ಎಂಜಿಎಂ ಕಾಲೇಜಿನ ನಿವೃತ್ತ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು
ಉಡುಪಿ: ಎಂಜಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಅನುಪಮವಾದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಪ್ರೊ ಕೆ. ಹರಿದಾಸ್ ಭಟ್ಟರು ಬುಧವಾರ (ಆ.27) ನಿಧನರಾದರು.
ಹಲವು ಧಾಮಿ೯ಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ ಪ್ರೊ. ಭಟ್ಟರು ಎಂಜಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗವನ್ನು ಕಟ್ಟಿ ಬೆಳೆಸುವುದರಲ್ಲಿ ಅವರ ಸೇವೆ ಅನನ್ಯವಾದದ್ದು.
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಬಿಎಸ್‌ಸಿ ಪದವಿ ಪಡೆದ ಇವರು ಅಂದಿನ ಮೈಸೂರು ವಿ.ವಿ. ಮಟ್ಟದಲ್ಲಿ 7ನೇ ರ್‍ಯಾಂಕ್ ಗಳಿಸಿದ ಕೀರ್ತಿ ಇವರಿಗಿದೆ. ಉನ್ನತ ವ್ಯಾಸಂಗವನ್ನು ಮೈಸೂರು ವಿ.ವಿ.ಯಲ್ಲಿ ಗಳಿಸಿದ ಇವರು ಸ್ನಾತಕೋತ್ತರ ಪದವಿಯಲ್ಲಿ ಕೂಡಾ 3ನೇ ರ್‍ಯಾಂಕ್ ಗಳಿಸಿದ ಹೆಗ್ಗಳಿಕೆ ಪ್ರೊ.ಭಟ್ಟರ ಪಾಲಿಗೆ ಸಂದಿದೆ. ಭೌತಶಾಸ್ತ್ರಕ್ಕೆ ಸಂಬಂಧಿಸಿದ ಕನ್ನಡ ಅವತರಣಿಕೆ ಪುಸ್ತಕ ವಿಶೇಷ ಮಾನ್ಯತೆ ಪಡೆದ ಕೃತಿ ಎಂಬ ಗೌರವ ಪಡೆದಿದೆ. ಅನಂತರದಲ್ಲಿ ತಾನು ಕಲಿತ ಎಂಜಿಎಂ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಸ್ವೀಕರಿಸಿದರು.
ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾರಂಭಿಸಿ ಕಟ್ಟಿ ಬೆಳೆಸುವುದರಲ್ಲಿ ಇವರ ಪಾತ್ರ ಬಹು ಮುಖ್ಯವಾದದ್ದು. ಪ್ರೊ. ಹರಿದಾಸ್ ಭಟ್ಟರು ಕಾಲೇಜಿನ ಸರ್ವಾಂಗೀಣ ಶೈಕ್ಷಣಿಕ ಬೆಳವಣಿಗೆಯಲ್ಲಿ ಇವರ ಸೇವೆ ಅವಿಸ್ಮರಣೀಯ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಪ್ರಾಧ್ಯಾಪಕರು ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ನೆನಪಿಸಿಕೊಂಡು ಸಂತಾಪ ಸೂಚಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ