ಶ್ರೀ ನಂದ ವಸತಿ ಶಾಲೆಯ ಕೊಲ್ಕಿ ಲಕ್ಷ್ಮಿಕಾಂತ್ ರಿಗೆ "ಅತ್ಯುತ್ತಮ ಶಿಕ್ಷಕ" ಪ್ರಶಸ್ತಿ

Upayuktha
0


ಬಳ್ಳಾರಿ: ಕೊಲ್ಕಿ ಲಕ್ಷ್ಮಿಕಾಂತ್ ಅವರಿಗೆ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ಶಿಕ್ಷಕರ ಸದನ ಸಭಾಂಗಣ ಕೆಂಪೇಗೌಡ ರಸ್ತೆ ಬೆಂಗಳೂರಿನಲ್ಲಿ ಜನಸಿರಿ ಫೌಂಡೇಷನ್ (ರಿ). ಇವರು ಆಯೋಜಿಸಿದ್ದ 2025-26ನೇ ಸಾಲಿನ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ಗೆ ಬಳ್ಳಾರಿಯ ಪ್ರತಿಷ್ಟಿತ ಶಾಲೆಯಾದ ಶ್ರೀ ನಂದ ವಸತಿ ಶಾಲೆ ವಿದ್ಯಾನಗರದ ಶಾಲೆಯ ಮುಖ್ಯೋಪಾಧ್ಯಾಯರಾದ ಕೊಲ್ಕಿ ಲಕ್ಷ್ಮಿಕಾಂತ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಕಳೆದ ವರ್ಷದಲ್ಲಿ ರಾಜ್ಯ ಮಟ್ಟದ ಉತ್ತಮ ಮುಖ್ಯ ಶಿಕ್ಷಕ 'ಶಿಕ್ಷಣ ಪ್ರಕಾಶ ಪ್ರಶಸ್ತಿ' ಕರುನಾಡ ಕನ್ನಡ ಕಲಾ ಸಿರಿ ಬಳಗ (ರಿ) ಬೆಂಗಳೂರು ಇವರಿಂದ 2025-26 ನೇ "ಸಾಲಿನ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ". ಪಡೆದುಕೊಂಡಿದ್ದರು. ತಾವು ಅತ್ಯಂತ ಪವಿತ್ರವಾದ ಬೋಧಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕಾಯಾ, ವಾಚಾ, ಮನಸ್ಸಿನಿಂದ ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಉತ್ತಮ ಶಿಕ್ಷಣಕ್ಕೆ ಕಾರಣಕರ್ತರಾದ ಇವರಿಗೆ ಶಾಲೆಯ ಆಡಳಿತಮಂಡಳಿಯ ಕಾರ್ಯದರ್ಶಿಗಳಾದ ವಿ. ರಮಣ ಕುಮಾರ್ ರವರು ಇವರನ್ನು ಸನ್ಮಾನಿಸಿದರು. 


ಈ ಸಂಧರ್ಭದಲ್ಲಿ ಶಾಲಾ ಕಾಲೇಜಿನ ಅಧ್ಯಕ್ಷರು ವಿ. ಗಾಂಧಿ, ಉಪಾದ್ಯಕ್ಷರು ವಿ. ಮುರಳಿಕೃಷ್ಣ, ಮುಖ್ಯೋಪಾಧ್ಯಾಯನಿ ಹೆಚ್. ಜೆ. ಸರಿತ, ವಿನಯ ಕುಮಾರ್, ರಾಜೇಶ್ವರಿ, ಶಾಲಾ ಸಿಂಬ್ಬಂದಿ ವರ್ಗದವರು ಮತ್ತು ಶಾಲಾ ಮಕ್ಕಳು ಇವರಿಗೆ ಶುಭಕೊರಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top