ಬಳ್ಳಾರಿ: ಜಗದಂಬಾ ಕಾಲನಿಯಲ್ಲಿ ಅನ್ನದಾನ‌ ಕಾರ್ಯಕ್ರಮ

Chandrashekhara Kulamarva
0


ಬಳ್ಳಾರಿ: ಬಳ್ಳಾರಿ ನಗರದ 4 ನೇ ವಾರ್ಡಿನ ಜಗದಂಬಾ ಕಾಲನಿಯಲ್ಲಿ ಪುರಾತನವಾದ ಬನ್ನಿ‌ ಮಹಂಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ನಿಮಿತ್ತ ಏಳನೆ ದಿನವಾದ ಭಾನುವಾರ ಬನ್ನಿ ಮಹಂಕಾಳಿ ದೇವಸ್ಥಾನದ ಕಟ್ಟಡಕ್ಕೆ ಅದ್ದೂರಿಯಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು‌ ಕೈಗೊಂಡು ನಂತರ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರು, ಸಹಾಯ ಕೋರಿ ಬಂದವರ ಬೆನ್ನಿಗೆ ನಿಂತು ನ್ಯಾಯವನ್ನುಕೊಡಿಸುವ ನಾಯಕ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಅವರು,. ಮಾಜಿ ಮೇಯರ್, ಹಾಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜೇಶ್ವರಿ, ಬಿಜೆಪಿ ಮುಖಂಡರು, ಬಡವರ ಬಂಧು, 25 ನೆ ವಾರ್ಡಿನ ಕಾರ್ಪೊರೇಟರ್ ಗೋವಿಂದ ರಾಜುಲು, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು‌ ಆಗಮಿಸಿದ್ದರು.


ಮುಂಡ್ರಿಗಿ ನಾಗರಾಜ್ ಅವರು ಮಾತನಾಡುತ್ತಾ, ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ, ದೇವಸ್ಥಾನದ ಅಭಿವೃದ್ಧಿಗೆ ಶಾಸಕರೊಂದಿಗೆ ಚರ್ಚಿಸಿ 10 ಲಕ್ಷ ರೂ ಅನುದಾನವನ್ನು ತರುವಲ್ಲಿ ನನ್ನ ಶಕ್ತಿಯನ್ನು ಮೀರಿ ಶ್ರಮಿಸುತ್ತೇನೆ ಎಂದರು.


ಮಾಜಿ ಮೆಯರ್ ರಾಜೇಶ್ವರಿಯವರು ಮಾತನಾಡಿ, ನೀವೆಲ್ಲರೂ ಒಗ್ಗಟ್ಟಾಗಿರಿ, ನಿಮಗೆ ನಮ್ಮಿಂದ ಸಹಾಯ, ಸಹಕಾರ ಇರುತ್ತದೆ ಎಂದರು. ಮುಂದಿನ ವರ್ಷದ ವಿಜಯ ದಶಮಿಗೆ ದೇವಸ್ಥಾನ ಇನ್ನು ದೊಡ್ಡದಾಗಿ ಮಾಡಬೇಕು, ಇದಕ್ಕೆ ನಮ್ಮ‌ಸಹಕಾರ ಖಂಡಿತವಾಗಿ ಇರುತ್ತದೆ ಎಂದರು.


ಮಹಾನಗರ ಪಾಲಿಕೆಯ ಸದಸ್ಯ ಗೋವಿಂದ ರಾಜುಲು‌ ಮಾತನಾಡುತ್ತಾ, ದೇವಸ್ಥಾನದ ಅಭಿವೃದ್ಧಿಗೆ ನಾನು‌ ಸಹಾಯ ಮಾಡುತ್ತೇನೆ, ನಿಮಗೆ ಅಧಿಕಾರಿಗಳಿಂದ ಅಥವಾ ಬೇರೆ ಯಾರಿಂದಾದರೂ ತೊಂದರೆಯಾದರೆ ನನಗೆ ಕರೆ ಮಾಡಿ, ಹತ್ತು‌ ನಿಮಿಷದಲ್ಲಿ ನಿಮ್ಮ ಹತ್ತಿರ ಇರುತ್ತೇನೆ‌ ಎಂದರು.


ಇದೇ ವೇಳೆ ಆಗಮಿಸಿದ್ದ ಗಣ್ಯರಿಗೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳಿಗೆ ಗೌರವಿಸಿ‌ ಸನ್ಮಾನಿಸಲಾಯಿತು.


ಈ ಸಂಧರ್ಭದಲ್ಲಿ ಯೋಗ ಮಾಸ್ಟರ್ ಶ್ರೀನಿವಾಸ್ ರೆಡ್ಡಿ,ಬಿಜೆಪಿ ಮುಖಂಡ ಗಾದಿಲಿಂಗ, ರಮೇಶ್, ಬಸವರಾಜ್, ರೆಡ್ಡಿ, ಈರಣ್ಣ,ನಟರಾಜ್, ಗೋವರ್ಧನ, ಜಗದಾಂಭ ಕಾಲನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಬಾಬು, ಪದಾದಿಕಾರಿಗಳಾದ ಪಂಪನಗೌಡ, ರಾಜು, ಫಾರೂಕ್, ಚಂದ್ರಶೇಖರ, ಸೆಲ್ವ, ಜಯಲಕ್ಷ್ಮಿ, ರಘು, ಹುಲುಗಪ್ಪ, ಸದಸ್ಯರಾದ ರತ್ನಮ್ಮ,ಮಾರುತಿ,ಚಾರ್ಲೆಸ್, ಬಸವರಾಜ, ಪಾಂಡು, ನಂದೀಶ್, ರಂಗಸ್ವಾಮಿ, ಶ್ರೀರಾಮುಲು, ಸೋಮು, ವಾಣಿ, ಶ್ಯಾಮ್,  ಮಂಜು, ರಂಜಿತ್, ಜಯಂತಿ, ನಿರಜ್ , ಪಾರ್ವತಿ, ಭರತ್ ಸಿಂಗ್, ವಿಶ್ವನಾಥ ಗೌಡ, ಸುಷ್ಮ, ಲತ, ಪ್ರದಿಪ್, ಸಂಜು, ಬಾಲು, ಸತ್ತೆಪ್ಪ, ಸುನಿತ, ಮಂಗಳಿ, ನಂದಿನಿ, ಮತ್ತು ಕಾಲನಿಯ ಎಲ್ಲಾ ನಿವಾಸಿಗಳು ಕುಲ ಮತ ಭೇದ ಮರೆತು ಒಗ್ಗಟ್ಟಿನಿಂದ ಅಚ್ಚುಕಟ್ಟಾಗಿ ಅನ್ನದಾನ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮನ್ನು ಯಶಸ್ವಿಯಾಗಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top