ತೊಟ್ಟೆತ್ತೋಡಿ ಪ್ರೇಮ ಕೆ.ಭಟ್ ಇವರಿಗೆ ನುಡಿನಮನ, ಸಂಗೀತ ಸಮರ್ಪಣೆ

Upayuktha
0


ಪರ್ಕಳ: ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ಶುಕ್ರವಾರ (ಆ.1ರಂದು) ಗಡಿನಾಡಿನ ಧೀರೆ ದಿ. ತೊಟ್ಟೆತ್ತೋಡಿ ಪ್ರೇಮ ಕೆ.ಭಟ್ ಇವರಿಗೆ ನುಡಿನಮನ, ಪುಷ್ಪ ನಮನ ಹಾಗೂ ಸಂಗೀತ ಸಮರ್ಪಣೆಯ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಜರುಗಿತು. ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ಗಣಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.


ರಾಜಾರಾಮ ಮೀಯಪದವು, ಕ.ಸಾ.ಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ, ಡಾ.ಚಂದ್ರಶೇಖರ್ ನುಡಿನಮನ ಸಲ್ಲಿಸಿದರು. ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ ಅವರು ಪ್ರೇಮಾ ಕೆ. ಭಟ್ಟರ ಬಗ್ಗೆ ಬರೆದ ಕವನಗಳನ್ನು ಡಾ. ಎಂ.ಎಸ್. ಮಹೇಶ್ ಹಾಗೂ ಕೆ.ಆರ್. ರಾಘವೇಂದ್ರ ಆಚಾರ್ಯ ಹಾಡಿದರು. 


ನಂತರ ಸಂಸ್ಮರಣಾ ಸಂಗೀತ ಕಛೇರಿಯನ್ನು ಮೈಸೂರಿನ ವಿದ್ವಾನ್ ಎನ್.ಆರ್. ಪ್ರಶಾಂತ್ ನಡೆಸಿಕೊಟ್ಟರು. ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. ಡಾ.ಉದಯಶಂಕರ್ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಉಮಾಶಂಕರಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top