ಯುವಸಮಾಜ ಧರ್ಮವನ್ನು ಸಂರಕ್ಷಿಸಬೇಕು: ಡಾ. ಬೆ.ನಾ ವಿಜಯೀಂದ್ರ ಆಚಾರ್ಯ

Upayuktha
0


ಪುತ್ತೂರು; "ನಮ್ಮಲ್ಲಿರುವ ಭಾವನೆಗಳನ್ನು ಜಾಗೃತವಾಗಿಡಲು ಆಧ್ಯಾತ್ಮಿಕ ಜ್ಞಾನ ಸಹಕಾರಿ. ಕಣ್ಣು, ಕಿವಿ ಮುಂತಾದ ಪಂಚೇಂದ್ರಿಯಗಳಿಗೆ ಅದರದ್ದೇ ಆದ ಮಹತ್ವ ಇದೆ. ಅದರ ಸಮರ್ಥ ಬಳಕೆಯಿಂದ ನಾವು ಪ್ರತಿ ವಿಚಾರಗಳ ಬಗ್ಗೆ ವಿಮರ್ಶೆ ಮಾಡಿ ಮುಂದುವರಿಯಬೇಕು. ಮಾನವರ ಬದುಕು ತಿಳಿಯುವುದಕ್ಕಾಗಿ ಇದೆ" ಎಂದು ಮೈಸೂರು ಅಂಭ್ರಣೀ ಗುರುಕುಲದ ನಿರ್ದೇಶಕ ಡಾ. ಬೆ.ನಾ ವಿಜಯೀಂದ್ರ ಆಚಾರ್ಯ ನುಡಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ  ಸಂಸ್ಕøತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಸಂಸ್ಕೃತ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ಭಾರತಿಯ ಜೀವನ ದರ್ಶನ' ಪ್ರವಚನ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.


"ಭಾರತದಲ್ಲಿ ಜನ್ಮ ಪಡೆದಾಗ ಸ್ವರ್ಗ ಪ್ರಾಪ್ತಿಯ ಫಲ ಎಂಬುದು ನಂಬಿಕೆ. ಸಂಕಷ್ಟದ ಸಂದರ್ಭ ಅದನ್ನು ಪರಿಹರಿಸಿ ಮೇಲೇಳುವ ದೇಶ ಇದು.  ಹೀಗಿರುವ ದೇಶದಲ್ಲಿ ಯುವ ಸಮಾಜ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಬೇಕು" ಎಂದರು.


ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಮಾತುಗಳನ್ನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ " ತರಗತಿಯಲ್ಲಿ ಪಡೆದುಕೊಂಡ ಜ್ಞಾನವೂ ಅತೀ  ಮುಖ್ಯವಾಗಿರುತ್ತದೆ. ಇದರ ಜೊತೆಗೆ ಹಿರಿಯರು ಹೇಳಿದ ಮಾತುಗಳನ್ನು ಬದುಕಿನಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕು " ಎಂದರು.


ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ಡಾ. ಬೆ.ನಾ ವಿಜಯೀಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತ ಸಂಘದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ, ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಯಂ.ಕೆ ಸ್ವಾಗತಿಸಿ ಸಂಸ್ಕೃತ ಸಂಘದ ಅಧ್ಯಕ್ಷೆ ಪ್ರಣತಿ.ಕೆ ವಂದಿಸಿದರು. ಸಂಸ್ಕೃತ ಸಂಘದ ಜೊತೆ ಕಾರ್ಯದರ್ಶಿ ಅನಘ್ರ್ಯಾ.ಜಿ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top