ಕ್ರೋಧಾದ್ ಭವತಿ ಸಮ್ಮೋಹಃ
ಸಮ್ಮೋಹಾತ್ ಸ್ಮೃತಿ ವಿಭ್ರಮಃ|
ಸ್ಮೃತಿ ಭ್ರಂಶಾತ್ ಬುದ್ಧಿನಾಶಃ
ಬುದ್ಧಿನಾಶಾತ್ ವಿನಶ್ಯತಿ ||
ಭಗವದ್ಗೀತೆ
ಮನೆ ಮನಸ್ಸು ಊರು ಕೇರಿ ಸಮಾಜ ದೇಶಕ್ಕೆ ಬೆಳಕಾಗಬಹುದಾಗಿದ್ದ ಸಾಮಾಜಿಕ ಜಾಲತಾಣವೆಂಬ ಜ್ಯೋತಿ ಮನುಷ್ಯನ ಲಗಾಮು ತಪ್ಪಿದರೆ ಜ್ವಾಲೆಯಾಗಿ ಇಡೀ ದೇಶವನ್ನೇ ಆಪೋಶನ ತೆಗೆದುಕೊಂಡು ಸರಿಪಡಿಸಲಾಗದಷ್ಟು ನಾಶದೆಡೆದೆಡೆಗೆ ತೆಗೆದುಕೊಂಡು ಹೋದೀತೆಂಬುದಕ್ಕೆ ನೇಪಾಲ ಜ್ವಲಂತ ಸಾಕ್ಷಿ.. ಸಾಮಾಜಿಕ ಜಾಲತಾಣಗಳೆಂಬ ಮೋಹದ ಬಲೆಗೆ ಅದೆಷ್ಟು ಯುವಕ ಯುವತಿಯರ ಬದುಕೇ ಸರ್ವನಾಶವಾಗ್ತಾ ಇದೆ ಎಂಬುದನ್ನು ನಿತ್ಯ ನೋಡ್ತಾ ಇದ್ದೇವೆ. ಒಂದು ರಾಷ್ಟ್ರದ ಒಳಿತಿಗೆ (ಬೇಕಿತ್ತೋ ಬೇಡವೋ ಯೋಚನೆ ಇದ್ದೇ ಇದೆ) ಅಂತ ನಿರ್ಬಂಧಿಸುವ ನಿರ್ಧಾರ ಸರ್ಕಾರ ಮಾಡಿದಾಗ ಆ ಜಾಲತಾಣಗಳ ಮೋಹ ಪಾಶದಲ್ಲಿ ಬಂಧಿಗಳಾಗಿದ್ದ ಯುವ ಸಮುದಾಯ ಆಕ್ರೋಶಗೊಂಡು ಸ್ಮೃತಿ ಭ್ರಂಶರಾಗಿ ವರ್ತಿಸಿ ಬುದ್ಧಿ ನಾಶಗೊಂಡು ವರ್ತಿಸಿದ ಪೈಶಾಚಿಕ ವರ್ತನೆಗಳಿಗೆ ಇಡೀ ದೇಶ ಅನುಭವಿಸಿದ ನಷ್ಟ ನೋವು ದುಃಖಗಳ ಪರಿಮಾರ್ಜನೆ ಹೇಗೆ? ಎಲ್ಲಿಂದ? ಯಾವಾಗ? ಯಾರಿಂದ? ....ಓಹ್.. ದೇವರೇ ಬಲ್ಲ...
ಭಾರತದ ನೆರೆಯ ಹಾಗೂ ಹಿಂದುಗಳೇ ಅಧಿಕವಾಗಿರುವ ನೇಪಾಳದ ನೋವಿಗೆ ಒಂದು ಸಹಾನುಭೂತಿ ಮತ್ತು ಆ ನೋವಿನಿಂದ ದೇಶ ಆದಷ್ಟು ಬೇಗ ಚೇತರಿಸಿಕೊಂಡು ಶಾಂತಿ ಸುಭಿಕ್ಷೆ ನೆಲೆಸುವಂತಾಗಲೆಂದು ಮಾತ್ರ ದೇವರಲ್ಲಿ ನನ್ನ ಪ್ರಾರ್ಥನೆ... ಪ್ರಾಯಃ ನಿಮ್ಮದೂ ಅದೇ ಆಗಿರಬಹುದು. ಹೇ ಕೃಷ್ಣಾ... ಧಿಯೋ ಯೋನಃ ಪ್ರಚೋದಯಾತ್
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ