ವರದಾಮೂಲದಲ್ಲಿ ವಿವೇಕ ಜಾಗೃತ ಯೋಗಾರೋಗ್ಯ ಕಾರ್ಯಕ್ರಮ

Upayuktha
0


ತ್ಯಾಗರ್ತಿ: ಆಧುನಿಕತೆಯ ಸೋಗಿನಲ್ಲಿ ನಮ್ಮತನವನ್ನು ಕಳೆದುಕೊಂಡರೆ ನೆಮ್ಮದಿಯನ್ನು ಹುಡುಕಲು ಸಾಧ್ಯವಿಲ್ಲ ಎಂದು ಸರ್ವಕ್ಷೇಮ ಆಸ್ಪತ್ರೆ ಸಂಶೋಧನಾ ಪ್ರತಿಷ್ಠಾನದ ವೈದ್ಯ ಡಾ ಮಾಧವ ಪೈ ಹೇಳಿದರು.

 

ಸಾಗರ ತಾಲೂಕಿನ ವರದಾಮೂಲದ ಸಭಾಭವನದಲ್ಲಿ ವಿವೇಕ ಜಾಗೃತ ಬಳಗ ಸಾಗರ ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಸರ್ವಕ್ಷೇಮ ಆಸ್ಪತ್ರೆ, ಸಂಶೋಧನಾ ಪ್ರತಿಷ್ಠಾನ ಯೋಗಬನ ಮೂಡಗಿಳಿಯಾರು ಇವರ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಯೋಗಾರೋಗ್ಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.


ಮನುಷ್ಯರಲ್ಲಿ ಮೂವತ್ತು ವರ್ಷಗಳ ನಂತರ ದೇಹದ ಬೆಳವಣಿಗೆಯಲ್ಲಿ ಬದಲಾವಣೆ ಆಗುತ್ತದೆ. ಅದರಂತೆ ಅಹಾರ ಪದ್ಧತಿಯೂ ಬದಲಾಗಬೇಕು. ನಿಯಮಿತವಾಗಿ ಉಪವಾಸ, ಸಾತ್ವಿಕ ಆಹಾರ, ಕರ್ತವ್ಯ ಪ್ರಜ್ಞೆ, ಸುಪ್ತ ಮನಸ್ಸು, ಪ್ರಾಮಾಣಿಕ ಸೇವೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಪ್ರತಿಯೊಬ್ಬರೂ ನ್ಯಾಯಯುತ ಜೀವನ ಕ್ರಮವನ್ನು ಅನುಸರಿಸಿ ಜ್ಞಾನವನ್ನು ಹಂಚಿಕೊಳ್ಳಬೇಕು. ಜಗತ್ತಿನ ಎಲ್ಲಾ ಆರೋಗ್ಯ ಪದ್ಧತಿಳಲ್ಲಿ ಶ್ರೇಷ್ಠ ಮತ್ತು ನಿಕೃಷ್ಟ ಅಂಶಗಳನ್ನು ಕಾಣಬಹುದು. ಇತ್ತೀಚೆಗೆ ಹಣಕ್ಕೋಸ್ಕರ ಜೀವನ ಶೈಲಿಯಲ್ಲಿ ಬದಲಾವಣೆ ಆಗಿದೆ ನಮ್ಮ ಮೂಲ ಜೀವನ ಪದ್ಧತಿಯಲ್ಲಿ ಆರೋಗ್ಯಕರವಾದ ಅಂಶಗಳನ್ನು ಕಾಣಬಹುದು ಎಂದು ಹೇಳಿದರು.


ವಿವೇಕ ಜಾಗೃತ ಬಳಗದ ಪ್ರಮುಖರಾದ ಹೆಚ್ ಶಿವಪ್ಪ ಮಾತನಾಡಿ, ವಿವೇಕಾನಂದರ ಆದರ್ಶಗಳನ್ನು ಇಟ್ಟುಕೊಂಡು ಜಗತ್ತಿನಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಎಲ್ಲರೂ ಸಂತೋಷದಿಂದ ಇರಬೇಕು ಈ ನಿಟ್ಟಿನಲ್ಲಿ ವಿವೇಕ ಜಾಗೃತ ಬಳಗ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.


ವಿವೇಕ ಜಾಗೃತ ಬಳಗದ ಅಧ್ಯಕ್ಷ ಎನ್ ಕೆ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವಿವೇಕ ಜಾಗೃತ ಬಳಗದ ಪ್ರಮುಖರಾದ ಭಾಗ್ಯ ದೀಕ್ಷಿತ್, ಭಾರತಿ, ಶಾಂತಿ ಹೆಗಡೆ, ವಿವೇಕ ಜಾಗೃತ ಬಳಗದ ಚತುರ ಸೇವಕ ಅಧಿಕಾರಿ ರವೀಂದ್ರ, ಪರಶುರಾಮ, ಚಂದ್ರಶೇಖರ, ಸ್ಮಿತಾ, ವಶಂ ಗುರುದತ್ತ ಶರ್ಮ ಇನ್ನಿತರರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top