ಮಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಯ 2025ನೇ ಸಾಲಿನ ಕಬ್ಸ್ - ಬುಲ್ ಬುಲ್ ಸ್ಕೌಟ್ ಗೈಡ್ಸ್ ರೇಂಜರ್ ವಿಭಾಗದ ಗೀತ ಗಾಯನ ಸ್ಪರ್ಧೆಯು ಲೂರ್ಡ್ಸ್ ಸೆಂಟ್ರಲ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಕೆ. ವಸಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರೀತಿ ಲೋಬೊ, ಲೂಡ್ರ್ಸ್ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಫಾದರ್ ಜಾನ್ಸನ್ ಎಲ್ ಸಿಕ್ವೆರ, ಕೋಶಾಧಿಕಾರಿ ಸಂಧ್ಯಾ, ಗೈಡರ್ ಪ್ರತಿನಿಧಿ ಸಿಸ್ಟರ್ ರೀಟ ಡಿಸೋಜಾ, ತೀರ್ಪುಗಾರರಾದ ರಶ್ಮಿ ಕೋಟ್ಯಾನ್, ಅಂಜಲಿನ ಹಾಗೂ ಲೂರ್ಡ್ಸ್ ಸೆಂಟ್ರಲ್ ಶಾಲೆಯ ಗೈಡ್ ಕ್ಯಾಪ್ಟನ್ ತ್ರಿವೇಣಿ, ಸವಿತ ಉಪಸ್ಥಿತರಿದ್ದರು.
ಸುಮಾರು 10 ಶಾಲೆಯ 187 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಸಾರ, ಲಿಲ್ಲಿ ಡಿಸೋಜಾ, ಸ್ಕೌಟರ್ ಗಳಾದ ಸಂಗೀತ, ಜೋಶಿಕ ಡಿಸೋಜಾ, ಕವಿತ, ಗೈಡ್ ಕ್ಯಾಪ್ಟನ್ ನಿರ್ಮಲ, ಗೈಡ್ ಕ್ಯಾಪ್ಟನ್ ಯಶೋಧ ನಾಯಕ್, ಗೈಡ್ ಕ್ಯಾಪ್ಟನ್ ತ್ರಿವೇಣಿ, ಸವಿತಾ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಸ್ಕೌಟರ್ ಸಂಗೀತ ಸ್ವಾಗತಿಸಿದರು. ಸ್ಕೌಟರ್ ಜೋಶಿಕಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


