ಹಿರಿಯ ಪತ್ರಿಕಾ ವಿತರಕ ರಮೇಶ್ ಯಾದವ್ ಅವರಿಗೆ ಸನ್ಮಾನ

Chandrashekhara Kulamarva
0




ಮಂಗಳೂರು: ಪತ್ರಿಕಾ ವಿತರಕರ ದಿನದ ಅಂಗವಾಗಿ ಹಿರಿಯ ಪತ್ರಿಕಾ ವಿತರಕರಾಗಿರುವ ಅತ್ತಾವರದ ರಮೇಶ್ ಯಾದವ್ ಅವರನ್ನು ಕಂಕನಾಡಿ ರೇಣುಕಾರಾಜ್ ನ್ಯೂಸ್ ಏಜನ್ಸಿ  ಅವರ ವತಿಯಿಂದ ಸನ್ಮಾನಿಸಲಾಯಿತು.


ಕಳೆದ 62 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಪತ್ರಿಕೆ ಮಾಲೀಕರು ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಶುಭ ಹಾರೈಸಿದರು. ಪತ್ರಿಕಾ ವಿತರಕರೇ ಪತ್ರಿಕೆಯ ಜೀವಾಳವಾಗಿದ್ದಾರೆ. ಅತೀ ಶೀಘ್ರವೇ ರಮೇಶ್ ಯಾದವ್ ಅವರಿಗೆ ದ್ವಿಚಕ್ರ ವಾಹನ ಕೊಡಿಸುವುದಾಗಿ ಭರವಸೆ ನೀಡಿದರು.


ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಶ್ರೀನಿವಾಸ್ ನಾಯಕ್ ಇಂದಾಜೆ, ರೇಣುಕಾರಾಜ್ ನ್ಯೂಸ್ ಏಜನ್ಸಿ ಮಾಲೀಕ ನಾಗರಾಜ್ ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top