ಪುತ್ತೂರು: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದ.ಕ ಜಿಲ್ಲೆಯನ್ನೊಳಗೊಂಡ ಪುತ್ತೂರು ತಾಲೂಕಿನ ಪದಾಧಿಕಾರಿಗಳ ಆಯ್ಕೆ ನವರಾತ್ರಿಯ ಶುಭ ಸಂದರ್ಭದಲ್ಲಿ ನಡೆಯಿತು.
2025-2026 ನೇ ಸಾಲಿನ ಪ್ರಥಮ ಅಧ್ಯಕ್ಷರಾಗಿ ಆಶಾ ಮಯ್ಯ ಪುತ್ತೂರು, ಉಪಾಧ್ಯಕ್ಷರಾಗಿ ಪ್ರಣವ್ ಭಟ್, ಕಾರ್ಯದರ್ಶಿಯಾಗಿ ಯಶುಭ ರೈ, ಜತೆ ಕಾರ್ಯದರ್ಶಿಯಾಗಿ ಅಕ್ಷತಾ ನಾಗನ ಕಜೆ, ಕೋಶಾಧಿಕಾರಿಯಾಗಿ ಸುನೀತಾ ಶ್ರೀರಾಮ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ವೇತಾ ಬೆಳ್ಳಿಪ್ಪಾಡಿ, ಸಾಹಿತ್ಯಿಕ ಕಾರ್ಯದರ್ಶಿಯಾಗಿ ಶ್ರೀಮತಿ ಪುತ್ತೂರು, ಮಾಧ್ಯಮ ಪ್ರತಿನಿಧಿಯಾಗಿ ಮಂಜುಳಾ ಮುರಳೀಕೃಷ್ಣ ಆಯ್ಕೆಯಾಗಿದ್ದಾರೆ.
ಈ ಆಯ್ಕೆಯಲ್ಲಿ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ, ದ.ಕ ಜಿಲ್ಲಾ ಅಧ್ಯಕ್ಷೆ ವಿಂಧ್ಯಾ ಎಸ್.ರೈ ಕಡೇಶಿವಾಲಯ, ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮೂಡುಬಿದಿರೆ, ರಾಜ್ಯ ಪ್ರತಿನಿಧಿಗಳಾದ ಹೆಚ್ಕೆ ನಯನಾಡು, ಆಶಾ ಅಡೂರು, ಉಮಾ ಸುನಿಲ್ ಹಾಸನ, ಭಾರತಿ ಪರ್ಕಳ, ಜಿಲ್ಲಾ ನಿರ್ದೇಶಕ ಚೇತನ್ ಕುಮಾರ್ ಅಮೈ ಸಹಕರಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ