ಕಬಕ ಅರ್ಕ ಶ್ರೀ ಮಹಾದೇವೀ ದೇವಸ್ಥಾನದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ

Upayuktha
0


ಕಾಸರಗೋಡು: ಕಬಕ ಅರ್ಕ ಶ್ರೀ ಮಹಾದೇವೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ) ಕಾಸರಗೋಡು ಇದರ ಸಹಯೋಗದಲ್ಲಿ ಹಾಗೂ ಮನು ಕುಮಾರ್ ಪುತ್ತೂರು ಅವರ ಶಿವಮಣಿ ಕಲಾಸಂಘ ನೇತೃತ್ವದಲ್ಲಿ 126 ನೇ ವೈವಿಧ್ಯಮಯ ನಿತ್ಯನೂತನ ಅತ್ಯಾಕರ್ಷಕ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಜರಗಿತು.


ಕಾರ್ಯಕ್ರಮದಲ್ಲಿ ಕಲಾನಕ್ಷತ್ರಗಳಾದ ಅದ್ವೈತ ರಮಣ, ಶ್ರೀಶ, ಷಷ್ಠಿ, ಸಾನಿಕ, ಬಿಂದು, ಪ್ರಣಮ್ಯ, ಲಿಖಿತಾ, ಲೇಖನ್, ನಂದನ್, ವರ್ಷಾ, ಬಿಂದು, ಸಾನಿಧ್ಯ, ದಿಶಾ, ತೀರ್ಥನ್, ಕೃತ್ವಿಕ್, ದಕ್ಷಾ, ಮಹೇಶ, ನಂದನ್ ಮುಂತಾದ ಕಲಾವಿದರು ಭಾಗವಹಿಸಿ ತಮ್ಮ ಕಲಾಪ್ರದರ್ಶನವನ್ನು ಮೆರೆದು ಜನರ ಪ್ರಶಂಸೆಗೆ ಪಾತ್ರರಾದರು.


ವೇದಿಕೆಯಲ್ಲಿ ಪ್ರಶಾಂತ್ ಪುತ್ತೂರು, ಕೃಷ್ಣಪ್ಪ, ಅಚ್ಯುತ ಭಟ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ದೇವರ ಪ್ರಸಾದ ಕೊಟ್ಟು ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top