ಯಕ್ಷ ಸಾಧಕ ಹಟ್ಟಿಯಂಗಡಿ ಆನಂದ ಶೆಟ್ಟಿಯವರಿಗೆ ಸನ್ಮಾನ

Upayuktha
0

 


ದಾವಣಗೆರೆ:  ದಾವಣಗೆರೆಯ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ. ಜಿಎಸ್ ಶಿವರುದ್ರಪ್ಪ ಭವ್ಯ ದಿವ್ಯ ವೇದಿಕೆಯಲ್ಲಿ ಮೂರು ದಶಕಗಳ ಕಾಲ ಕರ್ನಾಟಕ ಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಅಪ್ಪಟ ಕನ್ನಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಭವಿಕರಿಸಿದ ಯಕ್ಷಗಾನ ದೈವಾರಾಧನೆಯ ಯಕ್ಷಸೇವೆಯನ್ನು ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಪಸರಿಸಿದ ಸಾಧನೆಗಳನ್ನು ಗುರುತಿಸಿ ಹಟ್ಟಿಯಂಗಡಿ ಆನಂದ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 


ಯಕ್ಷಗಾನ ಕಲಾವಿದರು, ಯಕ್ಷ ಸಾಧಕರಾದ ಆನಂದ ಶೆಟ್ಟಿ ಅವರು ನಿರಂತರವಾಗಿ ಮಕ್ಕಳಿಗೆ, ಮಹಿಳೆಯರಿಗೆ ಉಚಿತವಾಗಿ ಯಕ್ಷಗಾನ ತರಬೇತಿ, ಶಾಲಾ-ಕಾಲೇಜುಗಳಲ್ಲಿ ಯಕ್ಷಗಾನ ಪ್ರದರ್ಶನ, ಸಾಂಪ್ರದಾಯಿಕ ಯಕ್ಷವೇಷ ಭೂಷಣ ನಡೆಯುತ್ತಾ ಬಂದ ಕಠಿಣ ಪರಿಶ್ರಮದ ಶೆಟ್ಟಿ ಅವರಿಗೆ ನೆರೆದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಲೂರು ಸಂತೋಷ ಕುಮಾರ ಶೆಟ್ಟಿ ಪ್ರಕಟಿಸಿದ್ದಾರೆ.


ಖ್ಯಾತ ಯಕ್ಷಗಾನ ಕಲಾವಿದರು, ಕೆನರಾ ಬ್ಯಾಂಕಿನ ಉದ್ಯೋಗಿಯಾದ ರಾಘವೇಂದ್ರ ನಾಯರಿ ಅವರ ನೇತೃತ್ವದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟ, ದಾವಣಗೆರೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ ಯಕ್ಷರಂಗ ಯಕ್ಷಗಾನ ಸಂಸ್ಥೆ, ದಾವಣಗೆರೆ ಜಿಲ್ಲಾ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಈ ಸುವರ್ಣ ಪರ್ವದ ಉದ್ಘಾಟಕರಾಗಿ ಪೋಲೀಸ್ ಮಹಾ ನಿರೀಕ್ಷಕರಾದ ಡಾಕ್ಟರ್ ಬಿ ಆರ್ ರವಿಕಾಂತ್‍ಗೌಡ, ಸಮಾರಂಭದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷರು ಯಕ್ಷಕಲಾ ಸಾಹಿತಿ ಹೆಚ್. ಜನಾರ್ದನ ಹಂದೆ ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಯಕ್ಷರಂಗದ ಅಧ್ಯಕ್ಷ ಮಲ್ಲಾಡಿ ಪ್ರಭಾಕರ್ ಶೆಟ್ಟಿ, ಹಾವೇರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಯಕ್ಷಗಾನ ಕಲಾವಿದ ಕೆ. ಸೋಮಶೇಖರ್ ನಾಯರಿ, ದಾವಣಗೆರೆಯ ಹೋಟೆಲ್ ಉದ್ಯಮಿ ಯಕ್ಷಗಾನದ ಅಭಿಮಾನಿ  ಶೈಲೇಶ್‍ಶೆಟ್ಟಿ, ದಾವಣಗೆರೆಯ ಕಾರ್ಮಿಕ ಮುಖಂಡ ಎಚ್ ಜಿ ಉಮೇಶ್ ಅವರಗೆರೆ, ಕಾರ್ಮಿಕ ಮುಖಂಡ ಕೆ ವಿಶ್ವನಾಥ್ ಬಿಲ್ಲವ, ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಹೆಚ್. ಸುಜಿಯೇಂದ್ರ ಹಂದೆ, ಆಕಾಶವಾಣಿ ಕಲಾವಿದರು ಶ್ರೀಮತಿ ಕೆ ಭಾರ್ಗವಿ ಮಂಜುನಾಥ್, ಮಂಗಳೂರಿನ ಯಕ್ಷಾಭಿಮಾನಿ ಶ್ರೀಮತಿ ಮಾಧುರಿ ಶ್ರೀರಾಮ್ ಮುಂತಾದವರು ಉಪಸ್ಥಿತರಿದ್ದರು.


ಅದ್ದೂರಿಯ ಭವ್ಯ ದಿವ್ಯ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಹಟ್ಟಿಯಂಗಡಿ ಆನಂದ ಶೆಟ್ಟಿಯವರಿಗೆ ಕರಾವಳಿ ಮಿತ್ರ ಮಂಡಳಿ, ಕಲಾಕುಂಚ, ಯಕ್ಷರಂಗದ ಸರ್ವ ಸದಸ್ಯರು ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top