ದಿವ್ಯ ಉಪಸ್ಥಿತಿ : ಶ್ರೀಮದುತ್ತರಾದಿ ಮಠಾಧೀಶರಾದ ಪರಮಪೂಜ್ಯ ಶ್ರೀ ಸತ್ಯಾತ್ಶತೀರ್ಥ ಶ್ರೀಪಾದಂಗಳವರು.
ಬೆಂಗಳೂರು: ರಾಜರಾಜೇಶ್ವರಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಶತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಶ್ರೀನಿವಾಸ ಕಲ್ಯಾಣದ ಬಗ್ಗೆ ಪ್ರವಚನ ನೀಡುವ ವಿದ್ವಾಂಸರು (ಕ್ರಮವಾಗಿ) : ಕಲ್ಲಾಪುರ ಪವಮಾನಾಚಾರ್, ಕರಣಂ ವಾದಿರಾಜಾಚಾರ್, ಅಂಬರೀಶಾಚಾರ್, ಸತ್ಯಪ್ರಮೋದಾಚಾರ್ಯ ಕಟ್ಟಿ, ಭೀಮಸೇನಾಚಾರ್ ಆತನೂರ, ಆನಂದತೀರ್ಥಾಚಾರ್ ಮಹಿಶಿ, ಅನಿರುದ್ಧಾಚಾರ್ ಪಾಂಡುರಂಗಿ, ಅಖಿಲಾಚಾರ್ ಅತ್ರೆ, ವಿದ್ಯಾಧೀಶಾಚಾರ್ಯ ಗುತ್ತಲ್. ಈ ಪಂಡಿತೋತ್ತಮರು ಶ್ರೀನಿವಾಸ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ ನೀಡುವರು. (ಸಮಯ : ಪ್ರತಿದಿನ ಸಂಜೆ 6-00 ರಿಂದ 7-00)
ಶ್ರೀಗಳವರಿಂದ "ಅಮೃತೋಪದೇಶ" : ಪ್ರತಿದಿನ ಸಂಜೆ 7-00 ರಿಂದ 8-00.
ಶೋಭಾಯಾತ್ರೆ : ಸೆಪ್ಟೆಂಬರ್ 28 ರಂದು ಸಂಜೆ 4-00ಕ್ಕೆ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ "ಶೋಭಾಯಾತ್ರೆ" ಹಮ್ಮಿಕೊಂಡಿದೆ.
ಪೂಜಾ ಕೈಂಕರ್ಯಗಳು : ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2ರ ವರೆಗೆ ಪ್ರತಿದಿನ ಬೆಳಗ್ಗೆ : ಪಾದಪೂಜೆ, ತಪ್ತಮುದ್ರಾಧಾರಣೆ, ಸಂಸ್ಥಾನ ಪೂಜೆ ನಡೆಯಲಿದೆ ಎಂದು ಶ್ರೀಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


