ಡಿಜಿಟಲ್ ಬಸ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅತಿಯಾದ ದರ ಏರಿಕೆಗೆ ನಿಯಂತ್ರಣ ಅಗತ್ಯ

Chandrashekhara Kulamarva
0

ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ವತಿಯಿಂದ ರಾಜ್ಯ ಸಾರಿಗೆ ಸಚಿವರಿಗೆ ಮನವಿ




ಬೆಂಗಳೂರು: ಸುರಾಜ್ಯ ಅಭಿಯಾನವು ಕರ್ನಾಟಕ ಸರ್ಕಾರದ ಗಮನಕ್ಕೆ ಒಂದು ತುರ್ತು ವಿಷಯವನ್ನು ತಂದಿದೆ. ಪ್ರಸ್ತುತ ರೆಡ್‌ಬಸ್‌, ಮೇಕ್‌ಮೈಟ್ರಿಪ್‌ (MakeMyTrip) ಮುಂತಾದ ಆನ್‌ಲೈನ್‌ ಬಸ್‌ ಟಿಕೆಟ್‌ ಬುಕ್ಕಿಂಗ್‌ ಪ್ಲಾಟ್‌ಫಾರ್ಮ್‌ಗಳು ಹಬ್ಬ-ಹರಿದಿನಗಳು ಹಾಗೂ ರಜಾದಿನಗಳ ಸಂದರ್ಭದಲ್ಲಿ ಅನಿಯಂತ್ರಿತ ದರ ಏರಿಕೆ (Surge Pricing) ಮಾಡುತ್ತಿವೆ.


ಪ್ರಯಾಣಿಕರು ಯಾವುದೇ ಪಾರದರ್ಶಕತೆ ಇಲ್ಲದೆ ಅತಿಯಾದ ಟಿಕೆಟ್‌ ದರಗಳನ್ನು ಕಟ್ಟುವಂತಾಗುತ್ತಿದೆ. ಕೇಂದ್ರ ಸರ್ಕಾರದ “ಮೋಟರ್ ವೀಹಿಕಲ್ ಅಗ್ರಿಗೇಟರ್ ಮಾರ್ಗಸೂಚಿ 2020” ಪ್ರಕಾರ ಗರಿಷ್ಠ ದರವನ್ನು ಮೂಲ ದರದ 1.5 ಪಟ್ಟು ನಿಗದಿ ಮಾಡಲಾಗಿದೆ. ಆದರೆ, ಖಾಸಗಿ ಬಸ್‌ ಆಪರೇಟರ್‌ಗಳು ಹಾಗೂ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪಷ್ಟ ನಿಯಮಾವಳಿ ಇಲ್ಲದ ಕಾರಣ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ವತಿಯಿಂದ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು.


ಅತಿಯಾದ ದರ ಏರಿಕೆಯ ಉದಾಹರಣೆ (ಮಂಗಳೂರು–ಬೆಂಗಳೂರು ಮಾರ್ಗ)

ದಿನಾಂಕ ಬಸ್ ಕಂಪನಿ ಬಸ್ ಪ್ರಕಾರ ದರ

5 ಅಕ್ಟೋಬರ್ 2025 ಸುಗಮಾ ಟೂರಿಸ್ಟ್‌ (Non AC Sleeper) ರೂ.1900

14 ಅಕ್ಟೋಬರ್ 2025 ಅದೇ ಬಸ್ ರೂ.700

18 ಅಕ್ಟೋಬರ್ 2025 ಅದೇ ಬಸ್ ರೂ.1450

ಗ್ರೀನ್‌ಲೈನ್ ಟ್ರಾವೆಲ್ಸ್ (AC Sleeper) 5 ಅಕ್ಟೋಬರ್ 2025 – ರೂ.3249, 14 ಅಕ್ಟೋಬರ್ 2025 – ರೂ.999, 18 ಅಕ್ಟೋಬರ್ 2025 – ರೂ.2249


ಈ ಅಂಕಿಅಂಶಗಳು ದರಗಳಲ್ಲಿ ನಡೆಯುತ್ತಿರುವ ಅತಿಯಾದ ಬದಲಾವಣೆ ಮತ್ತು ಶೋಷಣೆಯನ್ನು ಸ್ಪಷ್ಟಪಡಿಸುತ್ತವೆ.


ಸುರಾಜ್ಯ ಅಭಿಯಾನದ ಆಗ್ರಹಗಳು :


1. ಹಬ್ಬ–ರಜಾದಿನಗಳಲ್ಲಿ ದರ ಏರಿಕೆಗೆ ಸ್ಪಷ್ಟ ಮಿತಿ (Cap) ನಿಗದಿಪಡಿಸುವಂತೆ ಸರ್ಕಾರವು ನಿಯಂತ್ರಣ ಮಾರ್ಗಸೂಚಿ ತರಬೇಕು.


2. ಪಾರದರ್ಶಕ ದರ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಗ್ರಾಹಕರಿಗೆ ದರ ಏರಿಕೆಯ ವಿಧಾನವನ್ನು ತಿಳಿಸಬೇಕು.


3. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಈ ಪ್ಲಾಟ್‌ಫಾರ್ಮ್‌ಗಳನ್ನು ಕಾನೂನು ಬದ್ಧವಾಗಿ ಹೊಣೆಗಾರರನ್ನಾಗಿಸಬೇಕು.


4. ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ಖಾಸಗಿ ಬಸ್‌ ಪ್ಲಾಟ್‌ಫಾರ್ಮ್‌ಗಳನ್ನೂ ಸೇರಿಸುವಂತೆ ಶಿಫಾರಸು ಮಾಡಬೇಕು.


ಸಮಯೋಚಿತ ನಿಯಂತ್ರಣದಿಂದ ಗ್ರಾಹಕರನ್ನು ಶೋಷಕ ದರ ಏರಿಕೆಯಿಂದ ರಕ್ಷಿಸಿ, ಸ್ಪರ್ಧಾತ್ಮಕತೆ ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಬಹುದು. ಸುರಾಜ್ಯ ಅಭಿಯಾನವು ಈ ವಿಷಯದಲ್ಲಿ ಸರ್ಕಾರದ ತ್ವರಿತ ಕ್ರಮ ಹಾಗೂ ಪ್ರಯಾಣಿಕರ ಹಕ್ಕುಗಳ ರಕ್ಷಣೆಯ ನಿರೀಕ್ಷೆಯಲ್ಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top