ವಿಶೇಷಚೇತನರಿಗೆ ಜಿಲ್ಲಾ ನಿರ್ದೇಶಕರಿಂದ ವಿಲ್ ಚೇರ್ ವಿತರಣೆ

Chandrashekhara Kulamarva
0


ಬಳ್ಳಾರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಬಂಡಿಹಟ್ಟಿ ಗ್ರಾಮದ ನಿವಾಸಿ ರಾಜಣ್ಣ ಅವರಿಗೆ ಬಳ್ಳಾರಿ ಜಿಲ್ಲೆಯ ಜಿಲ್ಲಾ ನಿರ್ದೇಶಕರು  ರೋಹಿತಾಕ್ಷ ಅವರು ವೀಲ್ ಚೇರ್ ವಿತರಣೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಬಳ್ಳಾರಿ-2 ತಾಲ್ಲೂಕಿನ  ಬಂಡಿಹಟ್ಟಿ ಕಾರ್ಯಕ್ಷೇತ್ರದ ನಿವಾಸಿಗಳಾದ ರಾಜಣ್ಣ ನವರು ಅನಾರೋಗ್ಯದ ಕಾರಣದಿಂದಾಗಿ


ಎರಡು ಕಾಲು ಕಳೆದುಕೊಂಡು ನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇರೂ ಫಲಾನುಭವಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಿಲ್ ಚೇರ್ ವಿತರಣೆ ಮಾಡಲಾಯಿತು.


ಹಿರಿಯರು, ವಯೋವೃದ್ಧರು ಮನೆಗೆ, ಸಮಾಜಕ್ಕೆ ಭಾರವಲ್ಲ.  ಕುಟುಂಬದ ಸದಸ್ಯರಿಗೋಸ್ಕರ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿರುತ್ತಾರೆ. ಅವರ ಇಳಿವಯಸ್ಸಿನಲ್ಲಿ ಕುಟುಂಬಕ್ಕೆ ಭಾರವೆಂದು ಭಾವಿಸಿ ವೃದ್ಧಾಶ್ರಮಕ್ಕೆ ನೂಕುವದು ಅಮಾನವಿಯ ಕೃತ್ಯವಾಗಿದೆ. ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡಬೇಕು.


ಇದುವರೆಗೂ ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ  ಅಂಗವೈಕಲ್ಯಕೆ ತುತ್ತಾದ ಸದಸ್ಯರಿಗೆ ಸಲಕರಣೆಗಳನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಮಾನ್ಯ ಜಿಲ್ಲಾ ನಿರ್ದೇಶಕರು ರೋಹಿತಾಕ್ಷ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿಗಳು ಸತೀಶ್ ಜಿ, ಲಕ್ಷ್ಮಣ ಬಂಡಿಹಟ್ಟಿ ಗ್ರಾಮದ ಹಿರಿಯರು, ಜ್ಯೋತಮ್ಮಒಕ್ಕೂಟದ ಅಧ್ಯಕ್ಷರು,ವಿನಯ ಕೃಷಿ ಮೇಲ್ವಿಚಾರಕರು, ಶಶಿಕಲಾ ಬಂಡಿಹಟ್ಟಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳು,ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top