ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಎಡ್. ಹಾಗೂ ಡಿ.ಇಡ್. ಕಾಲೇಜು ಜಂಟಿಯಾಗಿ 2025 ಶೈಕ್ಷಣಿಕ ವರ್ಷದ ಪೌರತ್ವ ತರಬೇತಿ ಶಿಬಿರವನ್ನು ರತ್ನಮಾನಸ ವಿದ್ಯಾರ್ಥಿ ನಿಲಯ ಉಜಿರೆಯಲ್ಲಿ ಆಯೋಜಿಸಿದ್ದವು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ಇಂಜಿನಿಯರ್ ಜಗದೀಶ್ ಪ್ರಸಾದ್, “ಮನುಷ್ಯನು ಬೇರೆ ಬೇರೆ ಸ್ಥರಗಳಲ್ಲಿ ತರಬೇತಿ ಪಡೆಯುತ್ತಾನೆ. ಇಂತಹ ಪೌರತ್ವ ತರಬೇತಿಗಳು ಮಾನವನ ಜೀವನ ರೂಪಿಸಲು ಸಹಕಾರಿಯಾಗುತ್ತವೆ. ಸಾವಿರ ವಿದ್ಯಾರ್ಥಿಗಳ ಜೀವನ ರೂಪಿಸುವ ಶಕ್ತಿ ನಿಮ್ಮಂತಹ ಶಿಕ್ಷಕರಲ್ಲಿದೆ. ಮಕ್ಕಳ ತಪ್ಪುಗಳನ್ನು ತಿದ್ದಿ ಕಷ್ಟಗಳನ್ನು ಎದುರಿಸಲು ನಗುಮೊಗದಿ ತಿಳಿಹೇಳುವುದು ಕೂಡ ಒಂದು ಕಲೆ” ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ ಉಜಿರೆಯ ಶೈಕ್ಷಣಿಕ ಸಂಯೋಜಕರಾದ ಪ್ರೊ. ಶಶಿಶೇಖರ ಎನ್ ಕಾಕತ್ಕರ್, “ಭಾವೈಕ್ಯತೆ, ಸಹಬಾಳ್ವೆ, ಕರ್ತವ್ಯ ನಿರ್ವಹಣೆ, ಮಾತುಗಾರಿಕೆ ಮತ್ತು ಹೊಂದಾಣಿಕೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಹಾಗೂ ಎಲ್ಲವ ಕಲಿತ ಮಾನವನನ್ನು, ಮಾನವೀಯ ಮೌಲ್ಯಗಳೊಂದಿಗೆ ಬಾಳಲು ಕಲಿಸುವ ಶಿಬಿರಗಳು ಎಲ್ಲರಿಗೂ ಸ್ಫೂರ್ತಿ. ಶಿಕ್ಷಕ ವೃತ್ತಿ ಎನ್ನುವುದು ಪವಿತ್ರವಾದುದು. ಬೋಧನೆ, ಪ್ರೇರಣೆ, ಮೌಲ್ಯಗಳು ಹಾಗೂ ಮಾರ್ಗದರ್ಶನವನ್ನು ನೀಡುವುದು ಶಿಕ್ಷಕನಾದವನ ಆದ್ಯ ಕರ್ತವ್ಯ ” ಎಂದು ಹೇಳಿದರು.
ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಶ್ರೀ ಮಂಜು ಆರ್, ರತ್ನಮಾನಸದ ನಿಲಯಪಾಲಕ ಯತೀಶ್ ಕೆ ಬಳಂಜ ಅವರು ಶಿಬಿರಕ್ಕೆ ಶುಭ ಹಾರೈಸಿದರು. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ವೀಕ್ಷಾದೀಪ, ಡಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿ ರಂಝಿಯಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ವೀಕ್ಷಾದೀಪ ಸ್ವಾಗತಿಸಿ, ಪ್ರಥಮ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಸಾಯಿಧೃತಿ ವಂದಿಸಿ, ವರ್ಷಾ ಅತಿಥಿ ಪರಿಚಯಿಸಿದರು. ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ರಶ್ಮಿ ಕೆ ಪಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

