ಮತ ಕಳ್ಳತನ ಎಂದರೇನು? ಚುನಾವಣೆ ಹೊಸ್ತಿಲಲ್ಲಿ ಏನಿದು ಕಾಂಗ್ರೆಸ್ ಹುಯಿಲು?

Upayuktha
0

 



ತ್ತೀಚಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಹೊಸದೊಂದು ಪದಪ್ರಯೇೂಗ ಹುಟ್ಟಿಕೊಂಡು ದೇಶವ್ಯಾಪಿಯಾಗಿ ಬಹು ಚರ್ಚೆಗೆ ಗ್ರಾಸವಾಗುತ್ತಿದೆ. "ಮತ ಕಳ್ಳತನ" ಅನ್ನುವುದರ ಸರಿಯಾದ ಅರ್ಥವೇನು? ಅನ್ನುವುದನ್ನು ಮೊದಲು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಆಗ ಮಾತ್ರ ಇದರ ಹುಟ್ಟು ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸ್ವಷ್ಟವಾಗಿ ಚರ್ಚೆ ಮಾಡಬಹುದು.


ಮತಗಳ್ಳತನವೆಂದರೆ ಯಾರದೊ ಹೆಸರಿನಲ್ಲಿ ಇರುವ ಮತವನ್ನು ಇನ್ನೊಬ್ಬ ವ್ಯಕ್ತಿ ಮತ ಚಲಾಯಿಸಿದರೆ ಆಗ ಅ ಮತವನ್ನು ಕದ್ದು ಮತ ಚಲಾಯಿಸಿದ್ದಾನೆ ಅಂತ ಪರಿಗಣಿಸಲಾಗುತ್ತದೆ. ಈ ಮತಗಳ್ಳತನ ನಡೆಯುವುದು ಹೊಸತೇನೂ ಅಲ್ಲ. ಅದಕ್ಕಾಗಿಯೇ ಕೆಲವೊಂದು ತಿದ್ದುಪಡಿ ಮಾಡಿ ಚುನಾವಣಾ ಮತಗಟ್ಟೆಯಲ್ಲಿ "ಟೆಂಡರ್ ವೇೂಟ್" ಚಾಲೆಂಜ್ ವೇೂಟು. "ಅನ್ನುವ ಅಂಶವನ್ನು ಸೇರಿಸಿಕೊಂಡಿದ್ದೇವೆ. ಮತ ಕಳ್ಳತನವೊ ಮತಗಟ್ಟೆಯಲ್ಲಿ ನಡೆಯುವ ಕೆಲವೊಂದು ದೇೂಷಗಳು ಸುಮಾರು ಏಳು ದಶಕಗಳ ಹಿಂದಿನಿಂದಲೂ ನಡೆದ ಬಂದ ಉದಾಹರಣೆಗಳು ನಮ್ಮ ಮುಂದಿದೆ. ಇದು 2014ರ ಚುನಾವಣೆಯ ಅನಂತರದಲ್ಲಿ ಬಂದ ಹೊಸ ಸಮಸ್ಯೆಯೇನು ಅಲ್ಲ.


ಇಲ್ಲಿ ಇಂತಹ ಅನೇಕ ಸಮಸ್ಯೆಗಳು ಎಲ್ಲಾ ಕಾಲದ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ನಾವು ನೇೂಡಿದ್ದೇವೆ. ಹಾಗಾಗಿ ಚುನಾವಣೆಯಲ್ಲಿ ಸೇೂತವರು ಗೆದ್ದವರ ಮೇಲೆ ಇಂತಹ ದೇೂಷಾರೇೂಪ ಮಾಡುವುದಕ್ಕಿಂತ ಮತದಾರರ ಪಟ್ಟಿಯನ್ನು ದೇೂಷರಹಿತವಾಗಿ ಪರಿಷ್ಕರಣೆ ಮಾಡಬೇಕು ಅನ್ನುವ ಬೇಡಿಕೆ ಚುನಾವಣಾ ಆಯೇೂಗಕ್ಕೆ ಸಲ್ಲಿಸುವ ಅಭಿಯಾನ ಪ್ರಾರಂಭ ಮಾಡಿದರೆ ಅದಕ್ಕೊಂದು ಮನ್ನಣೆ ಸಿಗಬಹುದು. ಎಲ್ಲೊ ಒಂದೆರಡು ಮತ ಚಲಾವಣೆಯಲ್ಲಿರುವ ದೇೂಷಗಳನ್ನು ಹಿಡಿದುಕೊಂಡು ಹೇೂರಾಟ ಮಾಡುತ್ತೇವೆ ಅಂದರೆ ಅದಕ್ಕೆ ಯಾರು ಬೆಲೆಕೊಡಲಾರರು.  ಮಾತ್ರವಲ್ಲ, ಚುನಾವಣಾ ಆಯೇೂಗ ಕೂಡಾ ಗಂಭೀರವಾಗಿ ಸ್ವೀಕರಿಸುವುದು ಕಷ್ಟ. ಇದೊಂದು ಬಾಲಿಶವಾದ ಆಪಾದನೆಯಾದೀತು.


ಹಾಗಾದರೆ ಚುನಾವಣೆಯಲ್ಲಿ ಗೆದ್ದ ಆಡಳಿತ ಪಕ್ಷಗಳು ಕೇಳಬಹುದು. ನೀವು ಗೆದ್ದ ಚುನಾವಣಾ ಕ್ಷೇತ್ರಗಳಲ್ಲಿ ಅತ್ಯಂತ ಪಾರದರ್ಶಕವಾಗಿ ಮತಚಲಾವಣೆಯಾಗಿದೆಯಾ ಅಂತ ಸ್ವಾಭಾವಿಕವಾಗಿ ಪ್ರಶ್ನೆ ಕೇಳಬಹುದು. ಇದರಲ್ಲಿ ತಪ್ಪೇನು ಇದೆ?


ಈ ದೇಶದ ಪ್ರಜೆಗಳು ಅಲ್ಲದ ಅದೆಷ್ಟೋ ಮಂದಿ ವಲಸೆ ಬಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡು ಮತಚಲಾವಣೆಯ ಹಕ್ಕು ಪಡೆದುಕೊಂಡವರು ನಿಜಕ್ಕೂ ಕಳ್ಳ ಮತದಾರರೆಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹೇೂರಾಟ ಶುರು ಮಾಡಿದರೆ ಪ್ರತಿಯೊಬ್ಬ ಮತದಾರರ ಪಕ್ಷ ಮೀರಿ ಬೆಂಬಲಿಸಲೇಬೇಕು. ಇದು ಇಂದಿನ ಪ್ರಮುಖ ಬೇಡಿಕೆ. ಈ ನಿಟ್ಟಿನಲ್ಲಿ ಚುನಾವಣಾ ಆಯೇೂಗ ಮುಂದಾಗ ಬೇಕಾದ ಅನಿವಾರ್ಯತೆ ಇದೆ.


ಪ್ರಮುಖ ಸ್ಥಾನದಲ್ಲಿರುವವರು ಚುನಾವಣೆಯ ಪವಿತ್ರವಾದ ಕೆಲಸಕ್ಕೆ ಮಸಿ ಬಳಿಯು ಕೆಲಸವನ್ನು ಖಂಡಿತವಾಗಿಯೂ ಮಾಡಬಾರದು. ತಾವು ಕೂಡಾ ಇದೇ ಚುನಾವಣಾ ಆಯೇೂಗ ನಡೆಸಿದ ಚುನಾವಣೆಯಲ್ಲಿ ಗೆದ್ದು ಬಂದು ಲೇೂಕಸಭೆ ಮತ್ತು ವಿಧಾನ ಸಭೆಯಲ್ಲಿ ಕೂತು ಸವಲತ್ತುಗಳನ್ನು ಅನುಭೇೂಗಿಸುತ್ತಿದ್ದೀರಿ ಅನ್ನುವುದನ್ನು ಮರೆಯಬಾರದು. ಹಾಗಾದರೆ ತಮ್ಮ ಗೆದ್ದ ಸ್ಥಾನಗಳಿಗೆ ಮೊದಲು ರಾಜೀನಾಮೆ ನೀಡಿ ಬೀದಿ ಹೇೂರಾಟಕ್ಕೆ ಮುಂದಾಗಬೇಕು. ಇದು ನಿಜವಾಗಿಯೂ ಚುನಾವಣಾ ಪ್ರಕ್ರಿಯೆ ಶುದ್ಧಗೊಳಿಸುವ ಮೊದಲ ಹೆಜ್ಜೆಯಾಗಬಹುದು. ಇದಕ್ಕೆ ತಾವು ಸಿದ್ದರಿದ್ದೀರಾ? ಅನ್ನುವ ಪ್ರಶ್ನೆಯನ್ನು ಪ್ರಬುದ್ಧ ಮತದಾರರ ಕೇಳುವ ಮೊದಲ ಪ್ರಶ್ನೆ.


ಮತದಾರರ ಪಟ್ಟಿಯನ್ನು ಬಹು ಪರಿಷ್ಕೃತವಾಗಿ ರೂಪಿಸಿಕೊಂಡಾಗ ಮಾತ್ರ ಇಂತಹ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದೇ ಹೊರತು ಪೂರ್ತಿಯಾಗಿ ದೇೂಷ ತಡೆಯಲು ಸಾಧ್ಯವಿಲ್ಲ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಅನ್ನಿಸಿಕೊಂಡ ಭಾರತದಲ್ಲಿ ಸರಿ ಸುಮಾರು 97 ಕೇೂಟಿಗೂ ಮಿಕ್ಕಿದ ಮತದಾರರಿದ್ದಾರೆ. ಹಾಗಾಗಿ ಇದು ಸುಲಭದ ಕೆಲಸವಲ್ಲ. ಹಾಗಾಗಿ ಮತದಾರರ ಪಟ್ಟಿಯ ಶುದ್ಧೀಕರಣ ಕೆಲಸಕ್ಕೆ ಮೊದಲು ಕೈ ಹಾಕಿ. ಇದು ಬಿಟ್ಟರೆ ಬೇರೇನೂ ದಾರಿ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರಕಾರಗಳ ಮತ್ತು ಎಲ್ಲಾ ಪಕ್ಷಗಳ ಜವಾಬ್ದಾರಿಯೂ ಇದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೇೂಗಕ್ಕೆ ಸಹಕಾರಿಯಾಗಿ ನಿಲ್ಲಬೇಕು. ಈ ದಿಕ್ಕಿನಲ್ಲಿ ಗಂಭೀರವಾದ ಚರ್ಚೆ  ನಡೆಯಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top