ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದಲ್ಲಿ ವನಮಹೋತ್ಸವ, ಸಸಿ ವಿತರಣೆ

Upayuktha
0


ಉಳ್ಳಾಲ: ತೌಡುಗೋಳಿ ಶ್ರೀ ದುರ್ಗಾ ದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಭಾನುವಾರ (ಆ.10) ವನಮಹೋತ್ಸವ ಹಾಗೂ ಸಸಿ ವಿತರಣೆ ನಡೆಯಿತು, 


ಮುಖ್ಯ ಅತಿಥಿಗಳಾಗಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಆಗಮಿಸಿದ ಭಕ್ತರಿಗೆ ಮಾಡಿ ಮಾತನಾಡುತ್ತಾ, ಗಿಡ ನೆಟ್ಟು ಬಿಡಬಾರದು. ಅದನ್ನು ಪೋಷಣೆ ಮಾಡಿದರೆ ಅದು ಮುಂದೆ ಹೆಮ್ಮರವಾಗಿ ಬೆಳೆದು ಫಲ ಕೊಡುತ್ತದೆ, ನಮಗೆ ನೆರಳು ಕೊಡುತ್ತದೆ. ಮನುಷ್ಯನಿಗೆ ಉಸಿರಾಡಲು ಸ್ವಚ್ಛ ಗಾಳಿಕೊಡುತ್ತದೆ. ಈ ಕ್ಷೇತ್ರ  ಪರಿಸರ ಕಾಳಜಿಯೊಂದಿಗೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. 


ಮುಖ್ಯ ಅತಿಥಿಗಳಾಗಿದ್ದ ಹರೀಶ್ ಇರಾ ಮಾತನಾಡಿ, ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಜೊತೆಗೆ ಪರಿಸರ ಕಾಳಜಿಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. 


ಈ ಸಂದರ್ಭ ಯಕ್ಷಗಾನ ಕಲಾವಿದ ಆನಂದ ಎಸ್ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಗೋವಿಂದ ಗುರುಸ್ವಾಮಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಬಳಿಕ ಜೀರ್ಣೋದ್ದಾರ ಸಮಿತಿ ಸಭೆ ನಡೆಯಿತು. 


ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್ ತೌಡುಗೋಳಿ ಪ್ರಸ್ತಾವನೆ ಮಾಡಿ  ಸ್ವಾಗತಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top