ಎಸ್.ಡಿ.ಎಂ. ಕಾಲೇಜು NSS ಘಟಕ ನಾಯಕರ ಆಯ್ಕೆ

Chandrashekhara Kulamarva
0



ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಪ್ರಸಕ್ತ ವರ್ಷದ ವಿದ್ಯಾರ್ಥಿ ನಾಯಕರ ಆಯ್ಕೆ ಇತ್ತೀಚೆಗೆ ನಡೆಯಿತು. ಘಟಕ ಒಂದರ ನಾಯಕರಾಗಿ ನೆವಿಲ್ ನವೀನ್ ಮೋರಸ್ (ದ್ವಿತೀಯ ಬಿಎ) ಮತ್ತು ಮಾನ್ಯ ಕೆ.ಆರ್. (ದ್ವಿತೀಯ ಬಿಕಾಂ) ಹಾಗೂ ಘಟಕ ಎರಡರ ನಾಯಕರಾಗಿ ಟಿ. ಸುದರ್ಶನ್ ನಾಯಕ್ (ದ್ವಿತೀಯ ಬಿಕಾಂ) ಮತ್ತು ರಕ್ಷಾ ಆರ್. ದೇವಾಡಿಗ (ದ್ವಿತೀಯ ಬಿಸಿಎ) ಆಯ್ಕೆಗೊಂಡಿದ್ದಾರೆ.


“ಕಾಲೇಜಿನಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 200 ಸ್ವಯಂಸೇವಕರು ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಳೆದ 53 ವರ್ಷಗಳಿಂದ ನಮ್ಮ ಎನ್ನೆಸ್ಸೆಸ್ ಘಟಕಗಳು ವಿಭಿನ್ನ ಕಾರ್ಯ ಮತ್ತು ಸೇವಾ ಚಟುವಟಿಕೆಗಳಿಂದ ತಾಲೂಕು ಮತ್ತು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಮನ್ನಣೆಯೊಂದಿಗೆ ಪುರಸ್ಕೃತಗೊಂಡಿವೆ. ವಿದ್ಯಾರ್ಥಿ ನಾಯಕರಿಗೆ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಶುಭ ಹಾರೈಸಿದ್ದಾರೆ” ಎಂದು ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top