ಸೆ.6: ಶ್ರೀ ಕ್ಷೇತ್ರ ಪಣಿಯಾಡಿಯಲ್ಲಿ ಕದಳೀ ಪೂಜೆಯೊಂದಿಗೆ ಅನಂತನ ವ್ರತಾಚರಣೆ

Upayuktha
0


ಉಡುಪಿ: ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶನಿವಾರ (ಸೆ.6) ಅನಂತ ಚತುರ್ದಶಿ ವ್ರತಾಚರಣೆ (ನೊಂಪು) ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳಿಂದ ವಿಶೇಷ ಅನಂತ ಕದಳಿ ಸಮರ್ಪಣೆ ಸೇವೆ ನಡೆಯಲಿದೆ. 


ಧಾರ್ಮಿಕ ವಿಧಿ ವಿಧಾನಗಳಾದ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಪೂಜೆ ಹಾಗೂ ಮಹಾಪೂಜೆ ನಡೆಯಲಿದೆ. ಅನಂತ ವಿಪ್ರ ಬಳಗದ ಸದಸ್ಯರಿಂದ ಗೀತಾ ಪಾರಾಯಣ, ಲಕ್ಷ್ಮೀ ಶೋಭಾನೆ, ವಿಷ್ಣು ಸಹಸ್ರನಾಮ ನಾಮಾವಳಿ ಪಠಣ ನಡೆಯಲಿದೆ. ಇದೇ ಸಂದರ್ಭದಲ್ಲಿ ವ್ರತಧಾರಿಗಳಿಗೆ ಅನಂತ ಸೂತ್ರಧಾರಣೆ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. 


ಅಪರಾಹ್ನ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನಾ ಗಾಯನ, ವಿಶೇಷ ಕೊಳಲುವಾದನ, ರಾತ್ರಿ ಪೂಜೆ, ಹೂವಿನ ಪೂಜೆ, ರಂಗಪೂಜೆ, ಅಷ್ಟಾವಾಧನ ಸೇವೆ ನಡೆಯಲಿದೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top