ಬೆಂಗಳೂರು : ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ 'ಕಲಾಭೂಷಿಣಿ' ಡಾ|| ದರ್ಶಿನಿ ಮಂಜುನಾಥ್ ರವರ ಶಿಷ್ಯೆ ಕು|| ಪ್ರಿಯಾಂಕಾ ಶ್ರೀನಿವಾಸ್ ಅವರ ರಂಗಪ್ರವೇಶ ಸೆಪ್ಟೆಂಬರ್ 28, ಭಾನುವಾರ ಸಂಜೆ 6-00ಕ್ಕೆ ನಗರದ ಜೆ. ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಎಚ್. ನಿಶ್ಚಲ್ (ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ), ನಂಜುಂಡರಾವ್ (ಖ್ಯಾತ ವಿಮರ್ಶಕರು ಮತ್ತು ಅಂಕಣಕಾರರು), ಶ್ರೀನಿವಾಸಮೂರ್ತಿ (ಚಲನಚಿತ್ರ ನಿರ್ಮಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರು), ಗಣೇಶ ಆರ್, (ಅರ್ಚಕರು), ಶಿವಕುಮಾರ್, (ಮಾಜಿ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು) ಆಗಮಿಸಲಿದ್ದಾರೆ.
ಇದು ನೃತ್ಯ ದಿಶಾ ಟ್ರಸ್ಟ್ ನ 17ನೇ "ರಂಗಪ್ರವೇಶ" ಆಗಿದ್ದು, ಗುರು. ಡಾ|| ದರ್ಶಿನಿ ಮಂಜುನಾಥ್ ಅವರ ಸಂಯೋಜನೆಗೆ ಕು|| ಪ್ರಿಯಾಂಕಾ ಶ್ರೀನಿವಾಸ್ ಅತ್ಯಂತ ಆಸಕ್ತಿಯಿಂದ, ಶ್ರದ್ಧಾಭಕ್ತಿಯೊಂದಿಗೆ ಸಜ್ಜಾಗಿದ್ದಾರೆ.
ವಾದ್ಯಮೇಳದಲ್ಲಿ : ನಟ್ಟುವಾಂಗ-ಗುರು ಡಾ|| ದರ್ಶಿನಿ ಮಂಜುನಾಥ್, ಗಾಯನ-ವಿದುಷಿ ಭಾರತಿ ವೇಣುಗೋಪಾಲ್, ಮೃದಂಗಂ : ವಿದ್ವಾನ್ ಎಸ್.ವಿ. ಗಿರಿಧರ್, ಪಿಟೀಲು : ವಿದ್ವಾನ್ ಶ್ರೀ ಸಿ. ಮಧುಸೂದನ್, ಕೊಳಲು : ವಿದ್ವಾನ್ ಶ್ರೀ ಎಂ.ಎಸ್. ಪ್ರಮುಖ್,
ರಿದಂ ಪ್ಯಾಡ್ : ವಿದ್ವಾನ್ ಕಾರ್ತೀಕ್ ವೈಧತ್ರಿ, ವೀಣಾ : ಮಾ|| ಅಚ್ಯುತ್ ಜಗದೀಶ್
ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ, ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
