ಮಂಗಳೂರು: ಈ ಸಾಲಿನ ಪ್ರತಿಷ್ಠಿತ ರಚನಾ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಐವರು ಸಾಧಕರಿಗೆ ನೀಡಲಾಗುತ್ತಿದೆ. ಇಂದು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಚನಾ ಸಂಸ್ಥೆಯ ಅಧ್ಯಕ್ಷ ಜೊನ್ ಬಿ. ಮೊಂತೇರೊ ಈ ಕುರಿತು ಮಾಹಿತಿ ನೀಡಿದರು.
ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಈ ಕೆಳಗಿನ ವ್ಯಕ್ತಿಗಳನ್ನು 2025ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ:
ರಚನಾ ಉದ್ಯಮಿ - ಆಸ್ಟಿನ್ ರೋಚ್, ಬೆಂಗಳೂರು, ರಚನಾ ವೃತ್ತಿಪರ – ಜಾನ್ ರಿಚರ್ಡ್ ಲೋಬೊ ಕೆ.ಎ.ಎಸ್, ಮಂಗಳೂರು, ರಚನಾ ಕೃಷಿಕ - ಡಾ. ಗಾಡ್ವಿನ್ ರೊಡ್ರಿಗಸ್ ಪಿಎಚ್‌ಡಿ, ಬೆಳ್ವಾಯಿ, ಮಂಗಳೂರು, ರಚನಾ ಅನಿವಾಸಿ ಉದ್ಯಮಿ - ಪ್ರತಾಪ್ ಮೆಂಡೋನ್ಸಾ, ದುಬಾಯ್, ರಚನಾ ಮಹಿಳಾ ಸಾಧಕಿ – ಶೋಭಾ ಮೆಂಡೋನ್ಸಾ, ದುಬಾಯ್.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2025ರ ಅಕ್ಟೋಬರ್ 5 ರಂದು ಭಾನುವಾರ ಸಂಜೆ 6.00 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ, ಮಂಗಳೂರಿನ ಬಿಷಪ್ ಅತೀ ಡಾ| ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಜ್ಯದ ಇಂಧನ ಸಚಿವ ಕೆ. ಜೆ. ಜಾರ್ಜ್, ಇವರು ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯುಎಇಯ ಬುರ್ಜೀಲ್ ಹೋಲ್ಡಿಂಗ್ಸ್‌ನ ಸಮೂಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಸುನಿಲ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಡೀನ್ ಮತ್ತು ನಿರ್ದೇಶಕಿ ಡಾ. ಸಿಂಥಿಯಾ ಮಿನೇಜಸ್ - ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಿಜಯ್ ವಿ. ಲೋಬೊ, ಖಜಾಂಚಿ ನೆಲ್ಸನ್ ಮೊಂತೇರೊ, ಉಪಾಧ್ಯಕ್ಷ ನವೀನ್ ಲೋಬೊ, ಸಂಘಟಕ ಯುಲಾಲಿಯಾ ಡಿಸೋಜಾ ಹಾಜರಿದ್ದರು.
ರಚನಾ ಸಂಸ್ಥೆಯ ಕುರಿತು:
1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ.
ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗಿದೆ. ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


