ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನ "ನವರಾತ್ರಿ ವೈಭವ"

Upayuktha
0



ಬೆಂಗಳೂರು: ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ "ನವರಾತ್ರಿ ವೈಭವ" ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದ ಎಲ್ಲಾ ದಿನಗಳಲ್ಲೂ ದೇವಿಗೆ ವಿಶೇಷ ಅಲಂಕಾರ, ಮಧ್ಯಾಹ್ನ 1-30ಕ್ಕೆ ಸಾಮೂಹಿಕ ಲಲಿತ ಸಹಸ್ರನಾಮ ಜರುಗಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು  ಪ್ರತಿದಿನ ಸಂಜೆ 6-30ಕ್ಕೆ : 

ಸೆಪ್ಟೆಂಬರ್ 23 : ಶೃಂಗಾರ ಲಹರಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ "ಹಾಡುಗಾರಿಕೆ". ನಿರ್ದೇಶನ : ವಾಣಿಶ್ರೀ ಸುಂದರೇಶ್, 

ಸೆಪ್ಟೆಂಬರ್ 24 : ದೇವಸ್ಥಾನದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ "ಭಕ್ತಿ ಗೀತೆಗಳ ಗಾಯನ". ನಿರ್ದೇಶನ : ಶ್ರೀದೇವಿ ಗರ್ತಿಕೆರೆ. 

ಸೆಪ್ಟೆಂಬರ್ 25 : ಭವಾನಿ ಎಂ. ರಾವ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ". 

ಸೆಪ್ಟೆಂಬರ್ 26 : ಚಾಂದನಿ ಗರ್ತಿಗರೆ ಮತ್ತು ಸಂಗಡಿಗರಿಂದ "ಸಂಗೀತ ಸಂಭ್ರಮ". 

ಸೆಪ್ಟೆಂಬರ್ 27 : ಶಿವಲೀಲಾ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ "ನವದುರ್ಗೆ ವೈಭವ" ನೃತ್ಯ ರೂಪಕ. 

ಸೆಪ್ಟೆಂಬರ್ 28 : ಲಲಿತ ಕಲಾ ಕೇಂದ್ರದ ಮಕ್ಕಳಿಂದ "ಭರತನಾಟ್ಯ", ನಿರ್ದೇಶನ : ರೂಪಾ ಹೇಮಂತ್.

ಸೆಪ್ಟೆಂಬರ್ 29 : ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ".

ಸೆಪ್ಟೆಂಬರ್ 30 : ಕಿಶೋರ್ ಕುಲಕರ್ಣಿ ಮತ್ತು ತಂಡದವರಿಂದ "ಸೀತಾ ಕಲ್ಯಾಣ" ಹರಿಕಥೆ.

ಅಕ್ಟೋಬರ್ 1 : ಜಪಮಾಲಾ ಸ್ವರ ತಂಡದವರಿಂದ "ಭಜನಾಮೃತ", ನಿರ್ದೇಶನ : ರಾಧಾ.

ಅಕ್ಟೋಬರ್ 2 : ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗಣೇಶ ಮತ್ತು ಅಮ್ಮನವರ "ಪಲ್ಲಕ್ಕಿ ಉತ್ಸವ". 

ಸ್ಥಳ : ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನ, ಭಾರತ ವಿಜ್ಞಾನ ಮಂದಿರದ ಹತ್ತಿರ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top