ಬೆಂಗಳೂರು : ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ದಸರಾ ಮಹೋತ್ಸವ ಆಚರಿಸಲಿದ್ದು ಪ್ರತಿದಿನ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6-30ಕ್ಕೆ :
ಸೆಪ್ಟೆಂಬರ್ 22-ಪ್ರಸನ್ನಲಕ್ಷ್ಮಿ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ",
ಸೆಪ್ಟೆಂಬರ್ 23-ವಿಜಯನಗರದ ಸ್ಫೂರ್ತಿ ಮಹಿಳಾ ಮಂಡಲಿಯ ಸದಸ್ಯರಿಂದ "ದೇವರನಾಮಗಳು",
ಸೆಪ್ಟೆಂಬರ್ 24-ವಿದುಷಿ ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳ ಗಾಯನ",
ಸೆಪ್ಟೆಂಬರ್ 25-'ಸಂಗೀತ ಕಲಾನಿಧಿ' ಡಾ|| ವಿದ್ಯಾಭೂಷಣ ಮತ್ತು ಸಂಗಡಿಗರು "ಹರಿನಾಮ ಸಂಕೀರ್ತನೆ",
ಸೆಪ್ಟೆಂಬರ್ 26-ಗಾನ ಸೌರಭ ಶಾಲೆಯ ವಿದ್ಯಾರ್ಥಿಗಳಿಂದ "ಚಿತ್ರಾಕ್ಷಿ ಕಲ್ಯಾಣ" ಯಕ್ಷಗಾನ,
ಸೆಪ್ಟೆಂಬರ್ 27-ಕೆನರಾ ಬ್ಯಾಂಕ್ ಕಾಲೋನಿ ಮಹಿಳಾ ಸದಸ್ಯರಿಂದ "ವೈವಿಧ್ಯ ಮನರಂಜನಾ ಕಾರ್ಯಕ್ರಮ",
ಸೆಪ್ಟೆಂಬರ್ 28-ಸುಗನ್ಯ ರಾಘವ್, ಸುಪ್ರಿಯಾ ಅಶ್ವಿನ್ ಮತ್ತು ಸಂಗಡಿಗರಿಂದ "ನೃತ್ಯ ಪ್ರದರ್ಶನ",
ಸೆಪ್ಟೆಂಬರ್ 29-ಗಾನಸಿರಿ ಟ್ರಸ್ಟ್ ದಿ ಸ್ಕೂಲ್ ಆಫ್ ಮ್ಯೂಸಿಕ್ ಕಲಾವಿದರಿಂದ "ಭಕ್ತಿ ಸಂಗೀತ",
ಸೆಪ್ಟೆಂಬರ್ 30-"ದುರ್ಗಾ ನಮಸ್ಕಾರ",
ಅಕ್ಟೋಬರ್ 1-ಕಲಾಂಷು ಕಲ್ಚರಲ್ ಟ್ರಸ್ಟಿನ ತಂಡದವರಿಂದ "ನೃತ್ಯ ಸಂಗೀತ" ,
ಅಕ್ಟೋಬರ್ 2-ಶ್ರೀ ವರಸಿದ್ಧಿ ವಿನಾಯಕ ಭಜನಾ ಮಂಡಳಿಯ ಸದಸ್ಯರಿಂದ "ಭಜನಾಮೃತ" ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


