ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಈ ಮಾತು ಎಷ್ಟು ಸತ್ಯ ಅಲ್ವ! ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ನಾನೊಂದು ಸಾಧನೆ ಮಾಡಿ ಎತ್ತರಕ್ಕೆ ಬೆಳೆಯಬೇಕು ಎಂಬ ಗುರಿಯನ್ನು ಹೊಂದಿರುತ್ತಾನೆ. ಅಂತೆಯೇ ಆ ಗುರಿಯನ್ನು ತಲುಪಲು ಸಾಕಷ್ಟು ಶ್ರಮ ವಹಿಸುತ್ತಾನೆ. ಆ ಕಠಿಣ ಶ್ರಮದ ಹಿಂದೆ ಓರ್ವ ಅದ್ಭುತ ಗುರುವಿನ ಪಾತ್ರ ಇದ್ದೆ ಇರುತ್ತದೆ. ಒಬ್ಬ ಗುರುವಿನ ಉತ್ತಮ ರೀತಿಯ ಮಾರ್ಗದರ್ಶದಿಂದ ವ್ಯಕ್ತಿ ತನ್ನ ಗುರಿಯನ್ನು ತಲುಪಲು ಸಾಧ್ಯವಿದೆ ಎಂಬುದು ಸುಳ್ಳಲ್ಲ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿ, ಇವರು ಒಬ್ಬ ಶ್ರೇಷ್ಠ ಶಿಕ್ಷಕ ತತ್ವಜ್ಞಾನಿಯಾಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಅದನ್ನು ಗೌರವಿಸಲು ಅವರ ಜನ್ಮದಿನ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನಚರಣೆಯನ್ನಾಗಿ ಆಚರಿಸುತ್ತೇವೆ.
ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾದುದು, ಒಬ್ಬ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ಹೊಂದಿರಬೇಕಾದರೆ, ಸಾಧನೆಯ ಮೆಟ್ಟಿಲೇರಲು ಆತನಿಗೆ ಉತ್ತಮ ಮಾರ್ಗದರ್ಶನವಿರಬೇಕು.
ಒಬ್ಬ ವಿದ್ಯಾರ್ಥಿಗೆ ತನ್ನ ಜೀವನದಲ್ಲಿ ಅನೇಕ ಶಿಕ್ಷಕರು ಸಿಗುತ್ತಾರೆ. ಶಿಕ್ಷಕನೊಬ್ಬ ತೋಟಗಾರನಂತೆ ವಿದ್ಯಾರ್ಥಿ ಎಂಬ ಬೀಜವನ್ನು ಸಹನೆ ಕಾಳಜಿ ಮತ್ತು ಪರಿಶ್ರಮದಿಂದ ಪೋಷಿಸುತ್ತಾನೆ. ಮಣ್ಣಿನಲ್ಲಿ ಬಿತ್ತಿದ ಬೀಜವು ಬೆಳೆದು ಗಿಡವಾಗಿ ಅದರಲ್ಲಿ ಹೂ ಅರಳಿದಂತೆ ವಿದ್ಯಾರ್ಥಿಯು ಜ್ಞಾನದಿಂದ ಅರಳುತ್ತಾನೆ. ತೋಟಗಾರರ ತ್ಯಾಗ ಪರಿಶ್ರಮದಿಂದ ಹಣ್ಣು ದೊರಕುವಂತೆ ಶಿಕ್ಷಕರ ಪರಿಶ್ರಮದಿಂದ ಹಾಗೂ ಮಾರ್ಗದರ್ಶನದಿಂದ ವಿದ್ಯಾರ್ಥಿಯು ಸಮಾಜಕ್ಕೆ ಶ್ರೇಷ್ಠ ನಾಗರಿಕನಾಗಿ ಮೂಡಿ ಬರುತ್ತಾನೆ.
ತಾಯಿ ಮಗುವಿನ ಮೊದಲ ಗುರು ಮನೆ ಮೊದಲ ಪಾಠಶಾಲೆ ಎಂಬ ಗಾದೆ ಮಾತಿನಂತೆ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಯನ್ನು ಉತ್ತಮನಾಗಿಸುತ್ತಾರೆ. ಅದೇ ರೀತಿ ಮನೇಲಿ ಪೋಷಕರು ಹಾಗೂ ಹಿರಿಯರು ಒಳ್ಳೆಯ ಸಂಸ್ಕಾರ ಮತ್ತು ಬುದ್ಧಿ ಕಲಿಸಿದರೆ ಆ ವಿದ್ಯಾರ್ಥಿ ಭವಿಷ್ಯದಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುತ್ತಾನೆ.
ಶಿಕ್ಷಣ ವಿದ್ಯಾರ್ಥಿಯನ್ನು ಬುದ್ಧಿವಂತನನ್ನಾಗಿಸುತ್ತದೆ. ಆದರೆ ಸಂಸ್ಕಾರವು ಆತನನ್ನು ಮಾನವನವನ್ನಾಗಿಸುತ್ತದೆ. ಇವೆರಡು ಸೇರಿದರೆ ಮಾತ್ರ ಆತ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುತ್ತಾನೆ.
ನನ್ನ ಸರಿ-ತಪುಗಳನ್ನು ತಿದ್ದಿ, ಉತ್ತಮ ಬದುಕಿಗೆ ನನ್ನನ್ನು ಪರಿಚಯಿಸಿದ ನನ್ನೆಲ್ಲಾ ಗುರುವರ್ಯರಿಗೆ ನನ್ನದೊಂದು ನಮನ.
- ರಕ್ಷಿತಾ ಸಾಲೆತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


