ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿಯರಾದ ಮಧುಮಿತಾ ಮತ್ತು ಸುಷ್ಮಿತಾ (ಸ್ಮಿತಾ ಸಹೋದರಿಯರು) ನಡೆಸಿಕೊಟ್ಟ "ಕರ್ನಾಟಕ ಶಾಸ್ತ್ರೀಯ ಸಂಗೀತ" ಗಾಯನ ಬಹಳ ಆಕರ್ಷಕವಾಗಿತ್ತು.
ವಿದ್ವಾನ್ ಅರುಣಾಚಲ ಕಾರ್ತೀಕ್ (ಪಿಟೀಲು), ವಿದ್ವಾನ್ ಅಶ್ವತ್ಥ ನಾರಾಯಣರಾವ್ (ಮೃದಂಗ) ಮತ್ತು ವಿದ್ವಾನ್ ಎನ್. ಉತ್ತಮ್ (ಘಟ) ಪಕ್ಕವಾದ್ಯಗಳಲ್ಲಿ ಸಾಥ್ ನೀಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಎಂ. ಅನಂತ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿಯಾದ ಶ್ರೀ ಭಾಷ್ಯಂ ಚಕ್ರವರ್ತಿ ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ