ಈರಪ್ಪ, ಕೆ. ದೊಡ್ಡಮಹೇಶ್ ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ಎನ್. ಪ್ರಭು ಹಾಗೂ ಸಂಘದ ಸಿಬ್ಬಂದಿ ಪಾಲ್ಗೊಂಡಿದ್ದರು. ಸಭೆಯ ನಿರೂಪಣೆಯನ್ನು ಹೊಸೂರು ಈಶ್ವರಗೌಡ ರವರು ನೆರವೇರಿಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ