ಸೈನಿಕರಿಗೆ ಒಂದು ಸಲಾಂ

Upayuktha
0


ದೇಶ ಎಂದಾಗ ಮೊದಲಿಗರಾಗಿ ಕಾಣುವುದು ನಮ್ಮ ವೀರ ಸೈನಿಕರು. ಇಂತಹ ನೂರಾರು ಸೈನಿಕರು ನಮ್ಮ ಸುತ್ತಮುತ್ತ ಯಾವಾಗಲೂ ಇರುತ್ತಾರೆ. ಇವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡಿ ಭಾರತೀಯರಿಗೆ ಸ್ವಾತಂತ್ರ್ಯವನ್ನು ತಂದುಕೊಟ್ಟವರು. ಅವರಲ್ಲಿ ಭಗತ್ ಸಿಂಗ್,ಗೋಖಲೆ, ಚಂದ್ರಶೇಖರ ಆಜಾದ್ ಮೊದಲಾದವರು ದೇಶಕ್ಕಾಗಿ ಹೋರಾಡಿ ಕೀರ್ತಿಯನ್ನು ತರುವಲ್ಲಿ ಪ್ರಸಿದ್ಧರಾಗಿದ್ಧಾರೆ. ಸೈನಿಕರು ಅದೆಷ್ಟೋ ಶೀತವಾದ ಪ್ರದೇಶದಲ್ಲಿ ಹಗಲು ಇರುಳು ಎನ್ನದೆ ಶತ್ರುಗಳೊಂದಿಗೆ ಹೋರಾಡುತ್ತಾರೆ. ನಮ್ಮ ದೇಶದ ಗಡಿಗಳನ್ನು ಕಾಯುವ ಜೊತೆಗೆ ರಾಷ್ಟ್ರದ ಸುರಕ್ಷತೆಯನ್ನು ಕಾಪಾಡುವ ಮೂಲಕ ಮಹತ್ವದ ಪಾತ್ರ ವಹಿಸುತ್ತಾರೆ. ಇವರು ಕಠಿಣ ತರಬೇತಿ ಶಿಸ್ತು ಮತ್ತು ದೇಶಭಕ್ತಿಯಿಂದ ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸುತ್ತ ದೇಶದ ಗಡಿಗಳನ್ನು ರಕ್ಷಿಸುತ್ತಾರೆ. ತಮ್ಮ ವೈಯುಕ್ತಿಕ ಜೀವನವನ್ನು ತ್ಯಜಿಸಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಲು ಸಿದ್ಧರಿರುತ್ತಾರೆ.


ದೇಶದೊಳಗಿನ ಅಶಿಸ್ತಿನ ನಾಗರಿಕರನ್ನು ನಿಯಂತ್ರಿಸುವುದರ ಮೂಲಕ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದರೊಂದಿಗೆ ಪ್ರತಿಯೊಂದು ದೇಶವು ತನ್ನ ರಕ್ಷಣೆಗಾಗಿ ತನ್ನದೇ ಆದ ಸೈನಿಕರನ್ನು ಹೊಂದಿರುತ್ತದೆ. ಸೈನಿಕನು ದೇಶದ ಅತ್ಯಂತ ಶಿಸ್ತುಬದ್ಧ ಮತ್ತು ನಿಷ್ಠಾವಂತರು. ಸೈನಿಕರು ದೊಡ್ಡ ಅಪಾಯಗಳ ನಡುವೆಯೂ ಗಡಿಗಳಲ್ಲಿ ರಾತ್ರಿಯಿಡೀ ಜಾಗರೂಕನಾಗಿರುವುದರೊಂದಿಗೆ ಅವರು ತನ್ನ ತಾಯ್ನಾಡಿಗಾಗಿ ಧೈರ್ಯದಿಂದ ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾರೆ. ನಮ್ಮ ಯುವ ಉತ್ಸಾಹದ ಸೈನಿಕರು ಹಗಲಿರುಳು ಎನ್ನದೆ ನಮ್ಮ ದೇಶದ ರಕ್ಷಣೆಯನ್ನು ತಮ್ಮ ಮಡದಿ, ಮಕ್ಕಳನ್ನು ಕುಟುಂಬ ಸಂಸಾರವನ್ನು ಮರೆತು ನಮ್ಮೆಲ್ಲರನ್ನು ರಾತ್ರಿ ಹಗಲೆನ್ನದೆ ನಿದ್ದೆ ಆಹಾರವನ್ನು ಗಮನಿಸದೆ ನಮ್ಮ ದೇಶದ ಪ್ರಜೆಗಳೆಲ್ಲಾರನ್ನು ನಿಶ್ಚಿಂತೆಯಿಂದ ನಿದ್ದೆ ಮಾಡುವಂತೆ ಕಾಪಾಡುತ್ತರೆ ಪ್ರತಿಯೊಬ್ಬ ಸೈನಿಕರ ತಾಯಿಯು ಮಗನ ಮರಣದ ನೋವನ್ನು ಬಹಳ ಸಂತೋಷದಿಂದ ವೀರ ಮರಣವನ್ನು ಹೊಂದಿದ್ದಾನೆ ಎಂದು ಗೌರವದಿಂದ ಹೇಳಿಕೊಳ್ಳುತ್ತಾರೆ. ಸೈನಿಕರ ಗುರಿ ದೇಶದ ರಕ್ಷಣೆಯನ್ನು ಮಾಡುವಲ್ಲಿ ಮೊದಲ ಹೆಜ್ಜೆಯಾಗಿದೆ.

                    



- ಶಿವಾನಿ ಕೊಡಂಗಾಯಿ 

ಪ್ರಥಮ ಪತ್ರಿಕೋದ್ಯಮ ವಿಭಾಗ                                    

ವಿವೇಕಾನಂದ ಕಾಲೇಜು ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top