ಕಲಿಕೆ ಎನ್ನುವುದು ಮುಗಿಯದ ಅಧ್ಯಾಯ: ದಿನೇಶ್ ಶೆಟ್ಟಿ ಕಾವಳಕಟ್ಟೆ

Upayuktha
0


ಉಜಿರೆ: ಪುರಾಣದಿಂದಲೂ ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯ ಪ್ರಮುಖ ಭಾಗವಾಗಿದೆ.ಹಾಗಾಗಿ ಕಲಿಕೆ ಎನ್ನುವುದು ತಕ್ಷಣಕ್ಕೆ ಮುಗಿಯುವುದಲ್ಲ ಅದೊಂದು ಮುಗಿಯದ ಅಧ್ಯಾಯ ಎಂದು ಖ್ಯಾತ ಯಕ್ಷಗಾನ ಕಲಾವಿದ, ವಾಗ್ಮಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಅಭಿಪ್ರಾಯಪಟ್ಟರು.


ಉಜಿರೆ ಶ್ರೀ ಧ.ಮಂ. ಕಾಲೇಜಿನ ಕಲಾ ಕೇಂದ್ರದಲ್ಲಿ  ಆಯೋಜಿಸಲಾಗಿದ್ದ ಯಕ್ಷಗಾನದ ನೂತನ ರಂಗಸ್ಥಳದ ಚೌಕಟ್ಟು ಉದ್ಘಾಟನೆ ಕಾರ್ಯಕ್ರಮ ಮತ್ತು "ವಿಶ್ವಮಾನವ ಶ್ರೀ ರಾಮಚಂದ್ರ" ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. 


ಚರಿತ್ರೆಯ ಪುಟದಲ್ಲಿ ಒಂದು ಮಗುವಿನಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರ ಬಾಯಲ್ಲೂ ಹರಿದಾಡುವ ಏಕೈಕ ಹೆಸರು ರಾಮ. ರಾಮ ಕೇವಲ ಪುರಾಣ ಮಹಾಕಾವ್ಯದ ವ್ಯಕ್ತಿಯಾಗಿ ಬರಲಿಲ್ಲ ಶಕ್ತಿಯಾಗಿ ಬಂದಿದ್ದಾನೆ ಇದ್ದಕ್ಕೆ ಕಾರಣ ಅವನ ಕಲಿಕೆ. ಕಲಿಕೆ ಎನ್ನುವುದು ಜೀವನದ ಅಂತ್ಯದವರೆಗೂ ಮುಗಿಯದ ಅಧ್ಯಾಯ. ಇದ್ದಕ್ಕೆ ನಮ್ಮ ಮುಂದಿರುವ ನಿದರ್ಶನ ಶ್ರೀರಾಮ ಎಂದರು.

ವಿಶ್ವಮಾನವ ಗುಣಗಳುಳ್ಳ ಶ್ರೀರಾಮನ ಆದರ್ಶಗಳನ್ನು ವಿದ್ಯಾರ್ಥಿಗಳು ವರ್ತಮಾನದಲ್ಲಿ  ರೂಢಿಸಿಕೊಳ್ಳುವ ಅವಶ್ಯಕತೆ ಇದೆ.ಸಧ್ಯ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಹೆಸರು ಮಾಡುವ ಹುನ್ನಾರಗಳು ನಡೆಯುತ್ತಿರುವುದು ಶೋಚನೀಯ. ಪ್ರತಿಯೊಂದು ದೇವಾಲಯವು ಕೂಡ ನಮ್ಮ ಸಮೃದ್ಧ ಹಿಂದು ಸಂಸ್ಕೃತಿಯ ಆಸ್ತಿಗಳು ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನತೆಯ ಮೇಲೆ ಇದೆ ಎಂದರು.


ಧರ್ಮಸ್ಥಳ ಕ್ಷೇತ್ರದ ರೀತಿ ಪ್ರತಿಯೊಂದು ದೇವಾಲಯಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರೆ ಭಾರತ ರಾಮ ರಾಜ್ಯ ಆಗುವುದರಲ್ಲಿ ಅನುಮಾನವಿಲ್ಲ. ಹಿಂದೂ ದೇವಾಲಯಗಳು ಮೇಲೆ ಆಗುತ್ತಿರುವ ಧೋರಣೆಗಳನ್ನು ತಡೆಗಟ್ಟುವಲ್ಲಿ ಯುವಜನತೆ ಶ್ರಮಿಸಬೇಕು. ಎಂದವರು ಕಿವಿಮಾತು ಹೇಳಿದರು.


 ಕಲಾಕೇಂದ್ರದ ಮಾತೃ ಸ್ವರೂಪಿ, ಸೋನಿಯಾ ಯಶೋವರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. "ಬೆಳಗಿದ ದೀಪ ನಿಮ್ಮ ಬಾಳಿಗೆ ಹಾಗೂ ಕಲಾ ಕೇಂದ್ರಕ್ಕೆ ಬೆಳಕಾಗಲಿ ಎಂದು ಹಾರೈಸಿ,ಕಲೆಯನ್ನು ಮೈಗೂಡಿಸಿಕೊಂಡರೆ ಕಾಲೇಜಿನಲ್ಲಿ ಓದಿದ ವಿಷಯಗಳು ಬೇಗ ಅರ್ಥ ಆಗುವುದರ ಜೊತೆಗೆ ಏಕಾಗ್ರತೆ ಹೆಚ್ಚಾಗುತ್ತದೆ.  ನಿಮ್ಮ ಜೀವನದ ಹಾದಿಯಲ್ಲಿ ನಿಮ್ಮ ಬುದ್ದಿ ಯನ್ನು ಬೇರೆಯವರು ನಡೆಸಲು ಬಿಡಬೇಡಿ, ಸರಿ ತಪ್ಪುಗಳನ್ನು ಅರಿತು ವಿಶ್ಲೇಷಿಸಿ ಮುಂದುವರೆದರೆ ಯಶಸ್ಸು ನಿಮ್ಮದಾಗುತ್ತದೆ ಎಂದವರು ಸಲಹೆ ನೀಡಿದರು.


 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ, ನೂತನ ರಂಗಸ್ಥಳವನ್ನು ಉದ್ಘಾಟಿಸಿ ಮಾತನಾಡಿದರು. "ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮೌಲ್ಯಯುತ ಶಿಕ್ಷಣ ಒದಗಿಸುವುದು,ನಮ್ಮ ಕಾಲೇಜಿನ ಅಧ್ಯಕ್ಷರ ಮೂಲ ಆಶಯವಾಗಿದೆ.ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ಗಳು ರಾಷ್ಟ್ರ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಬೇರೆ ಬೇರೆ  ಚಟುವಟಿಕೆಗಳಿವೆ. ಅದರಲ್ಲಿ ಒದಗಿ ಬರುವ ಅವಕಾಶಗಳನ್ನು ಸರಿಯಾಗಿ  ಉಪಯೋಗಿಸಿಕೊಳ್ಳಬೇಕು" ಎಂದರು.


 ಎಲ್ಲಾ ಸವಲತ್ತು ಹಾಗೂ ಅವಕಾಶಗಳನ್ನು ಉಪಯೋಸಿಕೊಂಡರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ.ನಮ್ಮ ಆಸಕ್ತಿ ವಿಚಾರಗಳನ್ನು ನಾವು ಗುರುತಿಸಿಕೊಂಡು, ಶಿಕ್ಷಣದ ಜೊತೆಗೆ ನಮ್ಮ ಆಸಕ್ತಿ ವಿಷಯದಲ್ಲಿ ಮುಂದುವರೆದು ಪರಿಶ್ರಮ ಶ್ರದ್ಧೆಯ ಜೊತೆಗೆ ಆತ್ಮವಿಶ್ವಾಸವನ್ನು ಬೆಳಿಸಿಕೊಳ್ಳಬೇಕು. ಎಂದು ಸಲಹೆ ನೀಡಿದರು.


ಪೂಜ್ಯ ಖಾವಂದರ ಕುರಿತ ಸಾಧನೆ ಹಾಗೂ ಅವರ ಚಿಂತನೆಗಳನ್ನು ಒಳಗೊಂಡಂತಹ ಕಾರ್ಯಕ್ರಮವನ್ನು "ಯಕ್ಷ ದರ್ಶನ" ಎಂಬ ಶೀರ್ಷಿಕೆ ಅಡಿಯಲ್ಲಿ ಹಾಗೂ ಯಕ್ಷಗಾನದ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಯಿತು.

 

ಕಾಲೇಜಿನ ವತಿಯಿಂದ ಯಕ್ಷಗಾನ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸವನ್ನು ವೆಂಕಪ್ಪಯ್ಯ ಸಾಂಸ್ಕೃತಿಕ ಯಕ್ಷಗಾನ ಅಧ್ಯಯನ ಭವನ ಸಿರಿಬಾಗಿಲು ಇಲ್ಲಿಗೆ ಭೇಟಿ ನೀಡಿದ ಅನುಭವಗಳನ್ನು ವಿದ್ಯಾರ್ಥಿಗಳು ಅಮೋಘ ಶಂಕರ್ ಹಾಗೂ ಅನನ್ಯ ಹಂಚಿಕೊಂಡರು.


ವಿದ್ಯಾರ್ಥಿಗಳಿಬ್ಬರು "ಬಾಲ ಗೋಪಾಲ" ಪ್ರಸ್ತುತಿಯನ್ನು ಆಡಿ ತೋರಿಸಿದರು.


ಪ್ರಸ್ತುತ ತಿಂಗಳು  ಅತೀ ಹೆಚ್ಚು ಯಕ್ಷಗಾನ ತರಗತಿಗೆ ಹಾಜರಾದ ವಿದ್ಯಾರ್ಥಿಗಳಾದ ಸ್ಮೃತಿ ಹಾಗೂ ಅನನ್ಯ ರನ್ನು ಗುರುತಿಸಲಾಯಿತು. 


 ಸಾಂಸ್ಕೃತಿಕ ವಿಭಾಗದ  ಮುಖ್ಯಸ್ಥರಾದ ಡಾ. ನಾಗಣ್ಣ, ಯಕ್ಷಗಾನ ತರಬೇತುದಾರ ಅರುಣ್ ಕುಮಾರ್ ಧರ್ಮಸ್ಥಳ, ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ, ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಶ್ರೇಯಸ್ ಪಾಳ್ಯಂದೆ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಸಚಿನ್ ಉಪಸ್ಥಿತರಿದ್ದರು.ಯಕ್ಷಗಾನದ ವಿದ್ಯಾರ್ಥಿಗಳು  ಹಾಗೂ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಯಕ್ಷಗಾನ ವಿದ್ಯಾರ್ಥಿಗಳು ಪ್ರಾರ್ಥಿಸಿ,ತೇಜಸ್ ಸ್ವಾಗತಿಸಿ, ಸಹನಾ ವಂದಿಸಿದರು.ಕಾರ್ಯಕ್ರಮವನ್ನು ಪವಿತ್ರ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top