ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 22ರಿಂದ 30ರ ವರೆಗೆ ಪ್ರತಿದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಸೋಮವಾರ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಸಂಜೆ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ ನಡೆಯಿತು.
ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಸಂಚಾಲಕ ನಾರಾಯಣ ನಾಯ್ಕ್ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ವಿಶ್ವನಾಥ ಬೈಲಮೂಲೆ, ಸಹಾಯಕ ನಿರ್ದೇಶಕರು, ಗ್ರಾಮೀಣ ಉದ್ಯೋಗ, ತಾಲೂಕು ಪಂಚಾಯತ್, ಬಂಟ್ವಾಳ, ಡಾ| ನಂದೀಶ ಶೆಟ್ಟಿ ಕದ್ರಿ ಕಂಬಳ, ಪ್ರೊಫೆಸರ್ ಮತ್ತು ಪಿಜಿ ಡೈರೆಕ್ಟರ್, ಎ.ಜೆ. ಡೆಂಟಲ್ ಕಾಲೇಜು, ಮಂಗಳೂರು,ಬಿ. ಸುರೇಶ್ ಭಂಡಾರಿ ಅರ್ಬಿ, ಮಾಜಿ ನಿರ್ದೇಶಕರು, ಅಮ್ಮಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ರೇವತಿ ಪಿ., ಅನುಗ್ರಹ ಮೆಡಿಕಲ್ ಮತ್ತು ಕ್ಲಿನಿಕ್, ಪೆರ್ನೆ, ಕಿರಣ್ ಕುಮಾರ್, ಪೊಳಲಿ ಎಲೆಕ್ಟ್ರಾನಿಕ್ಸ್, ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಸುಧೀರ್ ಕುಮಾರ್ ಜಾರಂದಗುಡ್ಡೆ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸ್ಥಳೀಯ ಸರಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ 6 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶ್ರೀ ದುರ್ಗಾಪರಮೇಶ್ವರಿ ಸೇವಾ ಟ್ರಸ್ಟ್ ನ ತಾರನಾಥ ಕೊಟ್ಟಾರಿ ತೇವು ಪ್ರಾಸ್ತವಿಕವಾಗಿ ಮಾತನಾಡಿದರು. ಸೇವಾ ಸಮಿತಿಯ ಅಧ್ಯಕ್ಷ ಯಶವಂತ ಮುಂಡಾಜೆ ಸ್ವಾಗತಿಸಿ, ಉಮೇಶ್ ರೆಂಜೋಡಿ ಧನ್ಯವಾದವಿತ್ತು, ಪ್ರ ಕಾರ್ಯದರ್ಶಿ ಉದಯಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಜ್ಯೋತಿ ಜ್ಯೋತಿಗುಡ್ಡೆ ಇದರ ಸಂಯೋಜನೆಯಲ್ಲಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ "ಸುದರ್ಶನ ಗರ್ವಭಂಗ" ಯಕ್ಷಗಾನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


