ವಿ.ಕೃ.ಗೋಕಾಕರ ಕೃತಿಗಳು ವಿಶ್ವಮಾನವ ಮೌಲ್ಯಗಳನ್ನು ತುಂಬಿವೆ: ಡಾ. ಮಾಧವ ಎಂ.ಕೆ

Upayuktha
0


ಮಂಗಳೂರು: ಮನುಷ್ಯ ಸಂಘ ಜೀವಿ. ಭಾಷೆಯ ಬಳಕೆಯ ಮೂಲಕ ಆಟ ತನ್ನ ಕುಟುಂಬ ಸಮುದಾಯ ಸಮಾಜವನ್ನು ಬೆಳೆಸುತ್ತಾ ಹೋಗುತ್ತಾನೆ. ಅಂತಹ ಭಾಷೆಯೇ ಸಾಹಿತ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರೀಯ ಕಾರ್ಯಕಾರಿ ಸಮಿತಿ ಬೆಂಗಳೂರು ಇದರ ಸದಸ್ಯರಾದ ಡಾ. ಮಾಧವ ಎಂ.ಕೆ ತಿಳಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಮಿಲಾಗ್ರಿಸ್ ಕಾಲೇಜು ಮಂಗಳೂರು ಇದರ ಸಹಯೋಗದೊಂದಿಗೆ ಇಂದು ಕಾಲೇಜು ಸಭಾಂಗಣದಲ್ಲಿ ನಡೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನಾಯಕ ಕೃಷ್ಣ ಗೋಕಾಕರ ಕವಿ ಕಾವ್ಯ ಸಾಹಿತ್ಯ ಪರಂಪರೆ ಪರಿಚಯ ಮಾಲಿಕೆ 5 ಕಾರ್ಯಕ್ರಮದಲ್ಲಿ ಮಾತನಾಡಿದರು.


ವಿ.ಕೃ.ಗೋಕಾಕರ ಕೃತಿಗಳು ವಿಶ್ವಮಾನವ ಮೌಲ್ಯಗಳನ್ನು ತುಂಬಿಕೊಂಡಿವೆ. ಕನ್ನಡಿಗರಾಗಿ ಹುಟ್ಟಿ ಭಾರತೀಯರಾಗಿ ಬೆಳೆದರು. ಕನ್ನಡದಷ್ಟೆ ಇಂಗ್ಲಿಷ್‌ನಲ್ಲೂ ಅವರಿಗೆ ಹಿಡಿತವಿತ್ತು. ಹೊಸ ದೃಷ್ಟಿಕೋನದ ಅದ್ಭುತ ಶಕ್ತಿ ಅವರಿಗಿತ್ತು ಎಂದರು.


ಪ್ರಾಂಶುಪಾಲರಾದ ರೆ. ಡಾ. ಆಲ್ವಿನ್ ಸೆರಾವೊ ಮಾತನಾಡಿ, ವಿದ್ಯಾರ್ಥಿಗಳು ಓದಿನ ಮೂಲಕ ಕಲ್ಪನಾ ಶಕ್ತಿಯನ್ನು ಹೆಚ್ಚಿಸಬಹುದು. ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಕೃತಿಗಳು ನಮಗೆ ಮಾದರಿಯಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಮತ್ತೆ ಮತ್ತೆ ನೆನಪಿಸುವ ಕಾರ್ಯಕ್ರಮಗಳು ನಡೆಯುತ್ತಿದೆ. ಈ ವರ್ಷ ನಾವು ವಿ.ಕೃ ಗೋಕಾಕರ ಕುರಿತ ಸರಣಿ ಉಪನ್ಯಾಸ ಮಾಲಿಕೆಯನ್ನು ಮಾಡುತ್ತಿದ್ದೇವೆ ಎಂದರು.


ಕಾರ್ಯಕ್ರಮದಲ್ಲಿ ಭಾಷಾ ವಿಭಾಗದ ಮುಖ್ಯಸ್ಥರಾದ ಸೌಮ್ಯ ಕೋಟ್ಯಾನ್ ಸ್ವಾಗತಿಸಿದರು. ಉಪನ್ಯಾಸಕಿ ಮಮತಾ ಶೆಟ್ಟಿ ವಂದಿಸಿದರು.



Post a Comment

0 Comments
Post a Comment (0)
Advt Slider:
To Top